ಕೃಷಿ ಭಿಜ ಹಾಗೂ ರಸಗೊಬ್ಬರ ಖರೀದಿಗೆ ಬಂದ ರೈತರಿಗೆ ಮಾಸ್ಕ ಮತ್ತು ಸ್ಯಾನಿಟೈಜರ್ ವಿತರಿಸಿದ ಯುಥ್  ಕಾಂಗ್ರೆಸ್ ತಾವರಗೇರಾ ಘಟಕ.

Spread the love

ಕೃಷಿ ಭಿಜ ಹಾಗೂ ರಸಗೊಬ್ಬರ ಖರೀದಿಗೆ ಬಂದ ರೈತರಿಗೆ ಮಾಸ್ಕ ಮತ್ತು ಸ್ಯಾನಿಟೈಜರ್ ವಿತರಿಸಿದ ಯುಥ್  ಕಾಂಗ್ರೆಸ್ ತಾವರಗೇರಾ ಘಟಕ.

ಕೊರೊನಾದ ಮೊದಲನೆ ಅಲೆಗೆ ಹಾಗೂ ಎರಡನೆಯ ಅಲೆಗೆ ಜನರು ತತ್ತರಿಸಿದರು, ಈ ಮುಂಗಾರು ಬೀತ್ತನೆಗೆ ರೈತರು ಭರದಿಂದ ಸಾಗುತ್ತಿದ್ದಾರೆ. ಆದ್ದರಿಂದ ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ರೈತರು ತಾವರಗೇರಾ ಪಟ್ಟಣಕ್ಕೆ ಕೃಷಿ ಬೀಜ ಹಾಗೂ ರಸಗೊಬ್ಬರ ಖರೀದಿಗೆ ದಿನದಿಂದ ದಿನಕ್ಕೆ ಹೆಚ್ಚು ಹೆಚ್ಚು ರೈತರು ಬರುತ್ತಿದ್ದಾರೆ. ಇದನ್ನು ಅರಿತ ತಾವರಗೇರಾ ಪಟ್ಟಣದ ಯುಥ್ ಕಾಂಗ್ರೆಸ್ ಹೋಬಳಿ ಘಟಕದವರು ರೈತ ಸಂಪರ್ಕ ಕೇಂದ್ರಕ್ಕೆ ಹಾಗೂ ರೈತಿಗೆ ಸಂಬಂದಿಸಿದ ಟ್ರೇಂಡಗಳಿಗೆ ರೈತರು ಬಂದು ಕೃಷಿ ಬೀಜ ಹಾಗೂ ರಸಗೊಬ್ಬರ ಖರೀಧಿಸುತ್ತಿದ್ದಾರೆ. ಕೃಷಿ ಬೀಜದಲ್ಲಿ ಹಾಗೂ ರಸಗೊಬ್ಬರದಲ್ಲಿ ನಕಲಿ ಬಂದಿರುತ್ತದೆ ತಾವುಗಳ ಎಚ್ಚರದಿಂದ ಖರೀಧಿಸಿ ಒಂದುವೇಳೆ ಜೊತೆಗೆ ತಾವರಗೇರಾ ಪಟ್ಟಣದಲ್ಲಿ ಇಂದು ಕೃಷಿ ಭಿಜ ಹಾಗೂ ರಸಗೊಬ್ಬರ ಖರೀದಿಗೆ ಬಂದ ರೈತರಿಗೆ ಯುಥ್  ಕಾಂಗ್ರೆಸ್ ಹೋಬಳಿ ಘಟಕದವರು ರೈತರಿಗೆ ತಿಳಿ ಹೇಳುವ ಮೂಲಕ ಸರ್ಕಾರ ರೈತರಿಗೆ ನಾನಾ ರೀತಿಯ ಸೌಲಭ್ಯಗಳು ಕಲ್ಪಿಸಿಕೊಟ್ಟಿದ್ದಾರೆ. ಪ್ರತಿಯೊಬ್ಬ ರೈತರು ಸರ್ಕಾರ ನೀಡಿರುವ ಪ್ರತಿಯೊಂದು ಯೋಜನೆಗಳ ಬಗ್ಗೆ ಲಾಭ ಪಡೆದುಕೊಳ್ಳಿ. ಯಾವುದೇ ಆಮೀಷಕ್ಕೆ ಒಳಗಾಗದೆ ನೇರವಾಗಿ ಕೃಷಿ ಇಲಾಖೆಗೆ ಸಂಪರ್ಕಿಸಿ ಸಂಬಂದಪಟ್ಟ ಮಾಹಿತಿ ಪಡೆದುಕೊಳ್ಳಿ, ಸದ್ಯ ಯಾದಗೀರಿ ಜಿಲ್ಲೆಯಲ್ಲಿ ಕೃಷಿ ನಿರ್ದೇಶಕರು ಹೇಳಿದಾ ಹಾಗೆ ಚೀನಾದವರು ಈ ಕೃಷಿಗೆ ಸಂಬಂಧಿಸಿದ ಕೃಷಿ ಬೀಜಗಳಲ್ಲಿ ಹಾಗೂ ರಸಗೊಬ್ಬರದಲ್ಲಿ ನಕಲಿ ಬರುತ್ತದ್ದು, ರೈತರು ಎಚ್ಚರವಹಿಸಬೇಕೆಂದು ಹೇಳಿದ್ದಾರೆ. ಆದ್ದರಿಂದ ಪ್ರತಿಯೊಬ್ಬ ರೈತರು ಯಾವುದೇ ರಸಗೊಬ್ಬರ ವಿರಲಿ ಅಧರ ಮೇಲೆ ಸರ್ಕಾರ ನಿಯಮದಂತೆ ಐ.ಎಸ್.ಐ. ಮಾರ್ಕ ಪರಿಶೀಲಿಸಿ ತದನಂತರ ಅಧರ ವ್ಯಾಲಿಡೀಟಿ ಪರಿಶೀಲಿಸಿ ಖರೀಧಿಗೆ ಮುಂದಾಗಿ, ಹಾಗೇ ಈ ಸಲ ರೋಹಿಣಿ ಮುಂಗಾರು ಮಳೆ ಚೆನ್ನಾಗಿ ಆಗಿರುವುದರಿಂದ ಹಳ್ಳಿ/ಹಳ್ಳಿಗಳಿಂದ ರೈತರು ಬೀಜ ಹಾಗೂ ಗೊಬ್ಬರ ತರಲು ಬರುತ್ತಿರುವುದನ್ನು  ಗಮನಿಸಿದ ತಾವರಗೇರಾ ಯೂಥ್ ಕಾಂಗ್ರೆಸ್ ಘಟಕದಮ ಪದಾಧಿಕಾರಿಗಳು ರೈತರ ಹಿತಗೋಸ್ಕರ ರೈತರ ಹತ್ತಿರ ಹೋಗಿ, ಕರೋನ ರೋಗದ ಬಗ್ಗೆ ಜಾಗೃತಿ ಮೂಡಿಸಿ ಹಾಗೂ ಎಲ್ಲ ರೈತರಿಗೆ ಮಾಸ್ಕ ವಿತರಣೆ ಹಾಗೂ ಸಾನಿಟೈಜರ್ ನಿಡಿ ಮಾತನಾಡಿದ ಯೂಥ್ ಘಟಕದ ಅಧ್ಯಕ್ಷರಾದ ಪಯಾಜ್ ಬನ್ನು ಹಾಗೂ ಅಂಬ್ರೇಶ್ ಕುಂಬಾರ ನಿವು ಮೋದಲು ಚೆನ್ನಾಗಿ ಇರಬೇಕು ನಿವು ನಕ್ಕರೆ ಜಗವೆಲ್ಲ ಸಕ್ಕರೆ,  ರೈತರೆ ಈ ದೇಶದ ಬೆನ್ನೆಲುಬು ಅದಕ್ಕೋಸ್ಕರ ನಿಮ್ಮ ಆರೋಗ್ಯವೆ  ನಮ್ಮ ಭಾಗ್ಯ ಎಂದು ತಾವರಗೇರಾ ಕಾಂಗ್ರೆಸ್ ಯುಥ್ ಘಟಕದವತಿಯಿಂದ ಪ್ರತಿಯೊಬ್ಬ ರೈತರಿಗೂ ಮಾಸ್ಕ ಮತ್ತು ಸ್ಯಾನಿಟೈಜರ್ ಉಚಿತವಾಗಿ ವಿತರಿಸಿದರು.

  ವರದಿ – ಸಂಪಾದಕೀಯ

Leave a Reply

Your email address will not be published. Required fields are marked *