ಕಾಮ್ರೇಡ್ ಶಿವರಾಂ ಅವರ ಸಂಸ್ಮರಣಾ ದಿನಾಚರಣೆಯನ್ನು ಸಿಪಿಐಎಂಎಲ್ ಪಕ್ಷ ಹಾಗೂ ಶ್ರಮಜೀವಿ, ಎಪಿಎಂಸಿ  ಹಮಾಲರ ಸಂಘ ಟಿಯುಸಿಐ ವತಿಯಿಂದ ಆಚರಿಸಲಾಯಿತು.

Spread the love

ಕಾಮ್ರೇಡ್ ಶಿವರಾಂ ಅವರ ಸಂಸ್ಮರಣಾ ದಿನಾಚರಣೆಯನ್ನು ಸಿಪಿಐಎಂಎಲ್ ಪಕ್ಷ ಹಾಗೂ ಶ್ರಮಜೀವಿ, ಎಪಿಎಂಸಿ  ಹಮಾಲರ ಸಂಘ ಟಿಯುಸಿಐ ವತಿಯಿಂದ ಆಚರಿಸಲಾಯಿತು.

ಸಿಂಧನೂರು ನಗರದ ಎಪಿಎಂಸಿ ಶ್ರಮಿಕ ಭವನದ ಮುಂದೆ ಅಪಾರ ಜನಸ್ತೋಮವನ್ನು ಬಿಟ್ಟು ಅಗಲಿದ ಸಿಪಿಐ ಎಂಎಲ್ ರೆಡ್ ಸ್ಟಾರ್ ಪಕ್ಷದ ಪಾಲಿಟ್ ಬ್ಯೂರೋ ಸದಸ್ಯರು ಹಾಗೂ ಒರಿಸ್ಸಾ ರಾಜ್ಯ ಕಾರ್ಯದರ್ಶಿ ಮತ್ತು ಟಿಯುಸಿಐನ ಕೇಂದ್ರ ಸಮಿತಿ ಸದಸ್ಯರಾದ ಕಾಮ್ರೇಡ್ ಶಿವರಾಂ ಅವರ ಸಂಸ್ಮರಣಾ ದಿನಾಚರಣೆಯನ್ನು ಸಿಪಿಐಎಂಎಲ್ ಪಕ್ಷ ಹಾಗೂ ಶ್ರಮಜೀವಿ ಎಪಿಎಂಸಿ   ಹಮಾಲರ ಸಂಘ ಟಿಯುಸಿಐ ವತಿಯಿಂದ ಆಚರಿಸಲಾಯಿತು. ಶಿವರಾಂ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಕ್ರಾಂತಿಕಾರಿ ಸಂತಾಪಗಳನ್ನು ವ್ಯಕ್ತಪಡಿಸಿ ಮಾತನಾಡಿದ ರಾಜ್ಯ ಸಮಿತಿ ಸದಸ್ಯರಾದ ಎಂ. ಗಂಗಾಧರ ಭುವನೇಶ್ವರ ಮಹಾನಗರದ ಐವತ್ತ್ 7ಕೊಳಗೇರಿಗಳ 5ಲಕ್ಷ ಬಡ ಜನರ ಕಣ್ಮಣಿ ಕಾಮ್ರೇಡ್ ಶಿವರಾಂ ಸಾವು ಇಪ್ಪತ್ತೈದು ದಿನಗಳ ಸತತ ಚಿಕಿತ್ಸೆ ನಂತರ ದಿನಾಂಕ 28.05.2021ರ ಬೆಳಿಗ್ಗೆ ಭುವನೇಶ್ವರದ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆಂದು ಹೇಳಲು ಅತ್ಯಂತ ದುಃಖವಾಗುತ್ತದೆ. 1995ರಲ್ಲಿ ಯುವ ಸಂಗಾತಿ ಪ್ರಮೀಳಾ ಜೊತೆ ಕ್ರಾಂತಿಕಾರಿ ಚಳವಳಿ ಪ್ರವೇಶಿಸಿದ್ದ ಶಿವರಾಂ ಕೋವಿಡ್ ಸೋಂಕು ತಗುಲಿ ಬೆಡ್ ಗೆ ಒರಗುವ ತನಕ ಅರೆಕ್ಷಣವೂ ದಣಿವರಿಯದೆ ಜನರ ವಿಮೋಚನೆಗಾಗಿ ದುಡಿದು ಹೋದರು. ಇವರ ಸಾವು ದೇಶದ ಅದರಲ್ಲೂ ಓರಿಸ್ಸಾ ರಾಜ್ಯದ ಕ್ರಾಂತಿಕಾರಿ ಕಮ್ಯುನಿಸ್ಟ್ ಚಳವಳಿಗೆ ಭಾರೀ ನಷ್ಟ ತಂದಿದೆ. ಕಾರ್ಪೊರೇಟ್ ಪ್ಯಾಸಿಸ್ಟ್ ದುರಾಡಳಿತದ ವಿರುದ್ಧ ಸುತ್ತುವರೆದು ತೊಡೆ ತಟ್ಟುವ ಅಖಾಡದಲ್ಲಿ ಶಿವರಾಮರಂತಹ ಸಂಗಾತಿಗಳು ಅತ್ಯಂತ ಅನಿವಾರ್ಯವಾಗುತ್ತಾರೆ. ಮರೆಯದ ಸಂಗಾತಿ ಶಿವರಾಂ ಸಾವು ಅವರ ತಾಳ್ಮೆ, ಸಂಘಟನಾ ಚತುರತೆ, ಸರಳಜೀವನ, ದುಡಿಯುವ ಜನರೊಂದಿಗಿನ ತಾಯ್ತನದ ಒಡನಾಟಗಳು ಹಳೆಯ ಹಾಗೂ ಹೊಸ ತಲೆಮಾರಿನ ಕಮೂನಿಸ್ಟ್ ಚಳವಳಿಗಾರರಿಗೆ ಅಮೂಲ್ಯವಾದ ಮಾದರಿಗಳಾಗಿವೆ ಎಂದರು. ಈ ಸಂದರ್ಭದಲ್ಲಿ ಪಕ್ಷದ ತಾಲ್ಲೂಕು ಕಾರ್ಯದರ್ಶಿಯಾದ ಮಾಬುಸಾಬ್ ಬೆಳ್ಳಟ್ಟಿ, ಶ್ರಮಜೀವಿ ಎಪಿಎಂಸಿ ಹಮಾಲರ ಸಂಘದ ಕಾರ್ಯದರ್ಶಿಯಾದ ಹೆಚ್.ಆರ್.ಹೊಸ್ಮನಿ,ಉಪಾಧ್ಯಕ್ಷರಾದ ನಾಗಪ್ಪ ಉಮಲೂಟಿ ಬಾಷಾಸಾಬ್ ರಮೇಶ್ ಮದಾರಸಾಬ್ ಶರಣಬಸವ ಲಕ್ಷ್ಮಿ ಗೀತಾ ನಾಗಮ್ಮ ಸೇರಿದಂತೆ ಇನ್ನಿತರರು ಶಿವರಾಮ್ ರವರ ಸಂಸ್ಮರಣಾ ದಿನಾಚರಣೆಯಲ್ಲಿ ಭಾಗವಹಿಸಿ ಕೆಂಪುಹೂವಿನ ಪುಷ್ಪಾರ್ಚನೆ ಮಾಡಿ ಕ್ರಾಂತಿಕಾರಿ ಸಂತಾಪಗಳನ್ನು ಸಲ್ಲಿಸಿದರು. ಕೊನೆಗೆ ಲಾಲ್ ಸಲಾಂ ಕಾಮ್ರೇಡ್ ಶಿವರಾಂ ! ನಿಮ್ಮ ಕನಸು ನನಸಾಗಿಸಲು ಮುಂದಾಗುತ್ತೇವೆ ! ಕಮ್ಯುನಿಸ್ಟ್ ಸೋಗಿನ ಆಳುವ ವರ್ಗದ ಬಾಲಂಗೋಚಿಗಳನ್ನು ಬಗ್ಗು ಬಡಿಯುತ್ತೇವೆ ! ಮಾರ್ಕ್ಸ್ ವಾದ ಲೆನಿನ್ ವಾದ ಮಾವೋ ವಿಚಾರಧಾರೆಯ ಚಿರಾಯುವಾಗಲಿ ! ಇನ್ಕ್ವಿಲಾಬ್ ಜಿಂದಾಬಾದ್ ! ಎಂಬ ಘೋಷಣೆಗಳನ್ನು ಕೂಗಲಾಯಿತು. ಮಾಬುಸಾಬ ಬೆಳ್ಳಟ್ಟಿ ತಾಲೂಕಾ ಕಾರ್ಯದರ್ಶಿ ಸಿಪಿಐ ಎಂಎಲ್ ರೆಡ್ ಸ್ಟಾರ್.

  ವರದಿ – ಸಂಪಾದಕೀಯ

Leave a Reply

Your email address will not be published. Required fields are marked *