ಹೆಮ್ಮೆಯ ಪ್ರಧಾನಿ ನರೇಂದ್ರ ಮೋಧಿ ಅವರ 7ವರ್ಷಗಳ ಸಾರ್ಥಕ ಆಡಳಿತದ ಸವಿನೆನಪಿಗಾಗಿ ಹೂವು ಹಣ್ಣಿನ ಸಸಿಗಳನ್ನು ನೆಟ್ಟು ನೀರೆರೆದ ಸಚಿವ ಡಾ.ನಾರಾಯಣಗೌಡ.

Spread the love

ಹೆಮ್ಮೆಯ ಪ್ರಧಾನಿ ನರೇಂದ್ರ ಮೋಧಿ ಅವರ 7ವರ್ಷಗಳ ಸಾರ್ಥಕ ಆಡಳಿತದ ಸವಿನೆನಪಿಗಾಗಿ ಹೂವು ಹಣ್ಣಿನ ಸಸಿಗಳನ್ನು ನೆಟ್ಟು ನೀರೆರೆದ ಸಚಿವ ಡಾ.ನಾರಾಯಣಗೌಡ.

ಭಾರತ ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋಧಿ ಅವರ 7ವರ್ಷಗಳ ಸಾರ್ಥಕ ಆಡಳಿತದ ಸವಿನೆನಪಿಗಾಗಿ ಹೂವು ಹಣ್ಣಿನ ಸಸಿಗಳನ್ನು ನೆಟ್ಟು ನೀರೆರೆದ ಸಚಿವ ಡಾ.ನಾರಾಯಣಗೌಡ. ಕೋವಿಡ್ ಲಾಕ್ ಡೌನ್ ಹಿನ್ನೆಲೆಯಲ್ಲಿ ಸಂಕಷ್ಠದಲ್ಲಿರುವ ಆಟೋ, ಟ್ಯಾಕ್ಸಿ ಚಾಲಕರು ಸೇರಿದಂತೆ ಕೂಲಿ ಕಾರ್ಮಿಕರಿಗೆ 10ಸಾವಿರ ಫುಡ್ ಕಿಟ್ ಗಳ ವಿತರಣಾ ಕಾರ್ಯಕ್ಕೆ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಡಾ.ನಾರಾಯಣಗೌಡರು ಚಾಲನೆ ನೀಡಿದರು.  ಪಟ್ಟಣದ ನಂಜಮ್ಮ ಮುದ್ದೇಗೌಡ ಸಮುದಾಯ ಭವನದಲ್ಲಿ ಪ್ಯಾಕಿಂಗ್ ಮಾಡಿಸಿ ತಯಾರಾಗುತ್ತಿರುವ ಫುಡ್ ಕಿಟ್ ಗಳ ವಿತರಣಾ ಕಾರ್ಯಕ್ಕೆ ಚಾಲನೆ ನೀಡಿ ನಾರಾಯಣಗೌಡ ಮಾತನಾಡಿದರು . ವಿಶ್ವವೇ ಮೆಚ್ಚುವಂತೆ ಯಾವುದೇ ಹಗರಣಗಳಿಲ್ಲದಂತಹ ದಕ್ಷ ಪ್ರಾಮಾಣಿಕ ಹಾಗೂ ಅಭಿವೃದ್ಧಿಗೆ ಪೂರಕವಾದ ಆಡಳಿತ ನಡೆಸುತ್ತಿರುವ ಭಾರತ ದೇಶದ ಹೆಮ್ಮೆಯ ಪ್ರಧಾನಮಂತ್ರಿಗಳಾದ ನರೇಂದ್ರ ಮೋಧಿಯವರಿಗೆ ಸಚಿವ ನಾರಾಯಣಗೌಡ ಧನ್ಯವಾದಗಳನ್ನು ಸಮರ್ಪಿಸಿದರು.. ಕೋವಿಡ್ ಸಂಕಷ್ಠದ ಸಮಯದಲ್ಲಿಯೂ ರಾಷ್ಟ್ರವನ್ನು ಸಮರ್ಥವಾದ ಆಡಳಿತ ನೀಡುತ್ತಿರುವ ಮೋಧಿಯವರು 7ವರ್ಷಗಳ ಆಡಳಿತವನ್ನು ಸಂಪೂರ್ಣಗೊಳಿಸಿ ರಾಷ್ಟ್ರದ ಜನತೆಯ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಎಂದು ಅಭಿಮಾನದಿಂದ ಹೇಳಿದರು. ಇದೇ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು 7 ವರ್ಷಗಳ ಸಮರ್ಥ ಆಡಳಿತ ಸಂಪೂರ್ಣಗೊಳಿಸಿದ ಸವಿನೆನಪಿಗಾಗಿ ಹಣ್ಣು ಮತ್ತು ಹೂವಿನ ಗಿಡಗಳನ್ನು ನೆಟ್ಟು ನೀರೆರೆದರು. ಜಿಲ್ಲಾ ಬಿಜೆಪಿ ಘಟಕದ ವತಿಯಿಂದ ಈಗಾಗಲೇ 25 ಸಾವಿರ ಮೆಡಿಕಲ್ ಕಿಟ್ ಗಳನ್ನು ವಿತರಿಸಲಾಗಿದೆ. ಆಹಾರ ವಸ್ತುಗಳ ದಿನಸಿ ಕಿಟ್ ಗಳನ್ನು ಅರ್ಹರಿಗೆ ವಿತರಿಸುವಂತೆ ಸಚಿವ ನಾರಾಯಣಗೌಡ ಮನವಿ ಮಾಡಿದರು. ಈ ಸಂದರ್ಭದಲ್ಲಿ ಮಂಡ್ಯ ಜಿಲ್ಲಾ ಬಿಜೆಪಿ ಅಧ್ಯಕ್ಷ ಕೆ.ಜೆ.ವಿಜಯಕುಮಾರ್, ಮೂಡಾ ಅಧ್ಯಕ್ಷ ಕೆ.ಶ್ರೀನಿವಾಸ್, ಮಂಡ್ಯ ಜಿಲ್ಲಾ ಹಾಲುಒಕ್ಕೂಟದ ನಿರ್ದೇಶಕ ಕೆ.ಜಿ.ತಮ್ಮಣ್ಣ, ತಾಲ್ಲೂಕು ಬಿಜೆಪಿ ಅಧ್ಯಕ್ಷ ಪರಮೇಶ್ ಅರವಿಂದ್, ಮಹಿಳಾ ಘಟಕದ ಅಧ್ಯಕ್ಷೆ ಲತಾಮುರಳಿ, ನಗರ ಮಹಿಳಾ ಅಧ್ಯಕ್ಷೆ ಚಂದ್ರಕಲಾ ರಮೇಶ್, ಚೋಕನಹಳ್ಳಿ ಪ್ರಕಾಶ್, ರವಿಶಿವಕುಮಾರ್, ರಾಜು, ಸಾರಂಗಿನಾಗರಾಜು, ಸಚಿವರ ಆಪ್ತಸಹಾಯಕರಾದ ದಯಾನಂದ, ಕಿಕ್ಕೇರಿಕುಮಾರ್, ಹೊಸಹೊಳಲು ಮಂಜುನಾಥ್, ಸಂತೋಷ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು…

ವರದಿ.ಡಾ.ಕೆ.ಆರ್.ನೀಲಕಂಠ. ಕೃಷ್ಣರಾಜಪೇಟೆ. ಮಂಡ್ಯ

Leave a Reply

Your email address will not be published. Required fields are marked *