ಕೊಪ್ಪಳ ಜಿಲ್ಲಾಡಳಿತದಿಂದ ಮತ್ತೆ ಎಳು ದಿನ  ಸಂಪೂರ್ಣ ಲಾಕ್, ಜಿಲ್ಲೆಯ ಸಾರ್ವಜನಿಕರು ಶಾಕ್

Spread the love

ಕೊಪ್ಪಳ ಜಿಲ್ಲಾಡಳಿತದಿಂದ ಮತ್ತೆ ಎಳು ದಿನ  ಸಂಪೂರ್ಣ ಲಾಕ್, ಜಿಲ್ಲೆಯ ಸಾರ್ವಜನಿಕರು ಶಾಕ್.

ರಾಜ್ಯಾದ್ಯಂತ ಕೋರೊನ ಮಹಾಮಾರಿ ವಿರುದ್ಧ ಸರ್ಕಾರ ಜೂನ್ 7 ರ ವರೆಗೆ ಲಾಕಡೌನ್ ಘೋಷಣೆ ಮಾಡಿದೆ. ಆದರೆ ನಮ್ಮ ಕೊಪ್ಪಳ  ಜಿಲ್ಲಾಡಳಿತ ಒಂದು ಹೆಜ್ಜೆ ಮುಂದೆ ಸಾಗಿ ಸಂಪೂರ್ಣವಾಗಿ 23 ರಿಂದ 31 ರವರೆಗೆ ಅಗತ್ಯ ವಸ್ತುಗಳಿಗೆ ಖರೀದಿಗೆ ಅವಕಾಶ ನಿಡದೆ  ಇಡಿ ಜಿಲ್ಲೆಯನ್ನೆ ಸಂಪೂರ್ಣ ಲಾಕ್ ಮಾಡಿತ್ತು. ಸಾರ್ವಜನಿಕರು ಸಂಪೂರ್ಣ ಸತತ ಏಳು ದಿನಗಳ ಕಾಲ ಮನೆಯಲ್ಲಿ ಇರುವ ಅಲ್ಪ, ಸ್ವಲ್ಪ ಕಿರಾಣಿ ಅಗತ್ಯ ವಸ್ತುಗಳನ್ನು  ಬಳಸಿ ಜೀವನ ನೆಡೆಸಿ ಜಿಲ್ಲಾಡಳಿತ ನಿಡಿರುವ ಸಂಪೂರ್ಣ ಲಾಕಡೌನ್ ಗೆ ಸಹಕಾರ ನಿಡಿದ್ದಾರೆ, ಏಳು ದಿನದ  ಸಂಪೂರ್ಣ ಲಾಕಡೌನ್ ಇಂದಿಗೆ ಮುಗಿದಿದ್ದು, ಮುಂದಿನ ಬಾಕಿ ಇರುವ ಏಳು ದಿನಗಳ ಲಾಕಡೌನ್ ಗೆ ಬೇಕಾಗುವ ಅಗತ್ಯ ವಸ್ತುಗಳನ್ನು ಕಿರಾಣಿ ಖರೀದಿಸಲು  ಸೋಮವಾರ ಬೆಳಿಗ್ಗೆ 10 ಘಂಟೆಯವರೆಗೆ ಅವಕಾಶ ಸಿಗುತ್ತೆ ಎಂದು ಕಾದು ಕುಳಿತಿದ್ದ ಸಾರ್ವಜನಿಕರಿಗೆ ಸದ್ಯ ಬಿಗ್ ಶಾಕ್ ನೀಡಿದೆ. ಜಿಲ್ಲಾಡಳಿತ  ನಾಳೆ 31 ರಿಂದ ಜೂನ್ 7 ರ ವರೆಗೆ ಸಂಪೂರ್ಣ ಲಾಕಡೌನ್ ಘೋಷಣೆ ಮಾಡಿ ದುಡಿದು ತಿನ್ನುವ ಬಡ ವರ್ಗದವರ ಹೊಟ್ಟೆ ಮೇಲೆ ಬರೆ ಎಳದಂತಾಗಿದೆ. ಕೊಪ್ಪಳ ಜಿಲ್ಲಾಡಳಿತ ನಿಡಿರುವ ಆದೇಶವನ್ನು ಪರಿಶೀಲಿಸಿ, ಹಾಗೆ ಬೇರೆ ಎಲ್ಲಾ ಜಿಲ್ಲೆಗಳಲ್ಲಿ ವಾರದಲ್ಲಿ ಎರಡು ದಿನಗಳಕಾಲ ಅಗತ್ಯ ವಸ್ತುಗಳನ್ನು ಖರೀದಿಸಲು ಅವಕಾಶ ಕಲ್ಪಿಸಿದಂತೆ, ನಮ್ಮ ಜಿಲ್ಲೆಯಲ್ಲಿ ಕೂಡ ಅವಕಾಶ ಕಲ್ಪಿಸಿ ಕೊಟ್ಟು ಸಾರ್ವಜನಿಕರ ಜೀವನ ಅಸ್ತವ್ಯಸ್ಥ ಹಾಗದಂತೆ ನೊಡಿಕೊಳ್ಳಬೇಕು ಎಂದು ಕೊಪ್ಪಳ ಜಿಲ್ಲೆಯ ಸಾರ್ವಜನಿಕರ ಅಭಿಪ್ರಾಯ ವಾಗಿದೆ. ಆದರೂ ಇಂತಹ ಕಠೀಣ ದಿಮಾನಗಳಲ್ಲಿ ದಿಟ್ಟ ನಿರ್ಧಾರ ತಗೆದುಕೊಂಡಿದ್ದು ಒಂದು ರೀತಿಯ ಒಳ್ಳೆಯ ವಿಚಾರವೆ ಎಂಬುವುದು ಪ್ರಜ್ಞಾವಂತರ ಮಾತಾಗಿದೆ.

ವರದಿ – ಅಮಾಜಪ್ಪ ಹೆಚ್.ಜುಮಾಲಾಪೂರ.

Leave a Reply

Your email address will not be published. Required fields are marked *