ತಾವರಗೇರಾ ಪಟ್ಟಣದಲ್ ಶ್ರೀವರದ ಮಲ್ಲಿಕಾರ್ಜುನ ಶಂಕರಲಿಂಗೇಶ್ವರರ ಪ್ರತಿ ವರ್ಷದ ಯಾತ್ರಾ ವಾರ್ಷಿಕೋತ್ಸವ ಸಮಾರಂಭ.

Spread the love

ತಾವರಗೇರಾ ಪಟ್ಟಣದಲ್ ಶ್ರೀವರದ ಮಲ್ಲಿಕಾರ್ಜುನ ಶಂಕರಲಿಂಗೇಶ್ವರರ ಪ್ರತಿ ವರ್ಷದ ಯಾತ್ರಾ ವಾರ್ಷಿಕೋತ್ಸವ ಸಮಾರಂಭ.

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದ ಪೂಜ ಶ್ರೀ ರುದ್ರಯ್ಯ ತಾತನವರ ಹಿರೇಮಠದಲ್ಲಿರುವ ಶ್ರೀವರದ ಮಲ್ಲಿಕಾರ್ಜುನ ಶಂಕರಲಿಂಗೇಶ್ವ ದೇವಸ್ಥಾನದಲ್ಲಿ  ಪ್ರತಿ ವರ್ಷದಂತೆ ನಡೆಯುವ ಯಾತ್ರಾ ವಾರ್ಷಿಕೋತ್ಸವ ಸಮಾರಂಭವನ್ನು ಸಂಕ್ಷಿಪ್ತವಾಗಿ ಶಿವನಿಗೆ ಅಭಿಷೇಕ ಮಾಡಿ ಕಳಸಾರೋಹಣ ಮಾಡಲಾಯಿತು. ಕಾರಣ ರಾಜ್ಯದಲ್ಲಿ ಈ ಮಹಾಮಾರಿ ಕರೋನಾದ ರೋಗಕ್ಕೆ ಜನರು ತತ್ತರಿಸುತ್ತಿದ್ದು, ಈ ಕೊರೊನಾದ ಅಬ್ಬರಕ್ಕೆ ಜಗತ್ತೆ ತಲ್ಲಣಗೊಂಡಿದೆ. ಹಾಗಾಗಿ ಪ್ರತಿ ವರ್ಷದಂತೆ ನಡೆಯುವ ಶ್ರೀವರದ ಮಲ್ಲಿಕಾರ್ಜುನ ಶಂಕರಲಿಂಗೇಶ್ವ ದೇವಸ್ಥಾನ ಯಾತ್ರಾ ವಾರ್ಷಿಕೋತ್ಸವ ಸಮಾರಂಭವನ್ನು ನಿಮಿತ್ಯ ಸಂಕ್ಷಿಪ್ತವಾಗಿ ಶಿವನಿಗೆ ಅಭಿಷೇಕ ಮಾಡಿ ಕಳಸಾರೋಹಣ ಮಾಡಲಾಯಿತು. ಹಾಗೆ ಈ ಕೋರೋನಾ ಮಹಾಮಾರಿ ರೋಗವು  ಅತ್ಯಂತ ವೇಗದಲ್ಲಿ ಹರಡುವದರಿಂದ  ಜನರು ಹೆಚ್ಚೆತ್ತು ಕೊಂಡು,  ಪ್ರತಿಯೊಬ್ಬರು ಮಾಸ್ಕ ಧರಿಸಿ ಸಾಮಾಜಿಕ ಅಂತರ ಕಾಪಾಡಿ ಕೊಳ್ಳಬೇಕು,  ಯಾರು ಈ ರೋಗ ಬಂದಿದೆ ಎಂದು ಆತಂಕ ಪಟ್ಟು ದೃತಿಗೆಡದೆ ಧೈರ್ಯದಿಂದ ಆರೋಗ್ಯ ಇಲಾಖೆಯ ನಿಯಮದಂತೆ ಎಲ್ಲರೂ ಪಾಲನೆ ಮಾಡಬೇಕು. ಮೊದಲು ಜೀವ ತದನಂತರ ಜೀವನ ಅನ್ನುವುದು ಎಲ್ಲರೂ ಅರಿತು ಕೊಳ್ಳಬೇಕು, ಸಕಲ ಸಮೃದ್ದಿಯನ್ನು ದಯಪಾಲಿಸಿ ಎಲ್ಲಾರನ್ನೂ ಈ ನಾಡನ್ನು ಕಾಪಾಡು ಎಂದು ಪ್ರಾರ್ಥಿಸಲಾಯಿತು. ಸರ್ವೇ ಜನ ಸುಖಿನೋ ಭವಂತು ಧರ್ಮೋ ರಕ್ಷತಿ ರಕ್ಷತಃಹ ಧರ್ಮಸಮೃದ್ದಿ ಭವ ಆದರ್ಮ‍ ನಾಶ ಹೋ ಎಂದು ಶ್ರೀಮಠದ ಕಿರಿಯ ಶ್ರೀಗಳಾದ ಪೂಜ್ಯ ಶ್ರೀ ಮಹೇಶ್ವರ ತಾತನವರು, ಶರಣರು, ಶಿವಯೋಗಿಗಳು ನಮ್ಮ ತಾವರಗೇರಾ ನ್ಯೂಸ್ ಪತ್ರಿಕಾ ಬಳಗಕ್ಕೆ ತಿಳಿಸಿದರು.

ವರದಿ – ಸಂಪಾದಕೀಯ

Leave a Reply

Your email address will not be published. Required fields are marked *