ಹದಿನಾಲ್ಕು ವರ್ಷದ ನಂತರ ಮರಳಿ ಮನೆಗೆ ಬಂದ ಮಗ, ಕುಷ್ಟಗಿ ತಾಲೂಕಿನ ಜುಮಾಲಾಪೂರ ಗ್ರಾಮದ ಯುವಕ.

Spread the love

ಹದಿನಾಲ್ಕು ವರ್ಷದ ನಂತರ ಮರಳಿ ಮನೆಗೆ ಬಂದ ಮಗ, ಕುಷ್ಟಗಿ ತಾಲೂಕಿನ ಜುಮಾಲಾಪೂರ ಗ್ರಾಮದ ಯುವಕ.

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಜುಮಲಾಪುರ ಗ್ರಾಮದಲ್ಲಿ ಹದಿನಾಲ್ಕು ವರ್ಷದ ನಂತರ ಮರಳಿ ಮನೆಗೆ ಬಂದ ಮಗ. ತಾಯಿ ತನ್ನ ಮಡಲಲ್ಲಿ ಒಂಭತ್ತು ತಿಂಗಳು ಹೆತ್ತು ಸಾಕಿ ಸಲುವಿ ಬೆಳಸಿದ ತಾಯಿಯ ಕನಸ್ಸು ನೆನಸಾದ ಕಥೆ ಇದು. ಮಗನು ಸುಮಾರು ವರ್ಷಗಳಿಂದ ಆಕಾಶ್ಮೀಕವಾಗಿ ತಂದೆಯವರಿಂದ ಊರು ಬಿಟ್ಟೋದ ಘಟನೆ ಇದು. ಈ ಕೊರೊನಾದ ಮೋದಲನೆ ಅಲೆಯಿಂದ ಹಾಗೂ ಎರನೆ ಅಲೆಯಿಂದ ಜನರು ತತ್ತರಿಸಿ ಹೋಗಿದ್ದಾರೆ. ಇದರ ನಡು ನಡುವೆಯು ಸುಮಾರು 14 ವರ್ಷಗಳಿಂದ ಕಳೆದ ಮಗ ಇಂದು ಏಕಾಏಕಿಯಾಗಿ ಮರಳಿ ಮನೆಗೆ ಬಂದಿರುವುದು ತಂದೆ/ತಾಯಿಗಳಿಗೆ ಸಂತೋಷದ ಕಂಬನಿ ಸಾಗರವೆ ಹರಿದಿದೆ. ಮರಳಿ ಊರಿಗೆ ಬಂದಿರುವ ಸುದ್ದಿ ಕೆಳಿದ ತಕ್ಷಣ ಊರಿನ ಜನರೆಲ್ಲರೂ ಒಂದು ಕ್ಷಣ ಮೌನವಾಗಿರುವುದು ಆಶ್ಚರ್ಯವಾಗಿ  ಜನರಲ್ಲಿ ಸಂತೋಷದ ಸಾಗರವೇ ಹರಿದಂತಿದೆ. ಹದಿನಾಲ್ಕು ವರ್ಷಗಳ ನಂತರ ಯುವಕನನ್ನು ಊರಿನ ಗ್ರಾಮಸ್ಥರು ಯಾರು ಕೂಡಾ ಗುರುತು ಹಿಡಿಯಲು ಸಾದ್ಯವಾಗಲಿಲ್ಲ. ತದನಂತರ ಆ ಯುವಕನೆ ಗ್ರಾಮಸ್ಥರಿಗೂ ಹಾಗೂ ಕುಟುಂಬದವರಿಗೂ ತನ್ನ ಪರಿಚಯ ಮಾಡಿಕೊಟ್ಟ ತಕ್ಷಣ ಒಂದು ಕ್ಷಣ ಮೌನ ವಿಸ್ಮಕವಾಗಿದ್ದಾರೆ. ಹದಿನಾಲ್ಕು ವರ್ಷಗಳ ಹಿಂದೆ ಪಾರ್ವತಮ್ಮ ಗಂ ಗುರುಬಸಪ್ಪ ಎಂಬುವವರಿಗೆ ಇಬ್ಬರು ಹೆಣ್ಣು ಮಕ್ಕಳು, ಇವನು ಒಬ್ಬನೇ ಮಗ ಚಿಕ್ಕವನು, ಆ ಯುವಕನ ಹೆಸರು ದೇವರಾಜ. ಅಂದು ಈ ಯುವಕ ಊರು ಬಿಟ್ಟವನು. ಇವನ ಬರುವಿಕೆಗಾಗಿ 1 ವರ್ಷ ಎರಡು ವರ್ಷ ಹೀಗೆ ಸುಮಾರು ವರ್ಷ ಗತಿಸಿದರು ಮತ್ತೆ ಇವನು ಬರಲೆ ಇಲ್ಲ. ಈ ಕುಟುಂಬದವರು ಪ್ರತಿ ದಿನ/ ಪ್ರತಿ ಕ್ಷಣಕ್ಕೂ ಎಲ್ಲೆಂದರಲ್ಲಿ ಹುಡುಕಿ ಹುಡುಕಿ ಪತ್ತೆ ಹಚ್ಚುವ ಪ್ರಯತ್ನ ಮಾಡಿದರು ಮಗ ಇರುವದು ಸುಳಿವೇ ಸಿಗಲಿಲ್ಲ, ಒಬ್ಬನೇ ಮಗ ಸಿಗದೇ ಇರುವುದು ಆ ತಾಯಿಯು ಸಾಗರದಷ್ಟು  ನೋವನ್ನು ಮತ್ತೊಬ್ಬರ ಮಕ್ಕಳನ್ನು ನೋಡಿ ಆ ನೋವಿನ ಭಾರವನ್ನು ಕಡಿಮೆ ಮಾಡಿಕೊಳ್ಳುತಿತ್ತು. ಆ ಜೀವ ಹಿಂದಿನ ಕಾಲದಲ್ಲಿ  ನಡೆದ ಮಹಾಭಾರತದ ಕಥೆಯಂತೆ  ಪಂಚ ಪಾಂಡವರು ವನವಾಸ ಹೋಗಿ ಬಂದಂತೆ, ಈ ಯುವಕನು ವನವಾಸಕ್ಕೆ ಹೋಗಿ ಬಂದಂತೆ ಇದೆ. ಏನೆ ಆಗಲಿ ಮಗ ಮರಳಿ ಬಂದಿರುವುದು ತಂದೆ ತಾಯಿಗಳಿಗೆ ಹಾಗೂ ಊರಿನ ಸಾರ್ವಜನಿಕರಿಗೆ ಸಂತೋಷದ ಸಾಗರವೆ ಹರಿದಿದೆ.

  ವರದಿ – ಅಮಾಜಪ್ಪ ಹೆಚ್.ಜುಮಾಲಾಪೂರ.

Leave a Reply

Your email address will not be published. Required fields are marked *