ಕೋವಿಡ್ ನಿಂದ ಪಾಲಕರನ್ನು ಕಳೆದುಕೊಂಡ ಮಕ್ಕಳಿಗೆ 3ಲಕ್ಷ ರೂ ಪರಿಹಾರ. ಉಚಿತ ಶಿಕ್ಷಣ.

Spread the love

ಕೋವಿಡ್ ನಿಂದ ಪಾಲಕರನ್ನು ಕಳೆದುಕೊಂಡ ಮಕ್ಕಳಿಗೆ 3ಲಕ್ಷ ರೂ ಪರಿಹಾರ. ಉಚಿತ ಶಿಕ್ಷಣ.

  ತಿರುವನಂತಪುರಂ : ರಾಜ್ಯದಲ್ಲಿ ಕೊವಿಡ್​ 19 ಸೋಂಕಿನಿಂದ ಪಾಲಕರನ್ನು ಕಳೆದುಕೊಂಡು ಅನಾಥರಾದ ಮಕ್ಕಳಿಗೆ ಒಂದು ಬಾರಿಗೆ 3 ಲಕ್ಷ ರೂ.ಪರಿಹಾರ ನೀಡಲಾಗುವುದು. ಹಾಗೇ 18ವರ್ಷ ತುಂಬುವವರೆಗೆ ಪ್ರತಿ ತಿಂಗಳೂ 2000 ರೂ. ಕೊಡಲಾಗುವುದು. ಹಾಗೇ ಅವರ ಪದವಿಯವರೆಗಿನ ಶಿಕ್ಷಣದ ವೆಚ್ಚವನ್ನೂ ಸರ್ಕಾರವೇ ಭರಿಸಲಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.

ಕೊವಿಡ್​ 19 ಎರಡನೇ ಅಲೆಯಲ್ಲಿ ಅದೆಷ್ಟೋ ಮಕ್ಕಳ ಪಾಲಕರು ಸೋಂಕಿಗೆ ಬಲಿಯಾಗಿದ್ದಾರೆ. ಸದ್ಯ ಆ ಮಕ್ಕಳೆಲ್ಲ ತಮ್ಮ ಕುಟುಂಬದವರೊಂದಿಗೆ ವಾಸವಾಗಿದ್ದಾರೆ. ಹೀಗೆ ಅನಾಥರಾದ ಮಕ್ಕಳ ಬಗ್ಗೆ ಕಾಳಜಿ ವಹಿಸಿ ಅವರ ಶಿಕ್ಷಣದ ಖರ್ಚು ವೆಚ್ಚಗಳು ರಾಜ್ಯ ಸರಕಾರ ಭರಿಸಲಿದೆ. ಸದ್ಯ ಕೇರಳದಲ್ಲಿ 10 ಕ್ಕೂ ಹೆಚ್ವು ಮಕ್ಕಳು ತಂದೆ – ತಾಯಿಗಳನ್ನು ಕಳೆದುಕೊಂಡಿದ್ದಾರೆ ಎಂದು ವಿವರಿಸಿದರು. ಪ್ರತಿಯೊಂದು ರಾಜ್ಯದಲ್ಲಿ ಹಲವಾರು ಯೋಜನೆಗಳು ಹಮ್ಮಿಕೊಂಡಿದ್ದ ಸರ್ಕಾರ, ನಮ್ಮ ಕರ್ನಾಟಕ ಸರ್ಕಾರ ಯಾಕೆ ಹೀಗೆ ಸುಮ್ನೇ ಕುಳಿತಿದೆ ಎಂಬುಹುದು ಪ್ರಜ್ಞವಂತರ ಪ್ರಶ್ನೆಯಾಗಿದೆ.

ವರದಿ – ಸಂಪಾದಕೀಯ

Leave a Reply

Your email address will not be published. Required fields are marked *