ಕೊಪ್ಪಳ : ಕೆಲ ರೈಲುಗಳು ವಿಸ್ತರಿಸುವುದು ಹಾಗೂ ಇತರೆ ಬೇಡಿಕೆಗಳ ಸೇರಿದಂತೆ ಜಿಲ್ಲಾ ಕೇಂದ್ರ ಕೊಪ್ಪಳ ರೈಲ್ವೆ ನಿಲ್ದಾಣದ ಮೂಲಕ ಬೆಂಗಳೂರು ಮತ್ತು ವಿವಿಧ ಮಾರ್ಗಗಳಿಗೆ ಹೊಸ ರೈಲುಗಳನ್ನು ಪ್ರಾರಂಭಿಸುವಂತೆ ಸಂಸದ ಕೆ.ರಾಜಶೇಖರ ಬಿ.ಹಿಟ್ನಾಳ ಅವರಿಗೆ ರೈಲ್ವೆ ಜನಪರ ಹೋರಾಟ ಸಮಿತಿ ಮುಖಂಡರು ಚರ್ಚಿಸಿ ಮನವಿ ಸಲ್ಲಿಸಿದರು. ನಗರದ ಜಿಲ್ಲಾ ಆಡಳಿತ ಭವನದಲ್ಲಿರುವ ಕೊಪ್ಪಳ ಲೋಕಸಭಾ ಸದಸ್ಯರ ಕಾರ್ಯಾಲಯದಲ್ಲಿ ರೈಲ್ವೆ ಜನಪರ ಹೋರಾಟ ಸಮಿತಿಯ ಗೌರವಾಧ್ಯಕ್ಷ ಅಲ್ಲಮ ಪ್ರಭು ಬೆಟ್ಟದೂರು. ಅಧ್ಯಕ್ಷ ಎಸ್.ಎ.ಗಫಾರ್. ಪ್ರಧಾನ ಕಾರ್ಯದರ್ಶಿ ಮಖಬೂಲ್ ರಾಯಚೂರು. ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸಂಚಾಲಕ ಬಸವರಾಜ್ ಶೀಲವಂತರ್. ನಾಗರಿಕ ಹಕ್ಕುಗಳ ಹೋರಾಟ ಸಮಿತಿ (ಪಿಯುಸಿಎಲ್)ಜಿಲ್ಲಾ ಘಟಕದ ಮುಖಂಡ ಮಹಾಂತೇಶ್ ಕೊತಬಾಳ.ಗೌಸ್ ನೀಲಿ.ಶಿವಪ್ಪ ಹಡಪದ್. ಗಾಳೆಪ್ಪ ಮುಂಗೋಲಿ. ಮುತ್ತು ಹಡಪದ್ ಮುಂತಾದವರ ನಿಯೋಗ ಸಂಸದ ಕೆ. ರಾಜಶೇಖರ್ ಬಿ. ಹಿಟ್ನಾಳ ಅವರೊಂದಿಗೆ ಈ ಭಾಗದ ಜನರ ಬೇಡಿಕೆಗಳನ್ನು ಈಡೇರಿಸುವಂತೆ ಸವಿಸ್ತಾರವಾಗಿ ವಿವರಿಸಿದರು. ಸಂಖ್ಯೆ : 56519/56520 ಬೆಂಗಳೂರು ಹೊಸಪೇಟೆ ಬೆಂಗಳೂರು ಈ ರೈಲನ್ನು ಹೊಸಪೇಟೆಯಿಂದ ಮುನಿರಾಬಾದ್ ಗಿಣಿಗೇರಾ ಕೊಪ್ಪಳ ಭಾಣಾಪುರ ತಳಕಲ್ ಜಂಕ್ಷನ್ ಮೂಲಕ ಕುಕನೂರು ಯಲಬುರ್ಗಾ ಕುಷ್ಟಗಿವರೆಗೆ ವಿಸ್ತರಿಸಬೇಕು.ಹುಬ್ಬಳ್ಳಿಯಿಂದ ಬೀದರಿಗೆ ಇಂಟರ್ ಸಿಟಿ ರೈಲು (ವಾಯ: ಗದಗ, ಕೊಪ್ಪಳ, ಹೊಸಪೇಟೆ,ಬಳ್ಳಾರಿ. ಗುಂತಕಲ್.ಮಂತ್ರಾಲಯ ರೋಡ್.ರಾಯಚೂರು, ಯಾದಗಿರಿ. ಕಲಬುರಗಿ), ಮಾರ್ಗವಾಗಿ ನಿತ್ಯ ಬೀದರಿಗೆ ಹೊಸ ರೈಲು ಪ್ರಾರಂಭಿಸುವುದರಿಂದ ಮುಂಬೈ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕದ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸಿದಂತಾಗುತ್ತದೆ.ನಿತ್ಯ ಬೆಳಿಗ್ಗೆ 8.30 ಕ್ಕೆ ಬಳ್ಳಾರಿಯಿಂದ ಹುಬ್ಬಳ್ಳಿಗೆ. ಮಧ್ಯಾಹ್ನ 2:30ಕ್ಕೆ ಹುಬ್ಬಳ್ಳಿಯಿಂದ ಬಳ್ಳಾರಿಗೆ ಹೊಸದಾಗಿ ಡೆಮೋ ಪ್ಯಾಸೆಂಜರ್ ರೈಲನ್ನು ಪ್ರಾರಂಭಿಸಬೇಕು.
ಸಂಖ್ಯೆ: 16545/16546 ಯಶವಂತಪುರದಿಂದ ಸಿಂಧನೂರು. ಸಿಂಧನೂರುದಿಂದ ಯಶವಂತಪುರ. ಈ ರೈಲು ಗಿಣಿಗೇರಾ ರೈಲ್ವೆ ನಿಲ್ದಾಣದಿಂದ 10 ಕಿ.ಮೀ ಅಂತರದಲ್ಲಿರುವ ಜಿಲ್ಲಾ ಕೇಂದ್ರ ಕೊಪ್ಪಳ ರೈಲ್ವೆ ನಿಲ್ದಾಣಕ್ಕೆ ಬಂದು ಹೋಗಬೇಕು.ಸಂಖ್ಯೆ 17391/ ಬೆಂಗಳೂರು.ಸಿಂಧನೂರು,17392 ಸಿಂಧನೂರು ಬೆಂಗಳೂರು ಈ ರೈಲನ್ನು ಹುಬ್ಬಳ್ಳಿಯಿಂದ ಸಿಂಧನೂರವರೆಗೂ ವಿಸ್ತರಣೆ ಮಾಡಿ ಶೀಘ್ರದಲ್ಲೇ ಪ್ರಾರಂಭಿಸಬೇಕು.2016ರಲ್ಲಿ (ಆಲಮಟ್ಟಿ, ಕೊಪ್ಪಳ. ಚಿತ್ರದುರ್ಗ.! ಈ ಹೊಸ ಮಾರ್ಗ ಸರ್ವೇ ಆಗಿದ್ದು, ಹೆಚ್ಚಿನ ಅನುದಾನ ಒದಗಿಸಿದರೆ, ಬಿಜಾಪುರದಿಂದ ಬೆಂಗಳೂರಿಗೆ ಮಧ್ಯ ಕರ್ನಾಟಕ ನೇರ ಸಂಪರ್ಕ ರೈಲ್ವೆ ಮಾರ್ಗ ವಾಗುತ್ತದೆ.ಈ ಮೊದಲಿದ್ದ ಸಂಖ್ಯೆ 07335/07336 ಬೆಳಗಾವಿಯಿಂದ ಮುನಗುರ ರೈಲನ್ನ ತಕ್ಷಣ ಪುನರಾರಂಭಿಸಬೇಕು ಮತ್ತು ಬಿಜಾಪುರ್ ದಿಂದ ತಿರುಪತಿಗೆ ಹೊಸ ರೈಲನ್ನು ಪ್ರಾರಂಭಿಸಬೇಕು.11415 / 11416 {ಸೋಲ್ಲಾಪುರ ಹೊಸಪೇಟೆ. ಸೋಲ್ಲಾಪುರ, ಡೆಮೋ ಎಕ್ಸ್ ಪ್ರೆಸ್ ರೈಲು ಸಂಖ್ಯೆ 17329 /17330 ಹುಬ್ಬಳ್ಳಿ,ವಿಜಯವಾಡ, ಹುಬ್ಬಳ್ಳಿ, } ಎಕ್ಸ್ ಪ್ರೆಸ್ ರೈಲು ಈ ಎರಡು ರೈಲುಗಳು ಕೋವಿಡ್ ಕಿಂತ ಮುಂಚೆ ಪ್ಯಾಸೆಂಜರ್ ರೈಲು ಆಗಿತ್ತು ಇದರಿಂದ ಸಾರ್ವಜನಿಕರಿಗೆ ತುಂಬಾ ಅನುಕೂಲವಾಗಿದ್ದನ್ನು ಬಳಿಕ ಎಕ್ಸ್ ಪ್ರೆಸ್ ಆಗಿದ್ದರಿಂದ ಜನರಿಗೆ ಮೂರು ಪಟ್ಟುಗಿಂತಲೂ ಹೆಚ್ಚು ದುಬಾರಿ ಬೆಲೆಗೆ ಟಿಕೆಟ್ ಖರೀದಿಸಿ ಪ್ರಯಾಣಿಸಬೇಕಾಗಿದೆ. ಇವುಗಳನ್ನು ತಕ್ಷಣ ಪ್ಯಾಸೆಂಜರ್ ರೈಲುಗಳಾಗಿ ಮೊದಲಿನ ದರದಲ್ಲಿ ಟಿಕೆಟ್ ಗಳನ್ನು ನಿಗದಿಪಡಿಸಬೇಕು. ಕೊಪ್ಪಳ ಹತ್ತಿರ ಗೇಟ್ ಸಂಖ್ಯೆ 66 ರ ಗೇಟ್ ಸಂಖ್ಯೆ 68ರ ನಡುವೆ ಸಿದ್ದೇಶ್ವರ ನಗರ. ಬೇಲ್ದಾರ್ ಕಾಲೋನಿ ಮತ್ತು ಹೊಸ ಲೇಔಟ್ ಗಳು ನಿರ್ಮಾಣಗೊಳ್ಳುತ್ತಿವೆ ಮುಖ್ಯ ರಸ್ತೆಯ ಎಂ.ಆರ್.ಎಫ್. ಟೈಯರ್ ಶೋರೂಮನ ಪಕ್ಕದ ಮುಖ್ಯ ರಸ್ತೆ ಮುಖಾಂತರ ಹೊಸ ಕೆಳ ಕಿರು ಸೇತುವೆ ನಿರ್ಮಿಸಬೇಕು.ಸ್ವಾಮಿ ವಿವೇಕನಂದ ಶಾಲೆ ಹತ್ತಿರದಿಂದ ಗಣೇಶ ನಗರ ಮೂಲಕ ಓಜನಹಳ್ಳಿಗೆ ಹೋಗುವ ರೈಲ್ವೆ ಕೆಳ ಕಿರು ಸೇತುವೆ ಕಾಮಗಾರಿ ಅರೆಬರೆ ಆಗಿದ್ದು,ಪೂರ್ಣಗೊಳಿಸುವದು ಮತ್ತು ರಸ್ತೆ ನಿರ್ಮಿಸಿ ಸಾರ್ವಜನಿಕ ಉಪಯೋಗಕ್ಕೆ ಅನುಕೂಲ ಮಾಡಿಕೊಡಬೇಕು. ಕೊಪ್ಪಳ ರೈಲ್ವೆ ನಿಲ್ದಾಣದಲ್ಲಿ ಟಿಕೆಟ್ ಮುಂಗಡ ಕಾಯ್ದಿರಿಸುವಿಕೆ ಸಮಯ ಹೆಚ್ಚಿಸಬೇಕು. ಮೊದಲಿನಂತೆ ಬೆಳಿಗ್ಗೆ ಎಂಟರಿಂದ ರಾತ್ರಿ ಎಂಟರವರೆಗೆ ಸಮಯ ವಿಸ್ತರಿಸಬೇಕು. ಆಗತ್ಯ ಇರುವ ಎರಡು ಸ್ವಿಫ್ಟ್ ಸಿಬ್ಬಂದಿಯನ್ನು ನೇಮಿಸಬೇಕು.ಕೊಪ್ಪಳ ರೈಲ್ವೆ ನಿಲ್ದಾಣದಲ್ಲಿ ಕುಡಿಯುವ ನೀರು ಯೋಗ್ಯ ಇಲ್ಲ. ಆದ್ದರಿಂದ ರೈಲ್ವೆ ನಿಲ್ದಾಣದ ವಸತಿ ಗೃಹಗಳಿಗೆ ಮತ್ತು ರೈಲ್ವೆ ನಿಲ್ದಾಣದಲ್ಲಿ ಕೊಪ್ಪಳ ನಗರಸಭೆಯಿಂದ ತುಂಗಭದ್ರಾ ನದಿಯ ಸಿಹಿ ಕುಡಿಯುವ ನೀರು ಒದಗಿಸಬೇಕು.ಹುಬ್ಬಳ್ಳಿ ಬೆಂಗಳೂರು ವಾಯ ಹಾವೇರಿ ಮೂಲಕ ನಿತ್ಯ ಸಂಚರಿಸುವ ಅನೇಕ ರೈಲುಗಳಲ್ಲಿ ಸುಮಾರು ನಾಲ್ಕು ರೈಲುಗಳನ್ನು ಹುಬ್ಬಳ್ಳಿ ವಯಾ ಕೊಪ್ಪಳ.ಹೊಸಪೇಟೆ ಮೂಲಕ ಬೆಂಗಳೂರಿಗೆ ಸಂಚರಿಸಲು ಕ್ರಮ ಕೈಗೊಳ್ಳಬೇಕು.ದುಡಿಯುವ ಜನರ ಅನುಕೂಲಕ್ಕಾಗಿ ಎಲ್ಲಾ ರೈಲುಗಳಲ್ಲೂ ಮುಂಭಾಗದಲ್ಲಿ ನಾಲ್ಕು ಸಾಮಾನ್ಯ ಬೋಗಿಗಳನ್ನು ಮತ್ತು ಹಿಂಭಾಗದಲ್ಲಿ ನಾಲ್ಕು ಸಾಮಾನ್ಯ ಬೋಗಿಗಳನ್ನು ಅಳವಡಿಸಬೇಕು.ಸಂಗೊಳ್ಳಿ ರಾಯಣ್ಣ ಬೆಂಗಳೂರು ರೈಲ್ವೆಯಲ್ಲಿ ನೌಕರಿ ನಿಲ್ದಾಣದಿಂದ ಸಿಂಧನೂರು ವರೆಗೆ ವಯಾ ಕೊಪ್ಪಳ ಮೂಲಕ ಮತ್ತೊಂದು ಹೆಚ್ಚುವರಿ ರೈಲು ಪ್ರಾರಂಭಿಸಬೇಕು.ಇತ್ತೀಚೆಗೆ ಘೋಷಣೆ ಮಾಡಿದ ಯಶವಂತಪುರ ನಿಲ್ದಾಣದಿಂದ ಸಿಂಧನೂರವಗೆ ಹೊರಡುವ ರೈಲು ಧೀರ್ಘ ಕಾಲದ 15 ತಾಸುಗಳ ಪ್ರಯಾಣ ಕಡಿತ ಮಾಡಬೇಕು.ಸಿಂಧನೂರು ರೈಲುಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರಿನ ವ್ಯವಸ್ಥೆ ಮಾಡಬೇಕು. ಎಲ್ಲಾ ರೈಲುಗಳಲ್ಲಿ ಶೌಚಾಲಯ,ಸೀಟುಗಳು ಸ್ವಚ್ಚತಾ ಕಾಪಾಡಬೇಕು. ಹುಬ್ಬಳ್ಳಿಯಿಂದ ಸಿಂಧನೂರಿಗೆ ಸಂಜೆ 6 ಗಂಟೆಗೆ ಬಿಡುವ ರೈಲನ್ನು ಸಾಯಂಕಾಲ 4 ಗಂಟೆಗೆ ಬೀಡಬೇಕು, ಹುಬ್ಬಳ್ಳಿ ಯಿಂದ 6 ಗಂಟೆಗೆ ಬಿಡುವ ರೈಲು ರಾತ್ರಿ 11 ಗಂಟೆ ಸುಮಾರಿಗೆ ಸಿಂಧನೂರಿಗೆ ತಲುಪವದರಿಂದ ರಾತ್ರಿ ಸಾರಿಗೆ ವ್ಯವಸ್ಥೆ ಅಸ್ವಸ್ಥ ಆಗುತ್ತದೆ. ಗ್ರಾಮೀಣ ಪ್ರದೇಶಗಳ ಜನಸಾಮಾನ್ಯರಿಗೆ ತುಂಬಾ ಅನಾನುಕೂಲ ಆಗುತ್ತದೆ. ಸಿಂಧನೂರು ನಿಂದ ಹುಬ್ಬಳ್ಳಿಗೆ ಬೆಳಿಗ್ಗೆ 5 ಕೈ ಬಿಡುವ ರೈಲನ್ನು ಬೆಳಿಗ್ಗೆ 6 ಬೀಡಬೇಕು. ವಿವರಿಸಿದರು. ಸಂಸದ ಕೆ.ರಾಜಶೇಖರ್ಬಿ. ಹಿಟ್ನಾಳ ಸ್ಥಳದಲ್ಲೇ ರೈಲ್ವೆ ಅಧಿಕಾರಿಗಳಿಗೆ ಫೋನ್ ಮಾಡಿ ಗಣೇಶ ನಗರ ಮೂಲಕ ಓಜನಹಳ್ಳಿಗೆ ಹೋಗುವ ರೈಲ್ವೆ ಕಿರು ಸೇತುವೆ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚಿಸಿದರು. ಹುಬ್ಬಳ್ಳಿಯಿಂದ ವಾಯ ಹಾವೇರಿ ಮೂಲಕ ಬೆಂಗಳೂರಿಗೆ ಹೋಗುವ ರೈಲುಗಳಲ್ಲಿ ಕೊಪ್ಪಳ ಮೂಲಕ ಹೋಗಲು ಮತ್ತು ಹುಬ್ಬಳ್ಳಿ -ವಾಯ ಕೊಪ್ಪಳ ಮೂಲಕ ಬೆಂಗಳೂರಿಗೆ ಒಂದೇ ಭಾರತ್ ರೈಲು ಪ್ರಾರಂಭಿಸಲು ಪ್ರಸ್ತಾವನೆ ಸಲ್ಲಿಸಲಾಗಿದ್ದು. ನಿಮ್ಮ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸಲು ಪ್ರಯತ್ನಿಸುವುದಾಗಿ ನಿಯೋಗಕ್ಕೆ ಭರವಸೆ ನೀಡಿದರು.