*ರಾಷ್ಟೀಯ ಚಾರ್ಟರ್ಡ್ ಅಕೌಂಟೆಂಟ್ಸ್ ದಿನಾಚರಣೆ *

Spread the love

ಗದಗ:  ರೋಟರಿ ಗದಗ ಸೆಂಟ್ರಲ್ ವತಿಯಿಂದ ರಾಷ್ಟೀಯ ಚಾರ್ಟರ್ಡ್ ಅಕೌಂಟೆಂಟ್ಸ್ ದಿನಾಚರಣೆಯನ್ನು ಆಚರಿಸಲಾಯಿತು.ನಗರದ ಚಾರ್ಟೆರ್ಡ ಅಕೌಂಟೆಂಟ್ ರು ಆದ ಶ್ರೀ.ಕೆ.ಎಸ್.ಚೆಟ್ಟಿ ,ಶ್ರೀ ಕಿರಣ ಶಾವಿ, ಶ್ರೀ ಆನಂದ ಪೋತ್ನಿಸ್,ಮಹೇಶ ಹಿಂಡಿ  ಅವರಿಗೆ ಶಾಲುಹೊದಿಸಿ   ಗೌರವ ಪೂರ್ವಕವಾಗಿ ಸನ್ಮಾಸಲಾಯಿತು.   ಈ ಸಂದರ್ಭದಲ್ಲಿ ಶ್ರೀ ಕೆ.ಎಸ್.ಚೆಟ್ಟಿ ಮಾತನಾಡಿ ರಾಷ್ಟೀಯ ಅಕೌಂಟೆಂಟ್ ಡೇ ಪ್ರತಿ ವರ್ಷ ಜುಲೈ ೧ ರಂದು ಆಚರಿಸಲಾಗುತ್ತದೆ. ಭಾರತವು ಇನ್ಸ್ಟಿಟ್ಯುಟ್ ಆಫ್ ಚಾರ್ಟರ್ಡ ಅಕೌಂಟೆಂಟ್ಸ್ ಆಫ್ ಇಂಡಿಯಾ(ಐಸಿಎಐ) ಸ್ಥಾಪನೆಯ ಗುರುತಾಗಿ ಆಚರಿಸಲಾಗುತ್ತದೆ ಎಂದರು. ಈ ಸಂದರ್ಭದಲ್ಲಿ ರೋಟರಿ ಸೆಂಟ್ರಲ್ ಗದಗನ ೨೦೨೫-೨೬ ನೇ ಸಾಲಿನ  ನೂತನ ಅಧ್ಯಕ್ಷ ಚೇತನ ಅಂಗಡಿ, ಕಾರ್ಯದರ್ಶಿ ರಾಜು ಉಮನಾಬಾದಿ, ಖಜಾಂಚಿ ಡಾ.ಪ್ರಭು ಗಂಜಿಹಾಳ,  ೩೧೭೦ದ ನೂತನ ಅಸಿಸ್ಟಂಟ್ ಗೌರ‍್ನರ್ ವಿ.ಕೆ.ಗುರುಮಠ, ಮಾಜಿ ಅಸಿಸ್ಟಂಟ್  ಗೌರ್ನರ ಮಲ್ಲಿಕಾರ್ಜುನ ಐಲಿ, ರಾಜು ಕುರಡಗಿ, ಎಸ್.ಆಯ್.ಅಣ್ಣಿಗೇರಿ,    ಚಂದ್ರಗೌಡ ಹಿರೇಗೌಡರ, ಶ್ರೀಕಾಂತ ಲಕ್ಕುಂಡಿ, ಪರಶುರಾಮ ನಾಯ್ಕರ್, ಮಲ್ಲಿಕಾರ್ಜುನ ಚಂದಪ್ಪನವರ  ಮೊದಲಾದ ಸದಸ್ಯರು ಪಾಲ್ಗೊಂಡಿದ್ದರು.

** ಡಾ.ಪ್ರಭು ಗಂಜಿಹಾಳ.

Leave a Reply

Your email address will not be published. Required fields are marked *