ಬೈಲಹೊಂಗಲ : ಕೊಳಗೇರಿ ನಿವಾಸಿಗಳ ಮನೆಗಳ ಹಕ್ಕುಪತ್ರ ವಿತರಿಸಬೇಕೆಂದು ಒತ್ತಾಯ.

Spread the love

ಬೆಳಗಾವಿ ಜಿಲ್ಲೆ ಬೈಲಹೊಂಗಲ ನಗರದ ಹರಳಯ್ಯ ಕಾಲೋನಿಯ ನಿವಾಸಿಗಳು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಬೆಳಗಾವಿಯ ಕಾರ್ಯಪಾಲಕ ಅಭಿಯಂತರರ ಕಾರ್ಯಾಲಯದ ಮುಂದೆ ಅಹೋರಾತ್ರಿ ಧರಣಿ ದಿನಾಂಕ 19.05.2025 ರಿಂದ ಅಲ್ಲೆ ಹೆಂಗಸರು ಮತ್ತು ಗಂಡಸರು ತಮ್ಮ ಸಣ್ಣ ಸಣ್ಣ ಮಕ್ಕಳನ್ನು ಮನೇಲಿ ಬಿಟ್ಟು ಸತ್ಯಾಗ್ರಹ ಸ್ಥಳದಲ್ಲಿ  ಅಡುಗೆ ಮಾಡಿಕೊಂಡು ಅಲ್ಲೆ ಆ ಚಲಿಯಲ್ಲಿ ಮಲಗಿ ನಿರಂತರವಾಗಿ ಧರಣಿ ಸತ್ಯಾಗ್ರಹ ಪ್ರಾರಂಭಿಸಿದ್ದಾರೆ. ಸತ್ಯಾಗ್ರಹ ಮುಖ್ಯಸ್ಥರಾಗಿರುವ ಅಂಬೇಡ್ಕರ್ ಯುವ ಸೇನೆ ಯ ರಾಜ್ಯ ಉಪಾಧ್ಯಕ್ಷ ಪರಶುರಾಮ ರಾಯಬಾಗ ಮತ್ತು ಹರಳಯ್ಯ ನಿವಾಸಿಗಳು. ಅವರ ಬೇಡಿಕೆ ಏನೆಂದರೆ ನಮಗೆ ಹಕ್ಕುಪತ್ರ ಸಿಗುವವರೆಗೂ ನಿರಂತರ ಹೋರಾಟ ನಾವು ಸತ್ರು ಪರವಾಗಿಲ್ಲ ಆದರೆ ಈ ಬಾರಿ ಹೋರಾಟದಿಂದ ಹಿಂದಕ್ಕೆ ಸರಿಯುವ ಮಾತೆ ಇಲ್ಲ ನಮ್ಮ ಮನೆಗಳ ಹಕ್ಕು ಪತ್ರ ಸಿಗಬೇಕು ಇಲ್ಲವೆಂದರೆ ಕೊಳಗೇರಿ ಅಭಿವೃದ್ಧಿ ಮಂಡಳಿ ಕಾರ್ಯಪಾಲಕ ಅಭಿಯಂತಕರಾದ  ಕೃಷ್ಣಾ ರೆಡ್ಡಿ ಅವರನ್ನು ಈ ಕೂಡಲೇ ಅಮಾನತು ಗೊಳಿಸಬೇಕು. ಈ ಹಿಂದೆ ನಾವು ಬೈಲಹೊಂಗಲ ಉಪವಿಭಾಗಾಧಿಕಾರಿಗಳ ಮುಂದೆ ನಿರಂತರ 62 ದಿನ ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಅಹೋರಾತ್ರಿ ಸತ್ಯಾಗ್ರಹ ಮಾಡಿದ್ದಾಗ ಸ್ಥಳೀಯ ಶಾಸಕರು ಮತ್ತು ಕೊಳಗೇರಿ ಮಂಡಳಿಯ ಅಧಿಕಾರಿಗಳು ನಿಮಗೆ ಕೆಲವೇ ದಿನಗಳಲ್ಲಿ ನಿಮ್ಮ ಮನೆಗಳ ಹಕ್ಕು ಪತ್ರ ಕೊಡಿಸುತ್ತೇವೆಂದು ಹೇಳಿ ಧರಣಿ ಸತ್ಯಾಗ್ರಹ ಕೈ ಬಿಡುವಂತೆ ಮನವರಿಸಿದ್ದರು. ಆದರೆ ಸ್ಥಳೀಯ ಶಾಸಕರ ಮತ್ತು ಅಧಿಕಾರಿಗಳ ದುರಾಡಳಿತ ದಿಂದ ದಿನಗೂಲಿ ಮಾಡಿಕೊಂಡು ಬದುಕುತ್ತಿರುವ ಬಡ ಜನರಿಗೆ ಶಾಸಕ ಮಹಾಂತೇಶ್ ಕೌಜಲಗಿ  ಮತ್ತು ಕೊಳಗೇರಿ ಅಧಿಕಾರಿ ಕೃಷ್ಣಾ ರೆಡ್ಡಿ ಮೋಸ ಮಾಡುತ್ತಿದ್ದಾರೆ ಮತ್ತು ದಾರಿ ತಪ್ಪಿಸುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಬಡವರ ಪರವಾಗಿ ಇದೆ ಎಂದು ಹೇಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು D K ಶಿವಕುಮಾರ ಮತ್ತು ವಸತಿ ಸಚಿವರಾದ ಜಮೀರ್ ಅಹ್ಮದ್ ಖಾನ್ ಅವರು ಈ ಬಡಜನರಿಗೆ ನ್ಯಾಯ ದೊರಕಿಸಿ ಕೊಡಬೇಕೆಂದು AYS ನ್ಯೂಸ್ ತಮ್ಮಲ್ಲಿ ಕೇಳಿಕೊಳ್ಳತ್ತದೆ.

Leave a Reply

Your email address will not be published. Required fields are marked *