ಕೊಪ್ಪಳ: ಶಾದಿ ಮಹಲ್ ಬಾಡಿಗೆ ಐದು ಸಾವಿರಕ್ಕೆ ಇಳಿಸಲು ಸಚಿವ ಜಮೀರ್ ಅಹಮ್ಮದ್ ಖಾನ್ ವಕ್ಫ್ ಸಿಇಒ ಅವರಿಗೆ ಆದೇಶಿಸಿದರು.
ಕೊಪ್ಪಳ : ಶಾದಿ ಮಹಲ್ ಬಾಡಿಗೆ ತಕ್ಷಣವೇ ಐದು ಸಾವಿರ ರೂಪಾಯಿಗಳನ್ನು ಮಾಡುವಂತೆ ಕರ್ನಾಟಕ ವಕ್ಫ್ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಜಿಲಾನಿ ಮೊಕಾಶಿ ಮತ್ತು ಜಿಲ್ಲಾ ವಕ್ಫ್ ಸಲಹಾ ಮಂಡಳಿಯ ಕಾರ್ಯದರ್ಶಿ ನೂರ ಬಾಷಾ ಅವರಿಗೆ ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಸಚಿವ ಜಮೀರ್ ಅಹಮ್ಮದ್ ಖಾನ್ ಸ್ಥಳದಲ್ಲೇ ದೂರವಾಣಿ ಮೂಲಕ ಆದೇಶ ನೀಡಿದರು.
ಕೊಪ್ಪಳ ನಗರದ ಶಾದಿ ಮಹಲ್ ನಲ್ಲಿ ಮದುವೆಯಲ್ಲಿ ಭಾಗವಹಿಸಿದ್ದ ವಕ್ಫ್ ಸಚಿವ ಜಮೀರ್ ಅಹ್ಮದ್ ಖಾನ್ ಅವರಿಗೆ ನಗರ ಸಭೆ ಎದುರಿನ ಶಾದಿ ಮಹಲ್ ಬಾಡಿಗೆ ವಿಪರೀತ ವಾಗಿದ್ದು ಕಡಿಮೆ ಮಾಡುವಂತೆ ಜನಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಎಸ್.ಎ.ಗಫಾರ್ ಕೋರಿ ಈ ಹಿಂದೆ ಶಾದಿ ಮಹಲ್ ಬಾಡಿಗೆ ಬಗ್ಗೆ ತಮಗೆ ಮನವಿ ಸಲ್ಲಿಸಲಾಗಿತ್ತು ಎಂದು ನೆನಪಿಸಲಾಯಿತು, ಹೌದಾ ಈಗ ಬಾಡಿಗೆ ಎಷ್ಟಿದೆ ಎಂದು ಕೇಳಿದಾಗ ಪ್ರಸ್ತುತ ಹನ್ನೆರಡು ಸಾವಿರ ರೂಪಾಯಿಗಳ ಬಾಡಿಗೆ ಇದೆ, ಬಡವರಿಗೆ ತುಂಬಾ ತೊಂದರೆ ಆಗುತ್ತದೆ ಎಂದು ವಿವರಿಸಿದರು, ಶಾದಿ ಮಹಲ್ ವಕ್ಫ್ ಮಂಡಳಿ ವ್ಯಾಪ್ತಿಯಲ್ಲಿ ಬರುತ್ತದೆ,ನಗರ ಸಭೆ ಅಧ್ಯಕ್ಷ ಅಮ್ಜದ್ ಪಟೇಲ್ ಶಾದಿ ಮಹಲಿಗೆ ಯಾರಿದ್ದಾರೆ ಎಂದು ವಿಚಾರಿಸಿ ಬಾಡಿಗೆ ಮೂರು ಸಾವಿರ ರೂಪಾಯಿಗಳ ನಿಗದಿ ಮಾಡೋಣ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದಾಗ ಇಲ್ಲ ಶಾದಿ ಮಹಲ್ ನಿರ್ವಹಣೆ ವೆಚ್ಚ ಹೆಚ್ಚಾಗುತ್ತದೆ ಕನಿಷ್ಠ ಐದು ಸಾವಿರ ರೂಪಾಯಿಗಳನ್ನು ಮಾಡಬಹುದು ಎಂದು ನಗರ ಸಭೆ ಅಧ್ಯಕ್ಷ ಅಮ್ಜದ್ ಪಟೇಲ್,ಕಾಂಗ್ರೆಸ್ ಪಕ್ಷದ ನಗರ ಅಧ್ಯಕ್ಷ ಕಾಟನ್ ಪಾಷಾ, ಕೆ,ಎಂ, ಸೈಯ್ಯದ್ ಸಲಹೆ ನೀಡಿದರು. ಆಯಿತು ಶಾದಿ ಮಹಲ್ ಬಾಡಿಗೆ ಐದು ಸಾವಿರ ರೂಪಾಯಿಗಳನ್ನು ನಿಗದಿ ಮಾಡಿ ಎಂದು ಕರ್ನಾಟಕ ವಕ್ಫ್ ಮಂಡಳಿ ಸಿಇಒ ಹಾಗೂ ಜಿಲ್ಲಾ ವಕ್ಫ್ ಸಲಹಾ ಮಂಡಳಿಯ ಕಾರ್ಯದರ್ಶಿ ನೂರ ಬಾಷಾ ಅವರಿಗೆ ಫೋನ್ ಮಾಡಿ ಆದೇಶಿಸಿದರು,ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಮಾಜಿ ಅಧ್ಯಕ್ಷ ಅನ್ವರ್ ಬಾಷಾ, ಕೊಪ್ಪಳ ಶಾಸಕ ರಾಘವೇಂದ್ರ ಬಿ.ಹಿಟ್ನಾಳ, ಮಾಜಿ ಶಾಸಕ ಕೆ.ಬಸವರಾಜ್ ಹಿಟ್ನಾಳ್ ಮುಂತಾದವರು ಉಪಸ್ಥಿತರಿದ್ದರು.