Blog
ಅದಾವುದಯ್ಯ???
ಅದಾವುದಯ್ಯ???
ಅರಿಶಿಣ ತೊಳೆದ ನೀರಿನ ಕೆಂಪು
ಕಂಡು ನಾಚುವ ವೇಳೆಗೆ
ಸಿಂಧೂರ ಅಳಿಸಿದ ಧರ್ಮ ಅದಾವುದಯ್ಯ?
ಭಾವಗಳ ಕೊಂದು ಭಾತೃತ್ವ ಮರೆತು
ಮೂರುಗಂಟನ್ನು ಸಡಿಲಿಸಿ
ಅಮ್ಮನ ಕೊರಳ ಬರಿದು ಮಾಡಿದ ಧರ್ಮ
ಅದಾವುದಯ್ಯ?
ಗಂಡೆದೆಯ ವೀರನ ಗುಂಡಿಗೆಯ ಒಳ ಹೊಕ್ಕು
ತಾಯಿ ಮಡಿಲ ತೋರಿಸಿ
ರಕ್ತದ್ಹೋಕುಳಿಯಲಿ ಕ್ರೌರ್ಯತೆಯ ಕೇಕೆಯಾಕಿದ ಧರ್ಮ
ಅದಾವುದಯ್ಯ?
ಮನುಜ ಮತ ವಿಶ್ವಪಥ ಎನ್ನುವಾಗ
ಸಹೋದರತೆ ಮರೆತು
ನರಮೇಧಕ್ಕೆ ನಾಂದಿ ಹಾಡಿ ಶಾಂತಿ ಕದಡಿದ ಧರ್ಮ
ಅದಾವುದಯ್ಯ?