ತಾವರಗೇರಾ ನ್ಯೂಸ್‌ ಪತ್ರಿಕ ಬಳಗ ಹಾಗೂ ಬುದ್ದಂ,ಶರಣಂ,ಗಚ್ಚಾಮಿ ಸೇವಾ ಟ್ರಸ್ಟ್‌ (ರಿ) ವತಿಯಿಂದ ನಾಡಿನ ಸಮಸ್ತ ಜನತೆಗೆ ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು.

Spread the love

ತಾವರಗೇರಾ ನ್ಯೂಸ್‌ ಪತ್ರಿಕ ಬಳಗ ಹಾಗೂ ಬುದ್ದಂ,ಶರಣಂ,ಗಚ್ಚಾಮಿ ಸೇವಾ ಟ್ರಸ್ಟ್‌ (ರಿ) ವತಿಯಿಂದ ನಾಡಿನ ಸಮಸ್ತ ಜನತೆಗೆ ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು.

ಪ್ರತಿ ವರ್ಷ ಜನವರಿ 14 ರಂದು ಹಿಂದೂ ಧರ್ಮದ ಜನರು ಮಕರ ಸಂಕ್ರಾಂತಿ ಹಬ್ಬವನ್ನು ಆಚರಿಸುತ್ತಾರೆ. ಇದು ಹೊಸ ಆರಂಭವನ್ನು, ಸಮೃದ್ಧಿ ಮತ್ತು ಕೃತಜ್ಞತೆಯ ಸಂಕೇತವೆಂದು ಕರೆಯಲ್ಪಡುವ ಹಬ್ಬವಾಗಿದೆ. ಹಿಂದೂ ಧರ್ಮದ ಪ್ರಮುಖ ಹಬ್ಬಗಳಲ್ಲಿ ಒಂದಾದ ಮಕರ ಸಂಕ್ರಾಂತಿಯನ್ನು ದೇಶಾದ್ಯಂತ ಬಹಳ ಸಂಭ್ರಮ ಮತ್ತು ಸಡಗರದಿಂದ ಆಚರಿಸಲಾಗುತ್ತದೆ. ಈ ದಿನದಂದು ಗಾಳಿಪಟಗಳನ್ನು ಹಾರಿಸಲಾಗುತ್ತದೆ, ಸಿಹಿತಿಂಡಿಗಳನ್ನು ವಿತರಿಸಲಾಗುತ್ತದೆ ಮತ್ತು ಸೂರ್ಯ ದೇವರನ್ನು ಪೂಜಿಸಲಾಗುತ್ತದೆ.
2025ರ ಮಕರ ಸಂಕ್ರಾಂತಿಯ ದಿನದಿಂದ ನಿಮ್ಮ ಜೀವನವು ಸಂತೋಷ, ಪ್ರೀತಿ ಮತ್ತು ಸಮೃದ್ಧಿಯಿಂದ ತುಂಬಿರಲಿ. ಎಳ್ಳು ಬೆಲ್ಲ ತಿಂದು ಸಿಹಿಯಾದ ಮಾತಾಡೋಣ.. ಎಲ್ಲಾ ಕಹಿ ಮರೆತು ಮಧುರವಾದ ಬಾಂಧವ್ಯ ವೃದ್ಧಿಸೋಣ.. ನಿಮ್ಮ ಜೀವನವು ಸದಾ ಪ್ರೀತಿ, ಸಂತೋಷ ಮತ್ತು ಸಮೃದ್ಧಿಯಿಂದ ತುಂಬಿರಲಿ.. ಎಳ್ಳು ಬೆಲ್ಲ ಬೀರಿ ಒಳ್ಳೆಯ ಮಾತಾಡೋಣ. ಈ ವರ್ಷದ ಮಕರ ಸಂಕ್ರಾಂತಿ ಹಬ್ಬ ನಿಮ್ಮ ಜೀವನದಲ್ಲಿ ಹೊಸ ಚೈತನ್ಯವನ್ನೇ ತುಂಬಲಿ.. ನೇಸರನು ತನ್ನ ಪಥವನ್ನು ಬದಲಾಯಿಸುತಿರಲು ಮಾಘಿಯ ಚಳಿ ಮಾಯವಾಗುತಿರಲು ತನು ಮನದಲ್ಲಿ ಹೊಸ ಚೈತನ್ಯ ಮೂಡುತಿದೆ ಹೊಸ ಬೆಳೆ ಹೊಸ ವರ್ಷ ನಿಮ್ಮ ಜೀವನವನ್ನು ಸುಖವಾಗಿಡಲಿ. ಈ ಸುಗ್ಗಿ ಹಬ್ಬ ನಿಮ್ಮ ಜೀವನದಲ್ಲಿ ಸುಖ, ಶಾಂತಿಯನ್ನು ನೀಡಲಿ. ಎಳ್ಳಿನಂತೆ ಶುದ್ಧವಾಗಿರಲಿ ನಿಮ್ಮ ಜೀವನ ಬೆಲ್ಲದಂತೆ ಸಿಹಿಯಾಗಿರಲಿ ನಿಮ್ಮ ಮಾತು. ನಿಮ್ಮ ಬದುಕಿನ ಎಲ್ಲಾ ಇಷ್ಟಾರ್ಥಗಳು ಕೈಗೂಡಲಿ.. ನಿಮ್ಮ ಯಶಸ್ಸಿನ ಹಾದಿಗೆ ಇದ್ದ ಅಡೆತಡೆಗಳು ದೂರಾಗಲಿ ಈ ಸುಗ್ಗಿ ಹಬ್ಬ ನಿಮ್ಮ ಬಾಳಲ್ಲಿ ಹುಗ್ಗಿಯಂಥಹ ಸಿಹಿ ಕ್ಷಣಗಳನ್ನು ನೀಡಲಿ ನಿಮ್ಮ ಬದುಕು ಬಂಗಾರವಾಗಿರಲಿ 2025ರ ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು. ತಾವರಗೇರಾ ನ್ಯೂಸ್‌ ಪತ್ರಿಕ ಬಳಗ ಹಾಗೂ ಬುದ್ದಂ,ಶರಣಂ,ಗಚ್ಚಾಮಿ ಸೇವಾ ಟ್ರಸ್ಟ್‌ (ರಿ) ವತಿಯಿಂದ ನಾಡಿನ ಸಮಸ್ತ ಜನತೆಗೆ ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು.

Leave a Reply

Your email address will not be published. Required fields are marked *