ಕೊಪ್ಪಳ ನಗರದ ಹಟಗಾರ ಪೇಟೆ ಬಡಾವಣೆಯಲ್ಲಿ ಈದ್ ಮಿಲಾದ್ ನಿಮಿತ್ಯ ಸರ್ವರಿಗೂ ಅನ್ನ ಸಂತರ್ಪಣೆ.
ಕೊಪ್ಪಳ : ನಗರದ ಹಟಗಾರ ಪೇಟೆ
ಬಡಾವಣೆಯಲ್ಲಿ ವಿಶ್ವ ಪ್ರವಾದಿ ಮೊಹಮ್ಮದ್ (ಸ್ವ ಅ) ಅವರ ಜನ್ಮ ದಿನದ ಪ್ರಯುಕ್ತ ಸರ್ವ ಧರ್ಮದವರಿಗೂ ಅನ್ನ ಸಂತರ್ಪಣೆ ನಡೆಯಿತು.
ಪ್ರತಿ ವರ್ಷವೂ ಹಟಗಾರ ಪೇಟೆ ಬಡಾವಣೆಯಲ್ಲಿ ಈದ್ ಮಿಲಾದ್ ಅಂಗವಾಗಿ ವಿವಿಧ ಧರ್ಮಗಳ ಜನರೂ ಅನ್ನ ಸಂತರ್ಪಣೆಯಲ್ಲಿ ಪಾಲ್ಗೊಂಡು ಸೌಹಾರ್ದತೆ ಮರೆಯುತ್ತಾರೆ.
ಸೋಮವಾರ ನಡೆದ ಅನ್ನ ಸಂತರ್ಪಣೆ ಯಲ್ಲಿ ಪಾಸ್ಟರ್ಸ್ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಚನ್ನಬಸಪ್ಪ ಅಪ್ಪಣ್ಣವರ್, ಲಡಾಯಿ ಪ್ರಕಾಶನದ ಬಸವರಾಜ ಸೂಳಿಬಾವಿ. ಸಂಪಾದಕ, ಸಾಹಿತಿ ಡಿ.ಎಮ್. ಬಡಿಗೇರ. ಹಿರಿಯ ಹೋರಾಟಗಾರ ಡಿ. ಹೆಚ್. ಪೂಜಾರ. ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಜಿಲ್ಲಾ ಅಧ್ಯಕ್ಷ ತುಕಾರಾಮ್ ಬಿ. ಪಾತ್ರೋಟಿ, ಭ್ರಾತೃತ್ವ ಸಮಿತಿಯ ಜಿಲ್ಲಾ ಸಂಚಾಲಕ ಎಸ್.ಎ.ಗಫಾರ್, ಕಾಶಪ್ಪ ಚಲವಾದಿ. ಸಂಜಯ್ ದಾಸ್ ಕೌಜಗೇರಿ. ಹಟಗಾರ ಪೇಟೆಯ ಹಿರಿಯರಾದ ಖಾಸಿಮ್ ಸಾಬ್ ಲೇಬಗೇರಿ.ಯುವ ಮುಖಂಡರುಗಳಾದ ಗೌಸ್ ನೀಲಿ. ಖಾಸಿಮ್ ನೀಲಿ ಕಿರಾಣಿ ಅಂಗಡಿ. ಖಾಜಾ ಸಾಬ್ ಸಂಗಟಿ. ಮರ್ದಾನ್ ಸಾಬ್ ಸಂಗಟಿ. ಇಬ್ರಾಹಿಮ್ ರಾಜೂಳಿ. ಫಾರೂಕ್ ನೀಲಿ. ಬಾಬು ಸಾಬ್ ತಂಬ್ರಳ್ಳಿ ಮುಂತಾದವರು ಪಾಲ್ಗೊಂಡಿದ್ದರು.
ವಿಶೇಷ ವರದಿಗಾರರು :- ಎಸ್.ಎ.ಗಫಾರ್,