ಮೆಣೇದಾಳ ಗ್ರಾ.ಪಂ ವ್ಯಾಪ್ತಿಯ ಬಚನಾಳ ಗ್ರಾಮದಲ್ಲಿ ಇಂದು ಸಂಜೆ ಈಶಪ್ಪ ಕಳಮಳ್ಳಿ ಎಂಬ ರೈತ ಸಿಡಿಲು ಬಡಿದು ಸ್ಥಳದಲ್ಲೇ ಸಾವು, 

Spread the love

ಮೆಣೇದಾಳ ಗ್ರಾ.ಪಂ ವ್ಯಾಪ್ತಿಯ ಬಚನಾಳ ಗ್ರಾಮದಲ್ಲಿ ಇಂದು ಸಂಜೆ ಈಶಪ್ಪ ಕಳಮಳ್ಳಿ ಎಂಬ ರೈತ ಸಿಡಿಲು ಬಡಿದು ಸ್ಥಳದಲ್ಲೇ ಸಾವು, 


ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಹೋಬಳಿ ವ್ಯಾಪ್ತಿಯಲ್ಲಿ ಬರುವ ಮೆಣೇದಾಳ ಗ್ರಾ.ಪಂ ವ್ಯಾಪ್ತಿಯ ಬಚನಾಳ ಗ್ರಾಮದಲ್ಲಿ ಇಂದು ಸಂಜೆ ಈಶಪ್ಪ ಕಳಮಳ್ಳಿ ಎಂಬ ರೈತ ಸಿಡಿಲು ಬಡಿದು ಸ್ಥಳದಲ್ಲೇ ಸಾವು.

ಇದೆ ತಿಂಗಳಲ್ಲಿ ಇಷ್ಟೇಲ್ಲಾ ಅನಾಹುತಗಳ ಜರುಗುತ್ತಿದ್ದಾವೆ. ಆದರೂ ನಮಗೆ ಪರಿಜ್ಞಾನವಿಲ್ಲದೆ ಸಿಕ್ಕ ಸಿಕ್ಕಲ್ಲಿ ಬೇಜವಭ್ದಾರಿಯಿಂದ ಅಲೇದಾಡುತ್ತೆವೆ. ಜೀವ ಒಂದು ಅತ್ಯಮೂಲ್ಯವಾದ ವಸ್ತು, ಆ ವಸ್ತು ಒಂದೆ ಕ್ಷಣರ್ಧದಲ್ಲಿ ಹೋಗುತ್ತೆ, ಪುನಃಹ ಎಷ್ಟು ಬೆಲೆ ಕೊಟ್ಟರು ಸಿಗದು, ಆ ಕುಟುಂಬಕ್ಕೆ ತುಂಬಲಾರದ ನಷ್ಟ್, ಆ ವ್ಯಕ್ತಿಯಿಂದಲೆ ಆ ಕುಟುಂಬ ಸಾಗುತ್ತಿರುತ್ತೆ, ಹಾಗಾಗಿ ರೈತ ಭಾಂದವರೆ ಕೂಡಲೆ ಸಿಡಿಲಿನಿಂದ ರಕ್ಷಣೆ ಪಡೆಯುವುದು ಹೇಗೆ, ನಮ್ಮ ಅಮೂಲ್ಯವಾದ ಜೀವ ಉಳಿಸಿಕೊಳ್ಳುವುದು ಹೇಗೆ ಎಂಬುಹುದಕ್ಕೆ ಒಂದು ಚಿಕ್ಕ ಮಾಹಿತಿ ತಮಗಾಗಿ.

ಸಿಡಿಲಿನಿಂದ ರಕ್ಷಣೆ ಪಡೆಯುವುದು ಹೇಗೆ?

ತಗ್ಗು ಪ್ರದೇಶಕ್ಕೆ ಹೋಗಿ ಕುಳಿತುಕೊಳ್ಳಿ :- ಗುಡುಗು-ಮಿಂಚು ಬರಲಿದೆ ಎಂದು ಗೊತ್ತಾದಾಗ ನೀವು ಬಯಲಿನಲ್ಲಿದ್ದರೆ. ತಕ್ಷಣವೇ ಇರುವುದರಲ್ಲಿ ತಗ್ಗು ಪ್ರದೇಶಕ್ಕೆ ಹೋಗಿ ಕುಳಿತುಕೊಳ್ಳಿ.ನಿಲ್ಲ ಬೇಡಿ . ತಗ್ಗು ಪ್ರದೇಶ ಇಲ್ಲದೆ ಬಯಲಿನಲ್ಲೆ ಇರಬೇಕಾದರೆ. ನಿಮ್ಮ ತಲೆಯನ್ನು ಮೊಣಕಾಲುಗಳ ನಡುವೆ ಹುದುಗಿಸಿಕೊಳ್ಳಿ, ಇದು ಮಿಂಚಿನಿಂದ ಮೆದುಳಿಗೂ,ಹೃದಯಕ್ಕೂ ಆಗುವ ಹಾನಿಯನ್ನು ತಪ್ಪಿಸುತ್ತದೆ.

ಮರದ ಬಳಿ ನಿಂತಿದ್ದರೆ ಅಪಾಯ ಜಾಸ್ತಿ :- ಮರಗಳಿದ್ದ ಪ್ರದೇಶದಲ್ಲಿ ನೀವು ಇದ್ದರೆ, ಅಲ್ಲಿಂದ ಬೇಗನೆ ಹೊರಬರುವುದು ಒಳ್ಳೆಯದು. ಯಾಕೆಂದರೆ ಸಿಡಿಲು ಮೋಡದಿಂದ ಭೂಮಿಗೆ ಹರಿಯಲು ಮರದಂತಹ ಹಸಿ, ಒದ್ದೆ ವಸ್ತುವನ್ನೇ ಆರಿಸಿಕೊಳ್ಳುತ್ತದೆ. ಹೀಗಾಗಿ ಮರದ ಬಳಿ ನಿಲ್ಲದೇ ದೂರ ಬನ್ನಿ.

ಪ್ರಾಣಿಗಳ ಜೊತೆ ಇದ್ದರೆ ಅವುಗಳ ಮಧ್ಯದಲ್ಲಿರಿ :- ನೀವು ಎತ್ತರದ ಗುಡ್ಡದ ಮೇಲಿದ್ದರೆ ತಗ್ಗು ಪ್ರದೇಶಕ್ಕೆ ಇಳಿಯಿರಿ.  ಕುರಿ ಮಂದೆ ಅಥವಾ ಜಾನುವಾರುಗಳ ಮಧ್ಯ ನಿಂತಿದ್ದರೆ, ಅವುಗಳ ಮಧ್ಯದಲ್ಲಿ ಬಗ್ಗಿ ಕುಳಿತುಕೊಳ್ಳಿ. ಯಾಕೆಂದರೆ ಮಿಂಚು ಪ್ರಾಣಿಗಳಿಗಿಂತ ಎತ್ತರವಿರುವ ಮನುಷನನ್ನೇ ಆರಿಸಿಕೊಳ್ಳುತ್ತದೆ.

ಸಿಡಿಲು ಬರುವ ವೇಳೆ ನೀರಿನಿಂದ ದೂರ ಇರಿ :- ಸಿಡಿಲು ಆರ್ಭಟಿಸುತ್ತಿದ್ದರೆ ಕೆರೆಯಲ್ಲಿ ಈಜುವುದು, ಸ್ನಾನ ಮಾಡುವುದು ಬೇಡ, ನೀರಿನಲ್ಲಿದ್ದರೆ ತಕ್ಷಣ ಹೊರ ಬನ್ನಿ. ವಿದ್ಯುತ್ ಕಂಬ, ಎಲಕ್ಟ್ರಿಕಲ್ ಟವರ್, ಮೊಬೈಲ್ ಟವರ್, ಟ್ರಾನ್ಸ್ ಫಾರ್ಮರ್ ಮುಂತಾದವುಗಳ ಹತ್ತಿರವೂ ಇರಬೇಡಿ.

ಸಿಡಿಲು ಬರುವಾಗ ಟೆರೆಸ್ ಮೇಲಿರಬೇಡಿ :- ತಂತಿಬೇಲಿ, ಬಟ್ಟೆ ಒಣ ಹಾಕುವ ತಂತಿ ಇವುಗಳಿಂದ ದೊರವಿರಿ. ಮಳೆ ಬರುವ ಸಮಯದಲ್ಲಿ ಮನೆಯ ಟೆರೇಸ್ ಸ್ವಚ್ಛ ಮಾಡುವ ಸಾಹಸ ಬೇಡ. ಮನೆಯ ಕಿಟಕಿಯ ಬಳಿ ನಿಲ್ಲುವುದಕ್ಕಿಂತಲೂ ಮನೆಯ ಮಧ್ಯದಲ್ಲಿರುವುದು ಸುರಕ್ಷಿತ.

ಮೊಬೈಲ್ ದೂರ ಇರಲಿ  :- ಗುಡುಗು-ಸಿಡಿಲಿನ ಸಂದರ್ಭದಲ್ಲಿ ಫೋನ್ ಮಾಡಬೇಡಿ. ಅದನ್ನು ಚಾರ್ಜ್ ಮಾಡುವ ಸಹಸವೂ ಬೇಡ. ಕಾರಿನಲ್ಲಿ ಪ್ರಯಾಣಿಸುತ್ತಿದ್ದರೆ ಗಾಜನ್ನು ಮುಚ್ಚಿಕೊಳ್ಳಿ. ಕಾರಿನ ಬಾಡಿಯನ್ನು ಸಾಧ್ಯವಾದಷ್ಟು ಸ್ಪರ್ಶಿಸದೆ ಮಧ್ಯದಲ್ಲಿ ಕುಳಿತುಕೊಳ್ಳುವುದು ಒಳ್ಳೆಯದು. ಕಂಪ್ಯೂಟರ್ ಗಳಿಂದ ದೂರ ಇರಿ, ಜೊತೆಗೆ ಮನೆಯ ಕಾoಕ್ರೇಟ್ ಗೋಡೆಗಳನ್ನು ಸ್ಪೆರ್ಶಿಸದೆ. ಕೋಣೆಯ  ಮಧ್ಯದಲ್ಲಿದ್ದರೆ ಹೆಚ್ಚು ಸುರಕ್ಷಿತ. ಲೋಹದ ವಸ್ತುಗಳಿಂದ ಅಂತರ ಕಾಪಾಡಿಕೊಳ್ಳಿ ಸಿಡಿಲು ಆರ್ಭಟಿಸುವಾಗ ಲೋಹದ ವಸ್ತುಗಳನ್ನು ಮುಟ್ಟಬೇಡಿ. ಉದಾಹರಣೆಗೆ ಕುಡುಗೋಲು, ಕತ್ತಿ, ಹಾರೆ, ಕೊಡಲಿ ಇತ್ಯಾದಿಗಳನ್ನು ಮುಟ್ಟಬೇಡಿ. ಕರಾವಳಿ, ಮಲೆನಾಡು ಭಾಗದಲ್ಲಿ ಸಿಡಿಲು ಬಂದಾಗ ಲೋಹದ ವಸ್ತುಗಳನ್ನು ಅಂಗಳಕ್ಕೆ ಎಸೆಯುತ್ತಾರೆ.

ವಿದ್ಯುತ್ ಉಪಕರಣ ಬಳಸಬೇಡಿ :- ಮನೆಯಲ್ಲಿನ ವಿದ್ಯುತ್ ಪ್ರವಾಹದ ಮೇನ್ ಸ್ವಿಚ್ ಆಫ್ ಮಾಡಿ ವಿದ್ಯುತ್ ಪ್ರವಾಹವನ್ನು ಸ್ಥಗಿತಗೊಳಿಸಬೇಕು. ದೂರದರ್ಶನ ಉಪಕರಣ, ಮಿಕ್ಸರ್ ಇತ್ಯಾದಿ ವಿದ್ಯುತ್ ಉಪಕರಣಗಳ ಪಿನ್ ಬೋರ್ಡ್ ನಿಂದ ಕಳಚಿಡಬೇಕು.

ಎಸಿ, ಫ್ರಿಜ್ಡ್ ಬಳಕೆ ಬೇಡ :- ಈ ಅವಧಿಯಲ್ಲಿ ಲಿಫ್ಟ್, ಹವಾ ನಿಯಂತ್ರಕ (ಎ.ಸಿ), ಹೇರ್ ಡ್ರೈಯರ್ ಇತ್ಯಾದಿಗಳನ್ನು ಉಪಯೋಗಿಸಬಾರದು.ಶೀತಕವನ್ನು (ಫ್ರಿಜ್) ಸ್ಪರ್ಶಿಸಬಾರದು.  ಸುರಕ್ಷತೆಯ ದೃಷ್ಟಿಯಿಂದ ಮೊಬೈಲ್ ಉಪಯೋಗಿಸದಿದ್ದರೆ ಒಳ್ಳೆಯದು ಈ ರೀತಿ ಟಿಪ್ಸ್‌ಗಳನ್ನು ಉಪಯೋಗಿಸಿ, ಸಿಡಿಲು, ಮಿಂಚಿನ ಅಪಾಯದಿಂದ ನಿಮ್ಮನ್ನು  ನೀವು ರಕ್ಷಿಸಿಕೊಳ್ಳಬಹುದು, ಇದರಿಂದಾಗಿ ಅಪಾರ ಜೀವಹಾನಿಯನ್ನು ತಪ್ಪಿಸಬಹುದು.

ವರದಿ :- ಸಂಪಾದಕೀಯಾ.

Leave a Reply

Your email address will not be published. Required fields are marked *