*  ಮಾತಿನ ಭಾಗದ ಚಿತ್ರೀಕರಣ ಮುಗಿಸಿದ ‘ಸುಮಾ’*

Spread the love

*  ಮಾತಿನ ಭಾಗದ ಚಿತ್ರೀಕರಣ ಮುಗಿಸಿದ ‘ಸುಮಾ*

‘ಓಂ ಸಾಯಿ ಸಿನಿಮಾಸ್’ ಬ್ಯಾನರಿನಲ್ಲಿ ನಿರ್ಮಾಣವಾಗುತ್ತಿರುವ ಮಹಿಳಾ ಪ್ರಧಾನ ಕಥಾಹಂದರ ಹೊಂದಿರುವ ‘ಸುಮಾ’ ಸಿನಿಮಾದ ಮಾತಿನ ಭಾಗದ ಚಿತ್ರೀಕರಣ ಸಂಪೂರ್ಣ ಮುಕ್ತಾಯಗೊಂಡಿದೆ.

ಮಂಡ್ಯ ಜಿಲ್ಲೆಯ ಕೆ ಎಂ ದೊಡ್ಡಿ (ಭಾರತೀನಗರ), ಆಲಭುಜನಹಳ್ಳಿ, ನಗರಕೆರೆ ಮತ್ತು ಮಾಲಗಾರನಹಳ್ಳಿಯ ಸುತ್ತಮುತ್ತ ಒಟ್ಟು ೧೫ ದಿನಗಳ ಕಾಲ ಸತತ ಚಿತ್ರೀಕರಣವನ್ನು ಮಾಡಲಾಗಿದ್ದು ,ಈ ಹಿಂದೆ ಕನ್ನಡದಲ್ಲಿ ‘ಶ್ರೀಕಬ್ಬಾಳಮ್ಮನ ಮಹಿಮೆ’, ‘ಮನೆ’, ‘ಬ್ಯಾಂಕ್ ಲೋನ್’, ‘ಸುಳಿ’ ಸೇರಿದಂತೆ ನಾಲ್ಕು ಸಿನಿಮಾಗಳನ್ನು ನಿರ್ದೇಶಿಸಿ ಸೈ ಎನಿಸಿಕೊಂಡಿರುವ ರಶ್ಮಿ ಎಸ್. ‘ಸುಮಾ’ ಸಿನಿಮಾಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.  ಮೈಸೂರು ಮೂಲದ ಪ್ರದೀಪ್ ಗೌಡ ನಾಯಕನಾಗಿ, ನಾಯಕಿಯಾಗಿ ಮೊದಲ ಬಾರಿಗೆ ಮಾನ್ಯತಾ ನಾಯ್ಡು, ಉಳಿದಂತೆ ಚಿತ್ರರಂಗದ  ಜನಪ್ರಿಯ ಕಲಾವಿದರಾದ  ಬಲರಾಜವಾಡಿ, ಜೋಸೈಮನ್,  ಮುರಳೀಧರ್ ಡಿ. ಆರ್, ಕಾವ್ಯ ಪ್ರಕಾಶ್, ಪವಿತ್ರ ,ವಿಜಯಲಕ್ಷ್ಮೀ, ಅವಿನಾಶ ಗಂಜಿಹಾಳ,  ಶಿವಕುಮಾರ್ ಆರಾಧ್ಯ , ಹರಿಹರನ್ ಬಿ. ಪಿ,ವೀರೇಂದ್ರ ಬೆಳ್ಳಿಚುಕ್ಕಿ, ಡಾ.ಕುಮಾರ,ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ ಧಾರಾವಾಹಿ ಖ್ಯಾತಿಯ ಭೈರವಿ, ಮಂಜುಳಾ,ಸಿದ್ದು ಮಂಡ್ಯ,ಮಾ.ಜಲಶ್ರೀಗೌಡ,ಮಾ.ಯಶವಂತಗೌಡ,ಮಾ.ರಂಗನಾಥ ಗೌಡ ಮುಂತಾದವರು ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.

ಇದೇ ವೇಳೆ ಮಾತನಾಡಿದ ಚಿತ್ರತಂಡ, ‘ಇದೊಂದು ಮಹಿಳಾ ಪ್ರಧಾನ ಕಥಾಹಂದರದ ಸಿನಿಮಾ. ‘ಸುಮಾ’ ಅಂದ್ರೆ ಸಂಪೂರ್ಣ ಮೊಗ್ಗು ಅಲ್ಲದ, ಸಂಪೂರ್ಣ ಅರಳಿಯೂ ಇರದಂತಹ ಹೂವು. ಈ ಸಿನಿಮಾದ ನಾಯಕಿಯ ಪಾತ್ರ ಕೂಡ ಹಾಗೇ ಇರುವಂಥದ್ದು. ನಮ್ಮ ನಡುವೆಯೇ ಇರುವಂಥ ಹುಡುಗಿಯೊಬ್ಬಳ ಅಂತರಂಗದ ಕಥೆ ಈ ಸಿನಿಮಾದಲ್ಲಿದೆ. ಮಾತಿನ ಭಾಗ ಸಂಪೂರ್ಣ ಮುಗಿಸಿದ್ದು   ಹಾಡಿನ ಚಿತ್ರೀಕರಣ ಬಾಕಿ ಇದೆ. ಇದಕ್ಕಾಗಿ  ಸುಮಾ ಚಿತ್ರತಂಡ ಊಟಿ ಮತ್ತು ಗೋವಾ ಕಡೆ ಹೊರಡಲಿದೆ ಎಂದರು. ತಾಂತ್ರಿಕ ವರ್ಗದಲ್ಲಿ  ದೇವೂ ಛಾಯಾಗ್ರಹಣ,ಸಹಾಯ ಗಗನ, ಮುತ್ತುರಾಜ್ ಟಿ. ಸಂಕಲನವಿದೆ. ಸಿನಿಮಾದ ಹಾಡುಗಳಿಗೆ ಎನ್. ರಾಜು ಮತ್ತು ಅತಿಶಯ್ ಜೈನ್ ಸಂಗೀತವಿದ್ದು, ಸತೀಶ್ ಜೋಶಿ ಹಾವೇರಿ ಸಾಹಿತ್ಯವಿದೆ. ಮೇಘನ ಹಳಿಯಾಳ ಮತ್ತಿತರರು ಹಾಡುಗಳಿಗೆ ಧ್ವನಿನೀಡಿದ್ದಾರೆ , ಮೇಕಪ್ ಆನಂದ ,ಕುಶಾಲನಗರ ನೇತ್ರಾ, ನೃತ್ಯ ದರ್ಶನ್,ನಿತಿನ್ ಆನಂದ ,ಚಿತ್ರ ತಂಡದ ಸಹಾಯಕರಾಗಿ ಲೋಹಿತಗೌಡ,ಭರತಗೌಡ,ನಿಶಾಂತಗೌಡ,ರಾಜಕುಮಾರ (ಮುರುಗವೇಲ), ಸುನೀಲ,ಅರವಿಂದ,ಬೆಳಕು-ಮಾಮು,ಸಿದ್ದು,ನಾಗೇಶ,ಕಲಾ ನಿರ್ದೇಶನ ಅಜೇಯ , ಪತ್ರಿಕಾಸಂಪರ್ಕ ಡಾ.ಪ್ರಭು ಗಂಜಿಹಾಳ,ಡಾ.ವೀರೇಶ ಹಂಡಿಗಿ ಅವರದಿದೆ. ಸಿನಿಮಾಕ್ಕೆ ರಂಗಸ್ವಾಮಿ ಟಿ (ರವಿ) ಸಹ ನಿರ್ಮಾಪಕರಾದರೆ.  ಓಂ ಸಾಯಿ ಸಿನಿಮಾಸ್ ಈ ಚಿತ್ರದ ನಿರ್ಮಾಪಕರಾಗಿದ್ದಾರೆ. ಚಿತ್ರತಂಡದ ಯೋಜನೆಯಂತೆ, ಇದೇ ಆಗಷ್ಟ್ ವೇಳೆಗೆ ‘ಸುಮಾ ಸಿನಿಮಾದ ಕೆಲಸಗಳನ್ನು ಪೂರ್ಣಗೊಳಿಸಿ, ಪ್ರೇಕ್ಷಕರ ಮುಂದೆ ತರುವ ಯೋಚನೆಯಲ್ಲಿದೆ ಚಿತ್ರತಂಡ.

ವರದಿ-ಡಾ.ಪ್ರಭು ಗಂಜಿಹಾಳ.

Leave a Reply

Your email address will not be published. Required fields are marked *