CPI(ML) ಮಾಸ್ ಲೈನ್ ನೇತೃತ್ವದಲ್ಲಿ  ಕಾರ್ಪೋರೇಟ ಕೋಮುವಾದಿ ಬಿಜೆಪಿಯನ್ನು  ಸೋಲಿಸಿ!

Spread the love

ಇಂಡಿಯಾ ಮೈತ್ರಿ ಕೂಟದ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲು ಪ್ರಚಾರ ಆಂದೋಲ ನಡೆಸಲಾಯಿತು.

ನರೆಗಲ್, ಮಾದಿನೂರ, ನರೆಗಲ್ ಕ್ಯಾಂಪ್,ಯತನಹಟ್ಟಿ ಗ್ರಾಮಗಳಲ್ಲಿ ನಡೆದ ಪ್ರಚಾರ ಸಭೆಯನ್ನು ಉದ್ದೇಶಿಸಿ ಸಿಪಿಐ(ಎಂಎಲ್ )  ಮಾಸ್ ಲೈನ್ ರಾಜ್ಯ ಕಾರ್ಯದರ್ಶಿ ಡಿ.ಹೆಚ್.ಪೂಜಾರ  ಪ್ರಧಾನಿ ಮೋದಿಜಿವರು ದೊಡ್ಡ ಸುಳ್ಳು ಹೇಳುತ್ತಿದ್ದಾರೆ. ಕಾಂಗ್ರೆಸ್, ಅದಾನಿ ಅಂಬಾನಿ ಇತರೆ ಕಂಪನಿಗಳ ಹೆಚ್ಚುವರಿ ಸಂಪತ್ತ ನ್ನು ಬಡವರಿಗೆ ಹಂಚಿಕೆ ಮಾಡುವ ವಿಷಯವನ್ನು ಉಲ್ಟಾ ಮಾಡಿದ್ದಾರೆ. ಅಂದರೆ ಮಧ್ಯಮ ವರ್ಗದ ಜನರ ಬಂಗಾರ ಬೆಳ್ಳಿ,ಮಾಂಗಲ್ಯ ಗಳನ್ನು ಮುಸ್ಲೀಂ ಭಯೋತ್ಪದಕರಿಗೆ ಹಂಚಿಕೆ ಮಾಡುತ್ತಾರೆಂದು ಕೀಳು ಮಟ್ಟದ ಮಾತುಗಳನ್ನಾಡಿದ್ದಾರೆ.

TUCI ರಾಜ್ಯ ಕಾರ್ಯದರ್ಶಿ ಕೆ.ಬಿ.ಗೋನಾಳ ಮಾತನಾಡಿ, ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ರೈತರ ಸಾಲ ಮನ್ನಾ ಮಾಡುವ, ಮಹಿಳೆಯರಿಗೆ ಒಂದು ವರ್ಷಕ್ಕೆ ಲಕ್ಷ ರೂ. ಕೊಡುವ ಘೋಷಣಿ ಮಾಡಿದ. ಇಂತಹ ಅಂಶಗಳು ಬಿಜೆಪಿಯ ಪ್ರಣಾಳಿಕೆಯಲ್ಲಿ ಇಲ್ಲಾ. ಹಾಗಾಗಿ ಕಾಂಗ್ರೆಸ್  ನೇತ್ರತ್ವದ  ಇಂಡಿಯ ಮೈತ್ರಿ ಪಕ್ಷಕ್ಕೆ ಮತ ಕೊಟ್ಟು ಬಿಜೆಪಿಯನ್ನು ಸೋಲಿಸಲು ಕರೆ ಕೊಡಲಾಯಿತು.

ಕರ್ನಾಟಕ ರೈತ ಸಂಘ ಜಿಲ್ಲಾ ಕಾರ್ಯದರ್ಶಿ ಬಸವರಾಜ ನರೆಗಲ್, DSS ನ ಸಂಚಾರಕರಾದ ಮುದಕಪ್ಪ ಹೊಸಮನಿ ಇತರರು

*ಪ್ರಜಾತಂತ್ರ ಮತ್ತು ಸಂವಿಧಾನವನ್ನು  ರಕ್ಷಿಸಿ!!

ಕಾರ್ಪೋರೇಟ ಕಿಂಗ್ ನ ಅಲೆಯಲ್ಲಿ ಚುನಾವಣೆ ಗೆಲುವಿನ ಭ್ರಮೆ ಮೋದಿಯವರಿಗೆ ಕುಟುಂಬ ಇಲ್ಲವೆಂದು; ತ್ಯಾಗಿ, ಯೋಗಿ ಇತ್ಯಾದಿ ಬಿರುದುಗಳಿಂದ ಮಾಧ್ಯಮಗಳು ಅವರನ್ನು ವೈಭವಕರಿಸುತ್ತಿವೆ ಮತ್ತು  ದೇಶದ ಒಂದು ಸಣ್ಣ   ವರ್ಗದ ಜನರನ್ನು ನಂಬಿಸಲಾಗಿದೆ.

ಅದಾನಿ, ಅಂಬಾನಿ ಇತರೆ ಕಾರ್ಪೋರೇಟ ಕುಟುಂಬವೆ ಮೋದಿಯವರ ಅವಿಭಕ್ತ ಕುಟುಂಬವಾಗಿದೆ. ಈ ಕಾರಣದಿಂದಲೆ ಕಳೆದ 10 ವರ್ಷಗಳಿಂದ  ದೇಶದ ರೈತರ ಭೂಮಿ ಸೇರಿದಂತೆ  ಸಾರ್ವಜನಿಕ ಸಂಪತ್ತು ಅದಾನಿ, ಅಂಬಾನಿ ಇತರೆ ಕಾರ್ಪೋರೇಟ ಕಂಪನಿಗಳ ವಶವಾಗುತ್ತಿದೆ. 2014 ರಲ್ಲಿ ಅದಾನಿ ಸಂಪತ್ತು 80 ಸಾವಿರ  ಕೋಟಿ.ಅಂಬಾನಿ ಸಂಪತ್ತು 1.15 ಲಕ್ಷ ಕೋಟಿ.   2024  ವರದಿಗಳ ಪ್ರಕಾರ ಅದಾನಿ ಸಂಪತ್ತು 15 ಲಕ್ಷ ಕೋಟಿ ಮತ್ತು ಅಂಬಾನಿ ಸಂಪತ್ತು 17 ಲಕ್ಷ  ಕೋಟಿಯಾಗಿದೆ.

ಒಂದು ಕಡೆ ಇವರ ಸಂಪತ್ತು  15 ಪಟ್ಟು  ಹೆಚ್ಚಾದರೆ ಇನ್ನೊಂದು ಕಡೆ  ದೇಶದ ಸಾಲ ಕಳೆದ 10 ವರ್ಷಗಳ ( 2014 ರಲ್ಲಿ ದೇಶ ಸಾಲ 53 ಲಕ್ಷ ಕೋಟಿ ) ಲ್ಲಿ  195 ಲಕ್ಷ ಕೋಟಿ ಹೇರಿಕೆಯಾಗಿದೆ. ಕೇಂದ್ರ ಸರ್ಕಾರ ಪ್ರತಿ ವರ್ಷ  ವಿಶ್ವ ಬ್ಯಾಂಕಿಗೆ  9 ರಿಂದ  11 ಲಕ್ಷ ಕೋಟಿ ಬಡ್ಡಿ ಸಂದಾಯ ಮಾಡುತ್ತಿದೆ. ದೇಶ ಆರ್ಥಿಕ ಬಿಕ್ಕಟ್ಟಿನಲ್ಲಿರುವುದರಿಂದ ಮೂರು ತಿಂಗಳಿಂದ ದೇಶದ  ಜನರಿಗೆ ಉದ್ಯೋಗ ಖಾತ್ರಿ ಕೂಲಿ ಕೊಟ್ಟಿಲ್ಲ. ರಾಜ್ಯದ ಜನರು ಬರದಿಂದ  ತೀವ್ರ ಸಂಕಷ್ಟಕ್ಕಿಡಾಗಿದ್ದರೂ  ಬರ ಪರಿಹಾರ ಕೊಡದೆ ತಾರತಮ್ಯ ಮಾಡುತ್ತಿದೆ. ದೇಶ, ರಾಜ್ಯದ ಜನರು ಹಸಿವು, ಬಡತನ, ಅನಾರೋಗ್ಯ ಹಾಗೂ ಸಾಲದ ಸುಳಿಯಲ್ಲಿ  ನರಳುತ್ತಿದ್ದರೆ, ಬಿಜೆಪಿಯವರು  ಕಾರ್ಪೋರೇಟ ಕಿಂಗ್ ಮೋದಿಯವರ ಅಲೆಯಲ್ಲಿ  ಚುನಾವಣೆ ಗೆಲ್ಲುವ ಭ್ರಮೆಯಲಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಜಾತಂತ್ರವಾದಿಗಳು, ವಿದ್ಯಾರ್ಥಿ ಯುವಜನರು, ರೈತ ಕಾರ್ಮಿಕರು, ಮಹಿಳೆಯರು  ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ, RSS ಕೋಮುವಾದಿ ಪ್ಯಾಸಿಸ್ಟ್ ಶಕ್ತಿಗಳನ್ನು  ಸೋಲಿಸಬೇಕು ಮತ್ತು ದೇಶದ ಸಂವಿಧಾನ, ಸಾರ್ವಭೌಮತ್ವವನ್ನು ರಕ್ಷಿಸಬೇಕೆಂದು ಕರೆ ಕೋಡಲಾಗಿದೆ. CPIML ಮಾಸ್ ಲೈನ್ ಜಿಲ್ಲಾ ಸಮಿತಿ ಕೊಪ್ಪಳ.

ವರದಿ-ಸಂಪಾದಕೀಯಾ

Leave a Reply

Your email address will not be published. Required fields are marked *