ತುಮಕೂರು ಪತ್ರಕರ್ತರ ಭವನದಲ್ಲಿ ನಡೆದ ಫಿಲಂ ಚೇಂಬರ್ ಕರ್ನಾಟಕ ಫಿಲಂ ಅಸೋಸಿಯೇಷನ್ (ರಿ ) ಸಂಸ್ಥೆಯ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ಯಶಸ್ವಿ.

Spread the love

ಈ ದಿನ ತುಮಕೂರು ಜಿಲ್ಲೆಯ ಪತ್ರಕರ್ತರ ಭವನದಲ್ಲಿ ನಡೆದ ನಮ್ಮ ಫಿಲಂ ಚೇಂಬರ್ ಕರ್ನಾಟಕ ಫಿಲಂ ಅಸೋಸಿಯೇಷನ್ (ರಿ ) ಸಂಸ್ಥೆಯ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ಯಶಸ್ವಿಗೊಳಿಸಿದರು ಈ ಸಂದರ್ಭದಲ್ಲಿ ಕನ್ನಡ ಚಲನ ಚಿತ್ರರಂಗದ ಹಿತದುಷ್ಟಿಯಿಂದ ಹೊಸ ಕಲಾವಿದರು ಹಾಗೂ ಹಿರಿಯ ಕಲಾವಿದರು ಜೊತೆಗೂಡಿ ನೂತನವಾಗಿ ಪ್ರಾರಂಭಿಸಿದ ಕರ್ನಾಟಕ ಫಿಲಂ ಅಸೋಸಿಯೇಷನ್‌ ಎಂಬ ಫಿಲಂ ಚೇಂಬರ್ ಸ್ಥಾಪನೆ ಮಾಡಿದ್ದು ವಿಶೇಷವಾಗಿದೆ. ಇವರಲ್ಲಿ ಮೂವಿ ಬ್ಯಾನರ್‌, ಅಜೀವ ಸದಸ್ಯತ್ವ 5000/- ಹಾಗೂ ಮೂವಿ ಟೈಟಲ್ 500/- ನೊಂದಣಿ ಆಗಿರುತ್ತದೆ. ಸಿನಿಮಾಗೆ ಸಂಬಂಧಪಟ್ಟ ಕಲಾವಿದರು, ನಿರ್ದೇಶಕರು, ಕ್ಯಾಮೆರಾಮ್ಯಾನ್, ಡ್ಯಾನ್ಸ್, ಸಂಗೀತ, ಫೈಟ್ ಮಾಸ್ಟರ್ ಎಲ್ಲ ವಿಭಾಗ ಅಜೀವ ಸದಸ್ಯತ್ವ 2000/- ಇರುತ್ತೆ. ನೋಂದಣಿ ಮಾಡಿ ID ಕಾರ್ಡ್ (ಗುರುತಿನ ಚೀಟಿ) ಕೊಡಲಾಗುವುದು ಜೊತೆಗೆ ಪ್ರತಿಯೊಬ್ಬ ಸದಸ್ಯರು ಅಸೋಸಿಯೇಷನ್‌ ಚುನಾವಣೆಯಲ್ಲಿ ಸ್ಪರ್ಧೆ ಮಾಡಬಹುದು ಮತ್ತು ವೋಟ್ ಪವರ್ ಇರುತ್ತೆದೆ ಎಂದು ಹೇಳಿದ್ದಾರೆ. ಇವರ ಸಮಾಜಮುಖಿ ಕೆಲಸಕ್ಕೆ ಮಾಧ್ಯಮ ಬಂಧುಗಳು ಆಶೀರ್ವಾದ ಮಾಡಬೇಕು ಎಂದು ಮಾನ್ಯ ಎಮ.ಎಸ್.ರವೀಂದ್ರ ಕೇಳಿಕೊಂಡರು, ಎಲ್ಲ ಪತ್ರಿಕಾ ಹಾಗೂ ಟಿವಿ ಮಾಧ್ಯಮ ಬಂದುಗಳಿಗೆ ಹೃದಯ ಪೂರ್ವಕ ಧನ್ಯವಾದಗಳು ತಿಳಿಸಿದರು. ತುಮಕೂರು ಪರಮ ಪೂಜ್ಯ ಶ್ರೀ ಶಿವಕುಮಾರ ಸ್ವಾಮೀಜಿಯವರ ಮಠ ಸನ್ನಿದಿಗೆ ಹೋಗಿ ದೇವರ ದರ್ಶನ ಪಡೆಯುವುದು ನಮ್ಮ ಪುಣ್ಯ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದರು.

ವರದಿ-ಸಂಪಾದಕೀಯಾ.

Leave a Reply

Your email address will not be published. Required fields are marked *