ಸಂಭ್ರಮದಿಂದ ಜರುಗಿದ ಮುದೇನೂರಿನ ಚಂದ್ರಶೇಖರ ಅಜ್ಜನ ಮಹಾ ರಥೋತ್ಸವ..

Spread the love

ಸಂಭ್ರಮದಿಂದ ಜರುಗಿದ ಮುದೇನೂರಿನ ಚಂದ್ರಶೇಖರ ಅಜ್ಜನ ಮಹಾ ರಥೋತ್ಸವ..

ಮುದೇನೂರ:   ಭಕ್ತರ ಪಾಲಿನ ಆರಾಧ್ಯ ದೈವ ಮುದೇನೂರ ಗ್ರಾಮದ ಉಮಾ ಚಂದ್ರಮೌಳೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಐದು ದಿನಗಳ ಕಾಲ ನಡೆಯುವ ಮಹಾರಥೋತ್ಸವವು  ಅದ್ದೂರಿಯಾಗಿ ಜರುಗಿತು.

ಶ್ರೀ ಚಂದ್ರಶೇಖರ ಅಜ್ಜನ ಮಹಾರಥೋತ್ಸವವು  ಅಪಾರಭಕ್ತರ ಸಮ್ಮುಖದಲ್ಲಿ ವಿಜ್ರಂಬಣೆಯಿಂದ ಜರಗಿತು.

ಬೆಳಗ್ಗೆಯಿಂದಲೇ ಮಹಾ ತಪಸ್ವಿ ಶ್ರೀ ಚಂದ್ರಶೇಖರ್ ಮಹಾಸ್ವಾಮಿಗಳ ಭಾವಚಿತ್ರದ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಅಪಾರ ಭಕ್ತರ ಸಮ್ಮುಖದಲ್ಲಿ ಜರುಗಿತು.

ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀಮಠಕ್ಕೆ ಮಾಜಿ ಸಚಿವರಾದ ಅಮರೇಗೌಡ ಬಯ್ಯಾಪುರ ಆಗಮಿಸಿ ಪೂಜ್ಯರ ಆಶೀರ್ವಾದ ಪಡೆದರು.

ನಂತರ ಸಂಜೆ ಪೂಜ್ಯ ಶ್ರೀ  ಮರುಳಸಿದ್ದ ದೇವರ ಸಾನಿಧ್ಯದಲ್ಲಿ , ವಾದ್ಯ ಮೇಳಗಳೊಂದಿಗೆ ಕಲಾತಂಡಗಳೊಂದಿಗೆ ಸಂಭ್ರಮದಿಂದ   ಅಜ್ಜನ ರಥೋತ್ಸವ ಜರುಗಿತು.

ರಾತ್ರಿ ಶ್ರೀ ವರದ ಉಮಾ ಚಂದ್ರ ಮೌಳೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ನಾಡಿನ ಅರ ಗುರು ಚರ ಮೂರ್ತಿಗಳ ದಿವ್ಯ ಸಾನಿಧ್ಯದಲ್ಲಿ ಧರ್ಮಸಭೆ ನಡೆಯಿತು

ಶ್ರೀ ಮಹಾ ರಥೋತ್ಸವಕ್ಕೆ ಕುಷ್ಟಗಿ ತಾಲೂಕಿನ ವಿವಿಧ ಗ್ರಾಮಗಳ ಗ್ರಾಮಸ್ಥರು, ಹಾಗೂ ಮೂದೇನೂರು ಗ್ರಾಮದ ಸುತ್ತಮುತ್ತಲಿನ ಗ್ರಾಮದ ಜನರು, ಅಜ್ಜನ ಸದ್ಭಕ್ತರು ಜಾತ್ರೆಗೆ ಆಗಮಿಸಿ ಅಜ್ಜನ ಕೃಪೆಗೆ ಪಾತ್ರರಾದರು.

ರಥೋತ್ಸವ ಶ್ರೀಮಠದ ಜಾತ್ರಾ  ಕಮಿಟಿ ಅವರಿಂದ ಯಶಸ್ವಿಯಾಗಿ ಜರುಗಿತು, ಅಲ್ಲದೆ ಪೊಲೀಸ್ ಇಲಾಖೆ ಬಿಗಿ  ಪೊಲೀಸ್ ಬಂದೋಬಸ್ ವ್ಯವಸ್ಥೆ ಮಾಡಿದ್ದರು.

ವರದಿ-ಚಂದ್ರುಶೇಖರ ಕುಂಬಾರ ಮುದೇನೂರ

Leave a Reply

Your email address will not be published. Required fields are marked *