ಕನಕಗಿರಿ ಉತ್ಸವಕ್ಕೆ ಆಗಮಿಸುವ ಸಿದ್ದರಾಮಯ್ಯರಿಗೆ ಮನವಿ ಸಲ್ಲಿಸಲು ನಿರ್ಧಾರ – ಮಹಾಂತೇಶ್ ಕೊತಬಾಳ.

Spread the love

ಕನಕಗಿರಿ ಉತ್ಸವಕ್ಕೆ ಆಗಮಿಸುವ ಸಿದ್ದರಾಮಯ್ಯರಿಗೆ ಮನವಿ ಸಲ್ಲಿಸಲು ನಿರ್ಧಾರಮಹಾಂತೇಶ್ ಕೊತಬಾಳ.

ಕೊಪ್ಪಳ: ಕನಕಗಿರಿ ಉತ್ಸವಕ್ಕೆ ಆಗಮಿಸಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ನಾವು ಹೋಗಿ ಅವರಿಗೆ ನಮ್ಮ ವಿವಿಧ ಬೇಡಿಕೆಗಳ ಮನವಿಯನ್ನು ಕೊಡುವ ಕಾರ್ಯಕ್ರಮವನ್ನು ಕೂಡ ಹಮ್ಮಿಕೊಳ್ಳಲು ಆಲೋಚನೆ ಮಾಡಿದ್ದೇವೆ ಎಂದು ನಾಗರೀಕ ಹಕ್ಕುಗಳ ಹೋರಾಟ ವೇದಿಕೆಯ (ಪಿಯುಸಿಎಲ್) ಜಿಲ್ಲಾ ಅಧ್ಯಕ್ಷ ಮಹಾಂತೇಶ ಕೊತಬಾಳ ಹೇಳಿದರು.

ನಗರದ ಜಿಲ್ಲಾ ಆಡಳಿತ ಭವನದ ಮುಂದೆ ಅಹೋರಾತ್ರಿ ಧರಣಿ ಸತ್ಯಾಗ್ರಹ ಕೈಗೊಂಡ ಸ್ಥಳದಲ್ಲಿ ಮಹಾಂತೇಶ್ ಕೊತಬಾಳ ಅವರು ಮಾತನಾಡಿ ಹಲವಾರು ಸಂಘಟನೆಯವರು ಈ ದಿಶೆಯಲ್ಲಿ ಕಾರ್ಯಪ್ರವರ್ತರಾಗಿದ್ದಾರೆ. ಇದನ್ನು ಜಿಲ್ಲಾಡಳಿತ ಮತ್ತು ಇಲ್ಲಿಯ ಜನಪ್ರತಿನಿಧಿಗಳು ನಮ್ಮ ಹೋರಾಟವನ್ನು ಗಂಭೀರವಾಗಿ ಪರಿಗಣಿಸಿ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದ ಅವರು ಕೊಪ್ಪಳ ನಗರದಲ್ಲಿ ಸುಮಾರು 800 ವರ್ಷಗಳ ಇತಿಹಾಸವುಳ್ಳ ಕೋಟೆಯ ಹೆಬ್ಬಾಗಿಲುಗಳು ನಾಲ್ಕು ಇದ್ದವು. ಆ ನಾಲ್ಕು ಹೆಬ್ಬಾಗಿಲುಗಳನ್ನು ನಗರಸಭೆ 2015 ರಲ್ಲಿ ಅವುಗಳನ್ನು ನೆಲಸಮ ಮಾಡಿದೆ. ಮೊದಲಿಗೆ ಎರಡು ಕೋಟೆ ಹೆಬ್ಬಾಗಿಲುಗಳನ್ನು ನೆಲಸಮ ಮಾಡಿದಾಗ ಸರ್ಕಾರ ಎರಡು ಹೆಬ್ಬಾಗಿಲುಗಳನ್ನು ಪುನಃ ನಿರ್ಮಾಣ ಮಾಡಬೇಕು ಮತ್ತು ಉಳಿದ ಎರಡು ಹೆಬ್ಬಾಗಿಲುಗಳನ್ನು ಯಥಾ ಸ್ಥಿತಿ ಕಾಪಾಡಬೇಕು ಅಂತ ಆದೇಶ ಮಾಡಿತ್ತು. ಈ ಆದೇಶವನ್ನು ಜಾರಿಗೆ ಮಾಡಿರಿ ಅಂತ ಹೇಳಿ ನಾವು ಪ್ರಗತಿಪರ ಸಂಘಟನೆಗಳ ಒಕ್ಕೂಟ ಮತ್ತು ಹಲವಾರು ಸಂಘಟನೆಗಳು ಸೇರಿ ಅನೇಕ ವರ್ಷಗಳಿಂದ ನಗರಸಭೆಗೆ.ಜಿಲ್ಲಾಡಳಿತಕ್ಕೆ ಮನವಿಯನ್ನು ಸಲ್ಲಿಸಿದಾಗ ಕೂಡ ಇಲ್ಲಿಯ ಜಿಲ್ಲಾಡಳಿತ ಮತ್ತು ನಗರಸಭೆ ನಮ್ಮ ಬೇಡಿಕೆಗಳಿಗೆ ನಿರ್ಲಕ್ಷ್ಯ ಮಾಡಿದೆ. ಆಶ್ರಯ ನಿವೇಶನದಲ್ಲಿ ಹಲವಾರು ಅಕ್ರಮಗಳು ನಡಿತಾ ಇದೆ. ಅದನ್ನು ಒಂದು ರಿಯಲ್ ಎಸ್ಟೇಟ್ ತರಹ ಇವರು ಮಾಡ್ತಾ ಇದ್ದಾರೆ. ಗಣೇಶ್ ನಗರದಲ್ಲಿ ಸುಮಾರು 25 ವರ್ಷಗಳಿಂದ ಒಂದು ಆಶ್ರಯ ನಿವೇಶನದಲ್ಲಿ ವಾಸವಾಗಿರುವ ಚನ್ನಬಸಪ್ಪ ಎಲಿಗಾರ ಎನ್ನುವ ಅಂಗವಿಕಲನು ನಗರಸಭೆಯವರಿಗೆ ಬಹಳಷ್ಟು ವರ್ಷಗಳಿಂದ ನನಗೆ ಈ ಆಶ್ರಯ ನಿವೇಶನವನ್ನು ಮಂಜೂರು ಮಾಡಿಕೊಡಿ ಅಂತ ಮನವಿ ಮಾಡಿದರೂ ಕೂಡ ಅದನ್ನು 2023 ರಲ್ಲಿ ಗೀತಾ ಗಂಡ ಮಂಜುನಾಥ ಬಂಡಿಹಾಳ ಎನ್ನುವವರಿಗೆ ಶಾಸಕರು ಹಂಚಿಕೆ ಮಾಡಿದ್ದಾರೆ. ಇದು ತೀರಾ ಅಮಾನವೀಯವಾದ ಕೆಲಸ. ಸುಮಾರು 25 ವರ್ಷಗಳಿಂದ ಅಂಗವಿಕಲ ಚನ್ನಬಸಪ್ಪ ಅವರು ಆ ನಿವೇಶನದಲ್ಲಿ ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ. ಇದನ್ನು ಸರ್ಕಾರ. ಜಿಲ್ಲಾಡಳಿತ ಮತ್ತು ಶಾಸಕರು ವಿಚಾರ ಮಾಡಿ ಇದನ್ನು ಗಂಭೀರವಾಗಿ ಪರಿಗಣಿಸಿ ಪರಿಹರಿಸಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ನಮ್ಮ ಹೋರಾಟವು ತೀವ್ರತರದ ಸ್ವರೂಪವನ್ನು ಪಡೆದುಕೊಳ್ಳುತ್ತದೆ ಎಂದು ನಾಗರೀಕ ಹಕ್ಕುಗಳ ಹೋರಾಟ ವೇದಿಕೆಯ (ಪಿಯುಸಿಎಲ್) ಜಿಲ್ಲಾ ಅಧ್ಯಕ್ಷ ಮಹಾಂತೇಶ ಕೊತಬಾಳ ಹೇಳಿದರು.  ಈ ಸಂದರ್ಭದಲ್ಲಿ ಅಖಿಲ ಭಾರತ ಕಾರ್ಮಿಕ ಸಂಘಟನೆಗಳ ಒಕ್ಕೂಟದ ಜಿಲ್ಲಾ ಅಧ್ಯಕ್ಷ ಬಸವರಾಜ್ ಶೀಲವಂತರ್. ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಜಿಲ್ಲಾ ಸಂಘಟನಾ ಸಂಚಾಲಕ ತುಕಾರಾಮ್ ಬಿ. ಪಾತ್ರೋಟಿ. ಕೊಳಚೆ ನಿರ್ಮೂಲನಾ ವೇದಿಕೆಯ ಜಿಲ್ಲಾ ಸಂಚಾಲಕ ಗಾಳೆಪ್ಪ ಮುಂಗೊಲಿ. ಜನಪರ ಸಂಘಟನೆಗಳ ಒಕ್ಕೂಟದ ಜಿಲ್ಲಾ ಸಂಚಾಲಕ ಎಸ್.ಎ. ಗಫಾರ್. ಮಹೇಶ್ ಎಲಿಗಾರ. ಚನ್ನಬಸಪ್ಪ ಎಲಿಗಾರ ಮುಂತಾದವರು ಉಪಸ್ಥಿತರಿದ್ದರು.

ವಿಶೇಷ ವರದಿಗಾರರು:- ಎಸ್.ಎ. ಗಫಾರ್.

Leave a Reply

Your email address will not be published. Required fields are marked *