ಬುದ್ದಂ,ಶರಣಂ,ಗಚ್ಛಾಮಿ ಸೇವಾ ಟ್ರಸ್ಟ್  (ರಿ) ವತಿಯಿಂದ ಮುಖ್ಯಾಧಿಕಾರಿಗಳಿಗೆಮನವಿ,  

Spread the love

ವಸತಿ ಮತ್ತು ನಿವೇಶನ ರಹಿತ ಫಲಾನುಭವಿಗಳಿಗೆ ಶಿಘ್ರದಲ್ಲಿ ಬಾಕಿ ಉಳಿದ ಹಕ್ಕುಪತ್ರ ನೀಡಬೇಕು ಜೊತೆಗೆ ಫಲಾನುಭವಿಗಳಿಗೆ ಖಾಲಿ ನಿವೇಶನದ ಜಾಗೆಯನ್ನು ಗುರುತಿಸಿ ಕೋಡುವ ಬಗ್ಗೆ.

ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದ ಬುದ್ದಂ,ಶರಣಂ,ಗಚ್ಛಾಮಿ ಸೇವಾ ಟ್ರಸ್ಟ್ (ರಿ) (KSG-4-00126-2023) ತಾವರಗೇರಾ. ಗೌರವ ಅಧ್ಯಕ್ಷರಾದ ಶ್ರೀ ಲಕ್ಷ್ಮಣ ಮುಖಿಯಾಜಿ ಹಾಗೂ ರಾಜಾನಾಯ್ಕ ಕಾರ್ಯಧರ್ಶಿಗಳು ಮತ್ತು ಶ್ರೀ ಯಮನೂರಪ್ಪ ಬಿಳೆಗುಡ್ಡ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಸೇರಿ ತಾವರಗೇರಾ ಪಟ್ಟಣ ಪಂಚಾಯತಿಯ ಮುಖ್ಯಾಧಿಕಾರಿಗಳಿಗೆ 2019-20ನೇ ಸಾಲಿನ “ವಾಜಪೇಯ ನಗರ ವಸತಿ ಯೋಜನೆ”ಅಡಿಯಲ್ಲಿ ತಾವರಗೇರಾ ಪಟ್ಟಣದ ನಾಗರಿಕರು ಅರ್ಜಿ ಸಲ್ಲಿಸಲಾಗಿತ್ತು.

ಅರ್ಜಿಗಳ ವಿವರ :-

1) 2017 ರಿಂದ ವಸತಿ ಮತ್ತು ನಿವೇಶನಕ್ಕೆ ಸುಮಾರು 747 ಅರ್ಜಿಗಳನ್ನ ಸಲ್ಲಿಸಲಾಗಿತ್ತು,

2) ಈ ಅರ್ಜಿಗಳಲ್ಲಿ ದಿನಾಂಕ 12/06/2020 ರಂದು ನಮಗೆ ಮಾಹಿತಿ ನೀಡಿದ ಪ್ರಕಾರ 435 ಅರ್ಜಿಗಳನ್ನ ಕೈಗೆತ್ತಿಕೊಂಡು ಆಯ್ಕೆ ಮಾಡಲಾಯಿತು.

3) ತದ ನಂತರ ದಿನಾಂಕ 20/07/2021 ರಲ್ಲಿ ನಮಗೆ ಮಾಹಿತಿ ನೀಡಿದ ಪ್ರಕಾರ ಈ ಮೇಲಿನ 435 ಅರ್ಜಿಗಳಲ್ಲಿ ಕೆಲವೊಂದನ್ನು ತಗೇದು ಹಾಕಿ ಕೊನೆಗೆ 351 ಅರ್ಜಿಗಳನ್ನ ಅಂತೀಮ ಪಟ್ಟಿಯನ್ನಾಗಿ ಘೋಸಿಸಲಾಯಿತು,

4) ದಿನಾಂಕ 05/10/2021 ರಲ್ಲಿ ನಿವೇಶನ ರಹಿತ ಫಲಾನುಭವಿಗಳಲ್ಲಿ 351 ಅಂತೀಮ ಪಟ್ಟಿಯಲ್ಲಿ, ಸುಮಾರು 296 ಫಲಾನುಭವಿಗಳಿಗೆ ಮಾನ್ಯ ಈ ಇಂದಿನ ಶಾಸಕರಾದ ಶ್ರೀ ಅಮಾರೇಗೌಡ ಎಲ್ ಪಾಟೀಲ್ ರವರು ಹಕ್ಕುಪತ್ರವನ್ನು ನೀಡಿದರು.

5) ಈ 351 ಫಲಾನುಭವಿಗಳ ಪಟ್ಟಿಯಲ್ಲಿ 296 ಫಲಾನುಭವಿಗಳಿಗೆ ಹಕ್ಕುಪತ್ರ ನೀಡಿಲಾಗಿದೆ. ಅದರಲ್ಲೂ ಇನ್ನೂ 55 ಫಲಾನುಭವಿಗಳ ಪಟ್ಟಿಯನ್ನು ಬಾಕಿ ಉಳಿಸಲಾಗಿರುತ್ತದೆ.

ಅಂದಿನಿಂದ ಇಲ್ಲಿಯವರೆಗೂ ಪಂಚಾಯತ ಮಟ್ಟದ ಅಧಿಕಾರಿಗಳು ಈ ಮೇಲಿನ ವಸತಿ ಮತ್ತು ನಿವೇಶನ ರಹಿತ ಫಲಾನುಭವಿಗಳು ರಾತ್ರಿ ಕಂಡ ಭಾವಿಯಲ್ಲಿ ಹಗಲೆ ಹೋಗಿ ಬಿದ್ದಂತ್ತಾಗಿದೆ. ಏನೇ ಇರಲಿ ಇನ್ನೂಳಿದ 55 ಫಲಾನುಭವಿಗಳಿಗೆ ಶೀಘ್ರವೆ ವಸತಿ ಮತ್ತು ನಿವೇಶನ ರಹಿತ ಹಕ್ಕು ಪತ್ರ ಪೂರೈಸಬೇಕು, ಜೊತೆಗೆ ಹಕ್ಕು ಪತ್ರ ನೀಡಿದ ನಂತರ ಫಲಾನುಭವಿಗಳಿಗೆ ಕೂಡಲೆ ಖಾಲಿ ನಿವೇಶನದ ಜಾಗವನ್ನು ಗುರುತಿಸಿಕೋಡಬೇಕು, ನಂತರ ಸದ್ಯ ಪಟ್ಟಣ ಪಂಚಾಯತ ಕಾರ್ಯಾಲಯದಿಂದ ಪುನಃಹ ಆಶ್ರಯ ನಿವೇಶನಕ್ಕೆ ಅರ್ಜಿ ಕರೆದಿದ್ದು ಇರುತ್ತದೆ, ಸದ್ಯ ನಮ್ಮ ತಾವರಗೇರಾ ಪಟ್ಟಣದ ನಾಗರಿಕರ ಗಮನಕ್ಕೆ ಇನ್ನೂ ಬಂದಿರುವುದಿಲ್ಲ ಹಾಗಾಗಿ ಪಟ್ಟಣ ಪಂಚಾಯತಿಯ ಅಧಿಕಾರಿಗಳು ಮತ್ತು ಸಂಬಂದಪಟ್ಟ ಅಧಿಕಾರಿಗಳು ಸೇರಿ ಪ್ರತಿ ವಾರ್ಡಗಳಿಗೆ ಬೇಟೆ ನೀಡಿ ಡಂಗುರ ಹೊರಡಿಸಬೇಕು, ಜೊತೆಗೆ ಸಾರ್ವಜನಿಕರಿಗೆ ಗಮನಕ್ಕೆ ಬರುವಂತೆ ಪ್ರತಿ ವಾರ್ಡ ಮಟ್ಟದಲ್ಲಿ ಕ್ಯಾಪಿಯನ್ ಮಾಡಬೇಕು, ಜೋತೆಗೆ ಎಲ್ಲಾ ಪತ್ರಿಕೆಯಲ್ಲಿ ಸುದ್ದಿ ಬಿತ್ತಾರ ಆಗಬೇಕು ಜೊತೆಗೆ ಫಲಾನುಭವಿಗಳು ಸಲ್ಲಿಸುವ ಕೊನೆಯ ದಿನಾಂಕ ಇದೇ ತಿಂಗಳು 30/01/2024 ರಂದು ಇರುತ್ತದೆ. ಹಾಗಾಗಿ ಈ ದಿನಾಂಕವನ್ನು ಇನ್ನು ಒಂದು ತಿಂಗಳು ಕಾಲವಕಾಶ ನೀಡಬೇಕೆಂದು ಈ ಮನವಿಯಲ್ಲಿ ಸ್ವ ವಿಸ್ತಾರವಾಗಿ ತಿಳಿಸಲಾಗಿತ್ತು, ಜೊತೆಗೆ ನಿಜವಾದ ಕಡು,ಬಡವ,ನಿರ್ಗತಿಕ ಕುಟುಂಬದವರಿಗೆ ಇಂತಹ ಯೋಜನೆಗಳು ತಲುಪಬೇಕು, ಇಲ್ಲಿ ಕಡು,ಬಡವ,ನಿರ್ಗತಿಕ ಫಲಾನುಭವಿಗಳಿಂದ ಕಳ್ಳರಿಗೆ ಯಾವುದೆ ನಯ್ಯಾಪೈಸ ಸಿಗಬಾರದು  ಎಂಬುಹುದೆ ನಮ್ಮ ಬುದ್ದಂ,ಶರಣಂ,ಗಚ್ಛಾಮಿ ಸೇವಾ ಟ್ರಸ್ಟ್ (ರಿ) ರ ಆಶಯವಾಗಿರುತ್ತದೆ. ಈ ಸಂದರ್ಭದಲ್ಲಿ ಪಟ್ಟಂ ಪಂಚಾಯತ ಮುಖ್ಯಾಧಿಕಾರಿಗಳಾದ ನಭಿಸಾಬ ಹೆಚ್.ಖುದಾನರವರು, ಮತ್ತು ಗೌರವ ಅಧ್ಯಕ್ಷರಾದ ಶ್ರೀ ಲಕ್ಷ್ಮಣ ಮುಖಿಯಾಜಿ ಹಾಗೂ ರಾಜಾನಾಯ್ಕ ಕಾರ್ಯಧರ್ಶಿಗಳು ಮತ್ತು ಶ್ರೀ ಯಮನೂರಪ್ಪ ಬಿಳೆಗುಡ್ಡ ಅಧ್ಯಕ್ಷರು ಮತ್ತು ಸದಸ್ಯರಾದ ದೇವೇಂದ್ರಕುಮಾರ ಹುನಗುಂದ, ರವಿ ಆರೇರ್, ಉಪ್ಪಳೇಶ.ವಿ.ನಾರಿನಾಳ, ಆರ್.ಬಿ.ಅಲಿಆದಿಲ್.ಇತರರು ಪಾಲ್ಗೊಂಡಿದ್ದರು.

ವರದಿ-ಸಂಪಾದಕೀಯಾ

Leave a Reply

Your email address will not be published. Required fields are marked *