ಗಂಡಬೊಮ್ಮನಹಳ್ಳಿ:ಹೋಂ ಕ್ವಾರಂಟೆನ್ ಗಳಿಗೆ ಆಹಾರ ಕಿಟ್ ವಿತರಣೆ-

Spread the love

ಗಂಡಬೊಮ್ಮನಹಳ್ಳಿ:ಹೋಂ ಕ್ವಾರಂಟೆನ್ ಗಳಿಗೆ ಆಹಾರ ಕಿಟ್ ವಿತರಣೆ

ವಿಜಯನಗರ ಜಿಲ್ಲಾ ಕೂಡ್ಲಿಗಿ ತಾಲೂಕು ಗಂಡಬೊಮ್ಮನಹಳ್ಳಿ  ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ, ಕೊರೋನಾ ಸೋಂಕುಳ್ಳ ಪ್ರಕರಣಗಳು ಹೆಚ್ಚು ಕಂಡುಬಂದಿವೆ. ಅನಿವಾರ್ಯವಾಗಿ ಸೋಂಕಿತರು ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಮತ್ತು ಎಲ್ಲಾ ಗ್ರಾಮ ಪಂಚಾಯಿತಿ ಸದಸ್ಯರು ಸೇರಿ,ಎಲ್ಲಾ ಹಳ್ಳಿಗಳಲ್ಲಿ ಕೊರೋನಾ ಸೋಂಕಿತರ ಮನೆಗಳಿಗೆ,ಆಹಾರ ಪದಾರ್ಥಗಳನ್ನು ಅಕ್ಕಿ ಬೇಳೆ ತರಕಾರಿಯನ್ನು  ಆಯಾ ಗ್ರಾಮಗಳ ಸದಸ್ಯರು ವಿತರಣೆ ಮಾಡೋ ಮೂಲಕ ಸೋಂಕಿತರಿಗೆ ನೆರವು ನೀಡುತ್ತಿದ್ದಾರೆ. ಗ್ರಾಮ ಪಂಚಾಯಿತಿ ಸದಸ್ಯ ಪಿ.ಚನ್ನಪ್ಪ, ಮಾತನಾಡಿ,ಕೊರೊನಾ ಈ ಮಹಾಮಾರಿ ರೋಗವು,ನಮ್ಮ ಹಳ್ಳಿಯಲ್ಲಿ ಕಾಣಿಸಿಕೊಂಡಿದರಿಂದ ನಾವುಗಳು  ಜಾಗೃತರಾಗಿರಬೇಕು. ಕೊರೊನಾ ರೋಗಕ್ಕೆ ಹೆದರುವುದು ಅವಶ್ಯಕತೆ ಇಲ್ಲ,ಯಾರಿಗಾದರೂ  ಜ್ವರ ಹಾಗೂ ಕೆಮ್ಮು ಕಂಡು ಬಂದಲ್ಲಿ  ವೈದ್ಯರ ಬಳಿ ಹೋಗಿ ಚಿಕಿತ್ಸೆ ಪಡೆಯಬೇಕು. ಮತ್ತು  ಸುಮ್ಮನೆ ಹೊರಗಡೆ ಹೋಗಬಾರದು ನೀವು ಹೊರಗಡೆ ಹೋಗಿ ಬಂದರೆ,ಮನೆಗೆ ಬಂದ ನಂತರ ನಿಮ್ಮ ಕೈಗೆ  ಸಾಬೂನು ಅಥವಾ ಸ್ಯಾನಿಟೈಸರ್ ಹಾಕಿಕೊಂಡು ಕೈಗಳನ್ನು ಸ್ವಚ್ಛಗೊಳಿಸಬೇಕು. ಕೊರೊನಾ ರೋಗವನ್ನು ನಾವುಗಳು ಎಲ್ಲರೂ ಸೇರಿ ಹೆದರಿಸಬೇಕು,ನೀವು ಭಯ ಪಡ ಬೇಡಿ ಎಂದು ಗ್ರಾಮ ಪಂಚಾಯಿತಿ ಸದಸ್ಯರು ಜನರಿಗೆ  ಧೈರ್ಯ ತುಂಬುವುದರ ಮೂಲಕ ಜಾಗೃತಿ ಮೂಡಿಸಿದರು.

  ವರದಿ  – ಚಲುವಾದಿ ಅಣ್ಣಪ್ಪ

Leave a Reply

Your email address will not be published. Required fields are marked *