ಎಳ್ಳು ಅಮಾವಾಸ್ಯೆ ಭೂ ತಾಯಿಗೆ ವಿಶೇಷ ಪೂಜೆ.

Spread the love

ಯಲಬುರ್ಗಾ : ಬಹುತೇಕ ಉತ್ತರ ಕರ್ನಾಟಕ ಜಿಲ್ಲೆಯಲ್ಲಿ ಈ ಎಳ್ಳು ಅಮವಾಸ್ಯೆ ದಿನದಂದು ರೈತರು ಕುಟುಂಬ ಸಮೇತರಾಗಿ ಹೊಲಕ್ಕೆ ಹೋಗಿ ಚರಗ ಚೆಲ್ಲಿ ಭೂ ತಾಯಿಗೆ ನಮನ ಸಲ್ಲಿಸುತ್ತಾರೆ.

ಯಲಬುರ್ಗಾ ತಾಲ್ಲೂಕಿನ ಮುಧೋಳ ಗ್ರಾಮದಲ್ಲಿ ಎಳ್ಳು ಅಮಾವಾಸ್ಯೆ ಹಬ್ಬವನ್ನು ರೈತರು ಹೊಲದಲ್ಲಿ ವಿಶೇಷವಾಗಿ ಆಚರಣೆ ಮಾಡುತ್ತಾರೆ. ಗುರುವಾರ ಮುಧೋಳ ಗ್ರಾಮ ಮತ್ತು ಗ್ರಾಮದ ಸುತ್ತ ಮುತ್ತಲಿನ ಗ್ರಾಮಗಳ ಎರೆ ಸೀಮಿಯಲ್ಲಿ ‘ಚೆರಗ ಚೆಲ್ಲುವ ಹಬ್ಬ’ ವಿಶಿಷ್ಟವಾಗಿ ಆಚರಿಸುವುದು ಕಂಡು ಬಂತು. ಎಳ್ಳು ಅಮಾವಾಸ್ಯೆಯ ಪ್ರಯುಕ್ತವಾಗಿ ಪಾಂಡವರನ್ನ ಹೊಲದಲ್ಲಿ ಪೂಜೆ ಸಲ್ಲಿಸಿದರು. – ಮಾರ್ಗಶಿರ ಮಾಸದಲ್ಲಿ ಬರುವ ಈ ಎಳ್ಳು ಅಮಾವಾಸ್ಯೆ ಅಪ್ಪಟ ರೈತರ ಹಬ್ಬವಾಗಿದೆ, ಹೊಲಗಳಲ್ಲಿ ಬೆಳೆದು ನಿಂತಿರುವ ಹಿಂಗಾರು – ಪೈರುಗಳ ನಡುವೆ ಬನ್ನಿ ಮರಗಳಿಗೆ, ಬನ್ನಿಕಂಟಿಗೆ ಸೀರೆ ಉಡಿಸಿ, ಐದು ಕಲ್ಲುಗಳನ್ನು ( ಪಾಂಡವರನ್ನ ) ಇಟ್ಟು ಭೂ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ “ಹುಲ್ ಹುಲ್‌ಗೋ ಚಲಾಂಬರಗೋ’ಎಂದು ಕೂಗುತ್ತ ಮನೆಯಿಂದ ತಂದ ಆಹಾರವನ್ನು ಹೊಲದಲ್ಲಿ ಚೆಲುತ್ತಾರೆ. ಇದನ್ನೇ ಚರಗ ಚೆಲ್ಲುವುದು ಎಂದು ಕರೆಯುತ್ತಾರೆ. ಬೆಳೆದು ನಿಂತಿರುವ ಹಿಂಗಾರು – ಪೈರುಗಳ ನಡುವೆ ಬನ್ನಿ ಮರಗಳಿಗೆ, ಬನ್ನಿಕಂಟಿಗೆ ಸೀರೆ ಉಡಿಸಿ, ಐದು ಕಲ್ಲುಗಳನ್ನು ( ಪಾಂಡವರನ್ನ ) ಇಟ್ಟು ಭೂ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ “ಹುಲ್ ಹುಲ್‌ಗೋ ಚಲಾಂಬರಗೋ’ಎಂದು ಕೂಗುತ್ತ ಬರುವ ದಿನಗಳಲ್ಲಿ ಉತ್ತಮ ಮಳೆ ಹಾಗೂ ಸಮೃದ್ಧಿ ಬೆಳೆಯುವಂತೆ ಕರುಣಿಸು ಎಂದು ದೇವರಲ್ಲಿ ಪ್ರಾರ್ಥಿಸಿದರು, ಬೆಳೆದು ನಿಂತಿರುವ ಬೆಳೆಗಳ ನಡುವೆ ಬೇವಿನ ಮರದ ನೆರಳಿಗೆ ಕುಟುಂಬ ಸಮೇತರಾಗಿ ಸಾಮೂಹಿಕ ಭೋಜನ ಮಾಡಿದರು, ಈ ಹಬ್ಬದ ವಿಶೇಷ. ಎಳ್ಳು ಅಮವಾಸ್ಯೆ ಮೂರು ದಿನ ಮುಂಚಿತವಾಗಿ ಇರುವಾಗಲೇ ರೈತರ ಮನೆಗಳಲ್ಲಿ ಹಬ್ಬದ ತಯಾರಿ ಜೋರಾಗಿ ನಡೆಯುತ್ತದೆ. ಎಳ್ಳು ಹಚ್ಚಿದ ಸಜ್ಜೆ ರೊಟ್ಟಿ, ಜೋಳದ ರೊಟ್ಟಿ ತಯಾರಿಸುವುದು, ನಾನಾ ಬಗೆಯ ಚಟ್ನಿ, ಕಾಳು, ಎಣ್ಣೆಗಾಯಿ, ಎಳ್ಳು ಹೋಳಿಗೆ ಹಾಗೂ ಸೇಂಗಾ ಹೋಳಿಗೆ ತಯಾರಿಸಲಾಗುತ್ತದೆ. ಅಮಾವಾಸ್ಯೆ ದಿನ ದೊಡ್ಡ ಬುತ್ತಿಯ ಗಂಟು ಕಟ್ಟಿಕೊಂಡು ಕುಟುಂಬದವರೆಲ್ಲರ ಸಮೇತ ಎತ್ತಿನ ಬಂಡಿಯಲ್ಲಿ ಕುಳಿತು ಹೊಲಕ್ಕೆ ಹೋಗುವುದು ದೊಡ್ಡ ಸಡಗರದಂತೆ ಸಂಭ್ರಮದಂತೆ ಕಾಣುತ್ತದೆ. ಈ ಹಬ್ಬ ಉತ್ತರ ಕರ್ನಾಟಕದ ರೈತರ ಹಬ್ಬವಾಗಿದ್ದು, ಜಾತಿ, ಮತ ಭೇದವಿಲ್ಲದೆ. ಹಿಂದೂ ಮುಸ್ಲಿಂ ಭಾವೈಕ್ಯತೆಯಿಂದ ಹೊಂದಿರುವ ಗ್ರಾಮ ಮುಧೋಳ ಗ್ರಾಮದಲ್ಲಿ ಒಕ್ಕಲುತನ ಅವಲಂಬಿಸಿರುವ ಮುಸ್ಲಿಂ ಕುಟುಂಬಗಳೂ ಕೂಡ ಈ ಎಳ್ಳು ಅಮಾವಾಸ್ಯೆಯಂದು ಹೊಲಕ್ಕೆ ಹೋಗಿ ಚರಗ ಚೆಲ್ಲುವುದು ಈ ಭಾಗದಲ್ಲಿ ಕಂಡು ಬರುತ್ತದೆ. ಜತೆಗೆ ತಮ್ಮ ಸಂಬಂಧಿಗಳು, ಊರಿನ ಇತರರು, ಹಿತೈಷಿಗಳನ್ನು ಹೊಲಕ್ಕೆ ಕರೆದೊಯ್ದು, ಚರಗ ಚೆಲ್ಲಿದ ನಂತರ ಹೊಲದಲ್ಲಿ ಸಾಮೂಹಿಕ ಊಟ ಸವಿದು ಆತ್ಮೀಯತೆ ಮೆರೆದರು. ಅನೇಕ ಕುಟುಂಬಗಳ ಸದಸ್ಯರು ದಿನವಿಡೀ ಹೊಲದಲ್ಲೇ ಸಮಯ ಕಳೆದರು. ಹಿರಿಯರು ಮರದ ಕೆಳಗೆ ಚಾಪೆ ಹಾಸಿ ವಿಶ್ರಾಂತಿ ಪಡೆದರು. ಯುವಕರು ಮಹಿಳೆಯರು ಅಲ್ಲಲ್ಲಿ ಬೆಳೆದಿದ್ದ ಹಸಿ ಕಡಲೆ ಗಿಡಗಳನ್ನು ಕಿತ್ತುಕೊಂಡು ಬಂದು ಗುಂಪಿನಲ್ಲಿ ಕುಳಿತು ಕಡಲೆ ಸವಿ ಸವಿದರು. ಮತ್ತೆ ಸಂಜೆ ಮನೆಗೆ ಮರಳಿದರು.

ವರದಿ-ಹುಸೇನಬಾಷ್ ಮೊತೇಖಾನ್

Leave a Reply

Your email address will not be published. Required fields are marked *