ಹಸಿವಿನ ಜೀವಗಳಿಗೆ ಆಸರೆಯಾದ ವಿಶ್ವನಾಥ್ ಕಾಶಿ, ಹಾಗೂ ಪತ್ರಕರ್ತ ಶ್ರೀಕಾಂತ್ ಕಾಮತ್.

Spread the love

ಹಸಿವಿನ ಜೀವಗಳಿಗೆ ಆಸರೆಯಾದ ವಿಶ್ವನಾಥ್ ಕಾಶಿ, ಹಾಗೂ ಪತ್ರಕರ್ತ ಶ್ರೀಕಾಂತ್ ಕಾಮತ್.

ಮಲೆನಾಡಿನ ಹೆಬ್ಬಾಗಿಲಿನಲ್ಲಿ ಮಾನವೀಯತೆಯ ಹೊತ್ತ ಸಹೃದಯಿಗಳ ಗುಣಗಳು ಶಾಶ್ವತವಾಗಿ ನೆಲೆಸಿದೆ ಎನ್ನುವುದಕ್ಕೆ ಸಾಕಷ್ಟು ಜೀವಂತ ಉದಾಹರಣೆಗಳನ್ನು ಸಾಕ್ಷ್ಯ ಸಹಿತ ಉದಾಹರಿಸಬಹುದು, ಯಾವುದೇ ಅತಿರಂಜನೆಗಳಿಗೆ ಅವಕಾಶವಿಲ್ಲದೆ ಸದಾ ಹಸನ್ಮುಖಿಯಾಗಿ ಹಸಿವಿನ ಜೀವಗಳತ್ತ ತೆರಳಿ ತೃಪ್ತಿಗೊಳಿಸಿ ಹೆದರದಿರಿ ನಿಮ್ಮೊಂದಿಗೆ ನಾವಿದ್ದೇವೆ ಎನ್ನುವ ಸಮಾಜಮುಖಿ ಸಾಹಸಿಗಳ ಕುರಿತಾಗಿ ಬಹಳಷ್ಟು ಹೇಳುವುದಿದೆ ಇಂದು ಶಿವಮೊಗ್ಗದ ವಿದ್ಯಾನಗರದಲ್ಲಿ ಗೆಳೆಯರ ಬಳಗ ಕಟ್ಟಿಕೊಂಡ ಎದೆವಂತಿಕೆಯ ತಂಡವೊಂದಕ್ಕೆ ನೇತೃತ್ವ ವಹಿಸಿ ನಿಂದ ಜೀವಪರ ಮುಖಂಡರಾದ ವಿಶ್ವನಾಥ್ ಕಾಶಿ, ಹಾಗೂ ಪತ್ರಕರ್ತರಾದ ಶ್ರೀಕಾಂತ್ ಕಾಮತ್ ರವರುಗಳು *ಹಸಿವಿನ ವಿರುದ್ದ ಯುಧ್ದ ನಡೆಸುತ್ತಿರುವ ಸೇನಾನಿಗಳ ಕುರಿತಾಗಿ ಇಲ್ಲಿ ಲಗತ್ತಿಸುತ್ತಿದ್ದೇನೆ.

ಕೋವಿಡ್-19 ಎನ್ನುವ ಹೆಮ್ಮಾರಿ ಆವರಿಸುತ್ತಲೇ ಮನುಕುಲವನ್ನು ಕಂಗೆಡಿಸಿರುವ ಈ ಹೊತ್ತಿನಲ್ಲಿ ಜನಜೀವನವನ್ನು ಅನಿವಾರ್ಯವಾಗಿ ಲಾಕ್ಡೌನ್ ನಲ್ಲಿರಿಸಲಾಗಿದೆ, ಇಲ್ಲಿ ಆರೋಗ್ಯದ ಪ್ರಶ್ನೆಯು ಇದೆ, ಬಡ-ಮಧ್ಯಮ-ಸಿರಿವಂತರ ಪ್ರಶ್ನೆಯೂ ಇದೆ, ಒಂದೊತ್ತಿನ ಊಟಕ್ಕೆ ಪರದಾಡುವ ಬಡವರು, ತಮ್ಮ ಬಳಿ ಲಿಕ್ವಿಡಿಟಿ ಮನಿ ಇಲ್ಲದಿದ್ದರೂ ಕೇಳುವ ಸಂಕಟಕ್ಕೆ ಒಳಪಟ್ಟವರು, ಸಂಧಿಗ್ಧತೆಯ ಕ್ಲಿಷ್ಟಕರ ಸಂದರ್ಭದಲ್ಲಿ ಸಿಲುಕಿ ಹಸಿವಿನ ನೀಗುವಿಕೆಗಾಗಿ ಪರಿತಪಿಸುವ ಸಿರಿವಂತರು, ಎಲ್ಲರಿಗೂ ಒಂದಲ್ಲ ಒಂದು ರೀತಿಯಲ್ಲಿ ಪರದಾಡುವ ಸಾಂದರ್ಭಿಕತೆಗಳನ್ನು ನಾವು ನಿತ್ಯವೂ ಇಲ್ಲಿ ದರ್ಶಿಸುವಂತಾಗಿದೆ.

ಇಂತಹ ಅತೀ ಸೂಕ್ಷ್ಮತೆಯನ್ನು ಲೆಕ್ಕಿಸದೇ ವಿದ್ಯಾನಗರದಲ್ಲಿ ಗೆಳೆಯರ ಬಳಗದಿಂದ ಶುರುವಾದ “ಕೋವಿಡ್ ಸುರಕ್ಷಾ ಟೀಮ್” ದಿನದ ಪೂರ್ತಿಯಾಗಿ ಖಾಸಗಿ ಹಾಗೂ ಸರಕಾರಿ ಹಾಸ್ಟಿಟಲ್ ನಲ್ಲಿ ದಾಖಲಾದ ಪಾಸಿಟಿವ್ ಕೇಸ್ ಗಳ ಕುಟುಂಬಗಳಿಗೆ, ದಾದಿಯರಿಗೆ, ಪೊಲೀಸ್ ಸಿಬ್ಬಂದಿಗಳಿಗೆ, ಬಸ್ಟ್ಯಾಂಡ್ ನಲ್ಲಿ ಸೊರಗಿದ ಜೀವಗಳಿಗೆ ಹಾಗೂ ಬಡ-ಮಧ್ಯಮ ವರ್ಗದ ಸೂರುಗಳತ್ತ ಹುಡುಕಿಕೊಂಡು ಹೋಗಿ ಸುಮಾರು ಒಂದು ಸಾವಿರಕ್ಕೂ ಹೆಚ್ಚು “ಅಹಾರದ ಪೊಟ್ಟಣ” ಗಳನ್ನು ನೀಡುತ್ತಿರುವ ಕೈಂಕರ್ಯಗಳಿಗೆ ಇದೀಗ ಹತ್ತು ದಿನಗಳು ಸಂದಿದೆ ಅಂದರೆ ಇಲ್ಲಿಗೆ ಹತ್ತು ಸಾವಿರ ಅಹಾರದ ಪೊಟ್ಟಣಗಳನ್ನು ಹಸಿವಿನ ಜೀವಗಳಿಗೆ ನೀಡಿರುವುದು ಪ್ರಶಂಸನೀಯ. ಕಾಸಿದ್ದವನು ಕಾಸನ್ನೇ ನುಂಗಿ ಹಸಿವು ಹಿಂಗಿಸುವುದಕ್ಕೆ ಸಾಧ್ಯವಿಲ್ಲ, ಬದುಕು ಬವಣೆಗಳನ್ನು ಅವಲೋಕಿಸಿದರೆ ಎಂತಹವರು ಕೂಡ ಬಿಸಿಗಂಬನಿಗಳನ್ನು ತೊಟ್ಟಿಕ್ಕಿಸದೇ ಇರಲಾರರು, ಅಂತಹದೊಂದು ಅನುಭವಗಳು ಆಗಿದೆ ಎಂದು ವಿಶ್ವನಾಥ್ ಕಾಶಿಯವರು ತಿಳಿಸುತ್ತಾರೆ. ಕನಸುಗಳು ನುಚ್ಚು ನೂರಾಗಿವೆ, ಪಾಸಿಟಿವ್ ಎರಗಿದ ಜೀವಗಳಿಗೆ ಆಕ್ಸಿಜನ್ ಬೇಕಿದೆ, ಸರಿಯಾಗಿ ನೋಡಿಕೊಳ್ಳುವುದಕ್ಕೂ ಸಾಧ್ಯವಿಲ್ಲದಂತಹ ಪರಿಸ್ಥಿತಿಗಳು ಎದುರಾಗಿವೆ ಎಂದು ಅವಲತ್ತುಕೊಳ್ಳುವ ದನಿಗಳು ಎದೆಗಪ್ಪಳಿಸುತ್ತದೆ, ಏನು ಮಾಡುವುದು ಸರ್…… ಇನ್ನೇನು ಇದು ಮುಗಿಯದ ಅಧ್ಯಾಯವೇ..? ಎಂದು ಪ್ರತಿಧ್ವನಿಸುವ ಮನಸು ಕಾಡುವುದಕ್ಕೆ ಶುರು ಮಾಡಿದೆ. ಇಂತಹ ಅನೇಕತೆಗಳ ಅನುಭವಗಳೇ ಮತ್ತಷ್ಟು ಹಸಿವಿನ ವಿರುದ್ದ ನಿಲ್ಲಬೇಕಿದೆ ಅಸಾಹಾಯಕ ಮನಸುಗಳಿಗೆ ಕಾವಣವಾಗು ಎಂದು ಪ್ರೇರೆಪಿಸುತ್ತಿದೆ, ಒಮ್ಮೆಲೆ ಮೌನವಾಗಿ  ಆ ಬದುಕುಗಳನ್ನು ದಿಟ್ಟಿಸುತ್ತಲಿ ಪ್ರತ್ಯುತ್ತರ ನೀಡುವುದಕ್ಕೂ ಸಾಧ್ಯವಾಗುವುದಿಲ್ಲ ಎಂದು ಹೇಳುವಾಗ ಅವರಲ್ಲಿನ ಅಂತರದನಿಗಳು ಗಧ್ಗದಿತವಾಗಿದೆ ಎಂದೆನಿಸಿತು.ವಿಶ್ವನಾಥ್ ಕಾಶಿಯವರೇ..? ಶ್ರೀಕಾಂತ್ ಕಾಮತ್ ರವರೇ ನಿಮ್ಮ ಈ ಪಕ್ಷಾತೀತ ಹೆಜ್ಜೆಗಳು ಸಾರ್ಥಕವಾದುದ್ದು, ಎಂದಾದರೂ ಒಮ್ಮೆ ಈ ಮಣ್ಣಿಗೆ  ಪ್ರತಿಯೊಬ್ಬರು ಹೋಗಲೆಬೇಕು, ಊಳಿದರೆ ಮಣ್ಣಲ್ಲಿ ಕೊಳೆತು ಹೋಗುತ್ತೇವೆ, ಚಿತೆಯಲ್ಲಿಟ್ಟರೆ ಸುಟ್ಟು ಬೂಧಿಯಾಗಿ ಬಿಡುತ್ತೇವೆ ಪ್ರಸ್ತುತ ಈ ದಿನಮಾನದಲ್ಲಿಯೂ ಸುಡುವುಕ್ಕೂ ಕಟ್ಟಿಗೆಗಳಿಲ್ಲದೆ ಶವಗಳು ಅರೆ-ಬರೆಯಾಗುತ್ತಿರುವುದು, ನದಿಯಲ್ಲಿ ಪಿಪಿಈ ಕಿಟ್ ಹೊದಿಕೆಯಲ್ಲಿ ತೇಲಿ ಬರುವುದನ್ನು ದೇಶದಲ್ಲಿ ನೋಡುವಂತಾಗಿದೆ ಇಂತಹ ಸತ್ಯದ ಅರಿವು ಮಾನವೀಯ ಗುಣಗಳನ್ನು ಮೈಗೂಡಿಸಿಕೊಂಡಿರುವವರಿಗೆ ಇದ್ದೇ ಇರುತ್ತದೆ. ಇನ್ನೂ  ಒಳ್ಳೆಯ ಕೆಲಸಕ್ಕೂ ಕಲ್ಲೆಸುವ ಮಂದಿಗಳು ವಿಷಮನುಜರಂತೆ ( ರಕ್ಕಸರಂತೆ, ಅವಕಾಶವಾದಿಗಳಂತೆ )  ದುರ್ವರ್ತಿಸುತ್ತಾರೆ ಇಂತಿವುಗಳನ್ನು ಬದಿಗೊತ್ತಿಯೇ ಮೂವತ್ತು ಹುಡುಗರ ತಂಡವೊಂದಕ್ಕೆ “ಗೆಳೆಯರ ಬಳಗ” ದಿಂದ ಕೋವಿಡ್ ಸುರಕ್ಷಾ ಟೀಮ್ ಕಟ್ಟಿ ಹಸಿವು ನೀಗಿಸುವ ನಿತ್ಯದ ಕೈಂಕರ್ಯಕ್ಕೆ ತಮ್ಮನ್ನು ತಾವು ತೊಡಗಿಸಿಕೊಂಡಿರುವುದು ಶ್ಲಾಘನೀಯವಾಗಿದೆ. ದೃತಿಗೆಡುವ ಅಗತ್ಯವೇ ಇಲ್ಲ, ನಿಮ್ಮೊಂದಿಗೆ ಪತ್ರಿಕಾ ದನಿಯೂ ಇದೆ, ಹಸಿವಿನ ವಿರುದ್ದ ಮತ್ತಷ್ಟು ಸೆಣಸಾಡಿ ಜೀವಪರ ನಿಲುವುಗಳಿಗೆ ಮುಂದಾಗಿ,, ನೀವು ಕಾಂಗ್ರೆಸ್ ಪಕ್ಷದ ಮುಖಂಡರಾಗಿ, ಸ್ಥಳೀಯ ಕಾರ್ಪೋರೇಟರ್ ಆಗಿ ಸೇವೆ ಸಲ್ಲಿಸಿದ್ದಿರಿ, ಪತ್ರಕರ್ತರಾಗಿ ಶ್ರೀಕಾಂತ್ ಕಾಮತ್ ಕೂಡ ಸಹುದ್ಯೋಗಿಯಾಗಿ ಪತ್ರಿಕಾ ಸೇವೆ ಸಲ್ಲಿಸುತ್ತಿದ್ದಾರೆ. ನಿಮ್ಮಗಳ ಈ ಸೇವೆ ಮಲೆನಾಡು ಎಂದಿಗೂ ಮರೆಯದು. ವಿದ್ಯಾನಗರದ “ಗೆಳೆಯರ ಬಳಗ”ದ ಈ ಶ್ರಮ ಎಂದಿಗೂ ವ್ಯರ್ಥಗೊಳ್ಳದು, ದಿನನಿತ್ಯ ಒಂದು ಸಾವಿರ ಅಹಾರ ಪೊಟ್ಟಣಗಳ ಸಿದ್ದಪಡಿಸುವುಕ್ಕೆ ” ಅಡುಗೆ ಮನೆ”ಯನ್ನು ನಿರ್ಮಿಸಿ, ಮೂರು ಜನ ಅಡುಗೆ ಭಟ್ಟರಿಗೆ ನೇಮಿಸಿ, ಲಾಕ್ಡೌನ್ ಸಮಯದೊಳಗೆ ದಿನಸಿ -ತರಕಾರಿಗಳನ್ನು ಪೂರೈಸಿಕೊಂಡು ಬೆಳಿಗ್ಗೆ 8 ಗಂಟೆಯೊಳಗೆ ಅಹಾರವನ್ನು ತಯಾರಿಸಿ, ಮೂವತ್ತು ಜನ ಹುಡುಗರ ಸಹಾಯದೊಂದಿಗೆ ಶುಚಿಯಾಗಿ ಪೊಟ್ಟಣಗಳನ್ನು ಮಾಡಿ 12 ಗಂಟೆಯ ಹೊತ್ತಿಗೆ ಇರುವ ಧ್ವಿಚಕ್ರ ವಾಹನ- ಕಾರು ಬಳಸಿ ಇಡೀ ಶಿವಮೊಗ್ಗವನ್ನು ಸುತ್ತಾಡಿ ಅಗತ್ಯವಿರುವ ಕಡೆಗೆ “ಅಹಾರದ ಪೊಟ್ಟಣ” ಹಾಗೂ ವಾಟರ್ ಬಾಟಲ್ ಗಳನ್ನು ನೀಡುವ ಅಚ್ಚುಕಟ್ಟಾದ ಶ್ರಧ್ದೆಯ ಶ್ರಮದಾನ ಮಾತೃ ಎದೆಯನ್ನು ಸಾಬೀತುಪಡಿಸುತ್ತದೆ. ಇಂತಹದೊಂದು ಮಹತ್ತರವಾದ ಸೇವೆಗೆ ಮುಂದಾಗಬೇಕು ಎಂದುಕೊಂಡು ಚಾಲನೆ ನೀಡುವುದಕ್ಕೆ ಜೆಡಿಎಸ್ ಮುಖಂಡರಾದ ಎಂ.ಶ್ರೀಕಾಂತ್ ರವರನ್ನು ಹಾಗೂ ಪಾಲಿಕೆ ಸದಸ್ಯರಾದ ಯಮುನಾ ರಂಗನಾಥ್ ರವರುಗಳನ್ನು ಆಹ್ವಾನಿದ್ದೀರಿ ಇಂತಿವ ಮನಸುಗಳು ಕೂಡ ಹೃದಯವಂತಿಕೆಯಿಂದಲಿ ಚಾಲನೆ ನೀಡಿ “ಅಹಾರದ ಕೊಠಡಿಗೆ” ತಮ್ಮ ನೆರವು ಕೂಡ ಸಲ್ಲಿಸಿದ್ದಾರೆ ಹೀಗೆ ಶುರುವಾದ ಕೈಂಕರ್ಯ ಈ ಸೂಕ್ಷ್ಮ ದಿನಮಾನದಲ್ಲಿ ಕಷ್ಟಕರವಾಗಿದ್ದರೂ ಯಾವುದೇ ಆತಂಕಗಳನ್ನು ದೂಡಿಯೇ ಎಲ್ಲವನ್ನು ಮೈದಡವಿಕೊಂಡು ಸೇವೆ ಸಲ್ಲಿಸಲು ಮುಂದಾಗಿರುವ ‘ಗೆಳೆಯರ ಬಳಗ”ದ ಕೋವಿಡ್ ಸುರಕ್ಷಾ ತಂಡದ ಶ್ರಮದಾನದ ಸಾಹಸಕ್ಕೆ ಅಭಿನಂದನಗಳನ್ನು ಸೂರ್ಯಗಗನ ಪತ್ರಿಕೆ ಸಲ್ಲಿಸುತ್ತದೆ,  ಪಕ್ಷಾತೀತವಾದ  ತಂಡದ ಹೆಜ್ಜೆಗಳು ಅನನ್ಯವಾದುದ್ದು. ಮಲೆನಾಡಿನ ಹೆಗ್ಗಳಿಕೆಯೂ ಹೌದು, ಒಟ್ಟಿನಲ್ಲಿ ಈ ಸಾಲುಗಳನ್ನು ಬರೆಯುವ ಹೊತ್ತಿಗೆ ಯಾವ ಉತ್ಪೇಕ್ಷೆಯು ಇರಲಿಲ್ಲ, ಜೀವಪರ ಮುಖಂಡರಾದ ವಿಶ್ವನಾಥ್ ಕಾಶಿ, ಹಾಗೂ ಪತ್ರಕರ್ತರಾದ ಶ್ರೀಕಾಂತ್ ಕಾಮತ್ ರವರುಗಳು ಮಾಡುತ್ತಿರುವ ಸಮಾಜಮುಖಿ ಸೇವೆಯ ವಾಸ್ತವತೆಯನ್ನು ಅಕ್ಷರದ ಮೂಲಕ ತೆರೆದಿಡುತ್ತಿದ್ದೇನೆ ಎಂದು ಅಂಭೋಣಿಸಿ ಇದು ನನ್ನ ಬರಹದ ಆದ್ಯ ಕರ್ತವ್ಯವೆಂದು ಬಾವಿಸುತ್ತೇನೆ. ನಮಸ್ಕಾರ.

ವರದಿ – ಮಹೇಶ ಶರ್ಮ್ ಅಥಣಿ

Leave a Reply

Your email address will not be published. Required fields are marked *