ಮೃತ ಬಾಲಕಿ ಕುಟುಂಬಕ್ಕೆ ಸಚಿವ ಶಾಸಕರಿಂದ ಸಾಂತ್ವಾನ.

Spread the love

ವಿಜಯನಗರ ಜಿಲ್ಲೆ ಕೂಡ್ಲಿಗಿ: ತಾಲೂಕಿನ ಕಕ್ಕುಪ್ಪಿ ಗ್ರಾಮದ ಹೆಚ್. ಜಯಮ್ಮರವರ, 12 ವರ್ಷದ ಮಗಳಾದ ಸಿಂಚನ. ಹಲವು ತಿಂಗಳ ಹಿಂದೆ ಜರುಗಿದ್ದ,  ಎಂ.ಬಿ. ಅಯ್ಯನಹಳ್ಳಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುತ್ತಾರೆ.  ಅಪಘಾತದಲ್ಲಿ ಮೃತ ಪಟ್ಟ ಜಯಮ್ಮರವರ ಕುಟುಂಬ, ತುಂಬಾ  ದುಃಖ ಹಾಗೂ ಸಂಕಷ್ಟದಲ್ಲಿತ್ತು. ಇದನ್ನರಿತ ಕ್ಷೇತ್ರದಬಶಾಸಕರಾದ ಡಾಎನ್.ಟಿ.ಶ್ರೀನಿವಾಸ್ ರವರು, ಸಚಿವ ಬಿ.ಜೇಡ್.ಜಮೀರ್ ಅಹಮದ್ ರವರನ್ನು ಸಂಪರ್ಕಿಸಿದ್ದಾರೆ. ಬಳ್ಳಾರಿ ಹಾಗೂ ವಿಜಯ ನಗರ ಜಿಲ್ಲೆಗಳ  ಗಣಿಭಾದಿತ ವಸತಿ ಪ್ರದೇಶಗಳ ವೀಕ್ಷಣೆಯಲ್ಲಿದ್ದವಸತಿ ಸಚಿವರಾದ ಬಿ.ಜೆಡ್. ಜಮೀರ್ ಅಹಮದ್ ಖಾನ್ ಅವರನ್ನು ಸಂಪರ್ಕಿಸಿದ್ದಾರೆ. ಮತ್ತು ಘಟನೆಯ ವಿವರ ನೀಡಿ ನೊಂದ ಕುಟುಂಬಕ್ಕೆ, ಸಾಂತ್ವ‍‍ಾನ ಹೇಳಲುಬಮನ ಓಲೈಸಿ ಕೂಡ್ಲಿಗಿ ಪಟ್ಟಣದ ಪ್ರವಾಸಿಮಂದಿರಕ್ಕೆ ಅವರನ್ನು ಬರುವಂತೆ ಮಾಡಿದ್ದಾರೆ. ಅಂತೆಯೇ  ಸೆ 26ರಂದು ನೊಂದ ಕುಟುಂಬಕ್ಕೆ ಸಾಂತ್ವನ ಹೇಳಲು, ಶಾಸಕರು ತಮ್ಮ ಕ್ಷೇತ್ರಕ್ಕೆ ಸಚಿವರಾದ ಜಮೀರ್ ಅಹಮದ್ ರವರನ್ನು ಕರೆದುಕೊಂಡು ಬಂದಿದ್ದಾರೆ. ಕೂಡ್ಲಿಗಿ ಪಟ್ಟಣದ ಪ್ರವಾಸಿಮಂದಿರದಲ್ಲಿ, ಶಾಸಕರು ಮತ್ತು ಸಚಿವರ  ಸಮಕ್ಷಮದಲ್ಲಿ.  ಜಯಮ್ಮ ಅವರ ದುಃಖವನ್ನು  ಆಲಿಸಿ ಸಾಂತ್ವನ ಹೇಳಿ ಧೈರ್ಯ ತುಂಬಿದರು.‌ ತಕ್ಷಣದಲ್ಲಿ ಸಚಿವರಾದ ಬಿ.ಜೆಡ್. ಜಮೀರ್ ಅಹಮದ್ ಖಾನ್ ರವರು, ಸಂಕಷ್ಟದಲ್ಲಿದ್ದ ಜಯಮ್ಮರಿಗೆ. ಸಚಿವರು ತಮ್ಮ ವೈಯಕ್ತಿಕ ಪರಿಹಾರವಾಗಿ, ಒಂದು ಲಕ್ಷ ರೂಪಾಯಿಗಳ ನಗದು ಹಣ ನೀಡಿ ಾಂತ್ವಾನ ಹೇಳಿದರು. ಸಚಿವರು ಮಾತನಾಡಿ, ಶಾಸಕರು ಹಾಗೂ ತಾವು ಸೇರಿ, ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರ ಜೊತೆ ತಾವು ಮಾತನಾಡಿ. ಮುಖ್ಯ ಮಂತ್ರಿಗಳ ಪರಿಹಾರ ನಿಧಿಯಿಂದ, ಹೆಚ್ಚಿನ  ಪ್ರಮಾಣದಲ್ಲಿ ನೊಂದ ಕುಟುಂಬಕ್ಕೆ. ಅಗತ್ಯ ಆರ್ಥಿಕ ನೆರವನ್ನು ಒದಗಿಸಿಕೊಡುವುದಾಗಿ, ಸಚಿವರು ಕಕ್ಕುಪ್ಪಿ ಜಯಮ್ಮ ಅವರಿಗೆ ಭರವಸೆ ನೀಡಿದರು.‌

ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ.

Leave a Reply

Your email address will not be published. Required fields are marked *