ಜಿಲ್ಲೆಯದ್ಯಾಂತ ಇಂದು ಮೂರನೇ ದಿನಕ್ಕೆ ಸಂಪೂರ್ಣ ಲಾಕ್ ಡೌನ್ ಗೇ ಸಾರ್ವಜನಿಕರು ಬೆಂಬಲ.

Spread the love

ಜಿಲ್ಲೆಯದ್ಯಾಂತ ಇಂದು ಮೂರನೇ ದಿನಕ್ಕೆ ಸಂಪೂರ್ಣ ಲಾಕ್ ಡೌನ್ ಗೇ ಸಾರ್ವಜನಿಕರು ಬೆಂಬಲ.

ಕರ್ನಾಟಕ ರಾಜ್ಯಾದಂತ ಸರ್ಕಾರ ಹೋರಡಿಸಿರುವ ಲಾಕಡೌನ್ ಆದೇಶದಂತೆ ಇಂದು ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣವು ಇಂದು  ಮೂರನೇ ದಿನಕ್ಕೆ ಕಾಲಿಟ್ಟ ಈ ಲಾಕ್ ಡೌನ್ ಬೆಳಗಿ 06 ಘಂಟೆಯಿಂದ  ಪೊಲೀಸ್ ಪಡೆ ಹಾಗೂ ಗೃಹ ರಕ್ಷಕ ಧಳದವರು ರಸ್ತೆಗೆ ಇಳಿದರು. ಏಕಾಬಿಟ್ಟಿಯಾಗಿ ತಿರುಗಾಡುವವರನ್ನು  ಪೋಲೀಸರು ಕಾನೂನಿನ ಮನವರಿಕೆ ಪ್ರಜ್ಞೆ ಮಾಡುವ ಮೂಲಕ ಮಾನವಿತೆಯ ಹೆಸರಾದರು.  ತಾವರಗೇರಾ ಪಟ್ಟಣದ ಪ್ರಮುಖ ರಸ್ತೆಗಳು ಬಸ್ ನಿಲ್ದಾಣ, ಡಾ..ಅಂಬೇಡ್ಕರ್ ನಗರ, ಶ್ರೀ ಬಸವೇಶ್ವರ ನಗರ, ಶ್ರೀ ಶ್ಯಾಮೀದಲಿ ಸರ್ಕಲ್, ಹಾಗೂ ಗಾಂಧಿ ಚೌಕ್, ಐ.ಬಿ. ಸರ್ಕಲ್, ಡಾ.ರಾಜಕುಮಾರ (ಮಾರ್ಕೇಟ್) ರಸ್ತೆ, ಈ ಮೊದಲಾದ ಜನಜಂಗುಳ್ಳಿಯ ನಗರ ಹಾಗೂ ಸರ್ಕಲ್ ನಲ್ಲಿ ರಣ ರಣ (ಬೀಕೊ) ಎನ್ನುವ ದೃಶ್ಯ ಕಂಡು ಬಂತ್ತು, ಹೆಮ್ಮೇಯಿಂದ ಹೇಳಬೇಕು ಪೊಲೀಸ್ ಇಲಾಖೆ ಹಾಗೂ ಗೃಹ ರಕ್ಷಕ ಧಳದ ಕಾರ್ಯ ಶ್ಲಾಘನೀಯವಾದದ್ದು, ತಮ್ಮ ಜೀವದ ಹಂಗ್ಗು ತೋರೆದು ಸಾರ್ವಜನೀಕರ ಹೀತಕ್ಕಾಗಿ/ ತಮ್ಮ ತಮ್ಮ ಕುಟುಂಬದ ನೂರಾರು ಕನಸ್ಸುಗಳನ್ನು ಬದಿಗಿಟ್ಟು ಈ ಕರೋನದ ವಿರುದ್ದ ಸೇವೆ ಸಲ್ಲಿಸುವವರು ಅಂದರೆ ಅದು ಈ ಇಲಾಖೆಯಿಂದ ಮಾತ್ರ ಸಾಧ್ಯ. ಒಟ್ಟಿನಲ್ಲಿ ತಾವರಗೇರಾ ಪಟ್ಟಣದ ಪ್ರಮುಖ ನಗರ ಹಾಗೂ ಸರ್ಕಲ್ ನಲ್ಲಿ ಬಿಗು ಬಂದೋಬಸ್ತುವಿನ ವಾತವರಣ ಕಂಡು ಬಂತ್ತು.

  ನಮ್ಮೇಲ್ಲರ ಅಳಿವು/ಉಳಿವಿಗಾಗಿ ದ.ಕ. ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಪ್ರೊಬೆಷನರಿ ಪಿಎಸ್‌ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ 24ರ ಹರೆಯದ ಶಾಮಿಲಿ ಕೋವಿಡ್‌ಗೆ ಬಲಿಯಾಗಿದ್ದಾರೆ. ಕೋಲಾರದವರಾದ ಶಾಮಿಲಿ ಇವರು 7 ತಿಂಗಳ ಗರ್ಭಿಣಿಯಾಗಿದ್ದು, ಕೋಲಾರದ ಆರ್‌ಎಂ ಜಾಲಪ್ಪ ಆಸ್ಪತ್ರೆಯಲ್ಲಿ ನಿನ್ನೆ ಸಂಜೆ 4.30ಕ್ಕೆ ನಿಧನರಾಗಿದ್ದಾರೆ. ಗರ್ಭಿಣಿಯಾಗಿದ್ದ ಹಿನ್ನೆಲೆಯಲ್ಲಿ ಸುಮಾರು ಒಂದು ತಿಂಗಳ ಹಿಂದೆ ಅವರು ರಜೆಯ ಮೇಲೆ ತಮ್ಮ ಊರಿಗೆ ತೆರಳಿದ್ದರು. ಮೇ 2ರಂದು ಕೋವಿಡ್ ಪಾಸಿಟಿವ್ ಆಗಿ ಚಿಕಿತ್ಸೆಗಾಗಿ ಜಾಲಪ್ಪ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಯಲ್ಲಿ ಕೋಲಾರದ ಎಸ್‌ಪಿಯವರು ಶಾಮಿಲಿ ಅವರ ಆರೋಗ್ಯ ಹಾಗೂ ಚಿಕಿತ್ಸೆ ಬಗ್ಗೆ ಮುತುವರ್ಜಿ ವಹಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆವರು ಮೃತಪಟ್ಟಿದ್ದಾರೆ. ಗರ್ಭಿಣಿಯಾಗಿದ್ದ ಕಾರಣ ಅವರು ಲಸಿಕೆಯನ್ನು ಪಡೆದುಕೊಂಡಿರಲಿಲ್ಲ ಎಂದು ತಿಳಿದುಬಂದಿದೆ. 2021ರ ಜನವರಿ 11ರಂದು ದ.ಕ. ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಆವರು ಪ್ರೊಬೆಷನರಿ ಪಿಎಸ್‌ಐ ಆಗಿ ಕರ್ತವ್ಯ ಆರಂಭಿಸಿದ್ದರು. ಪೊಲೀಸ್ ಕುಟುಂಬದ ಯುವ ಸದಸ್ಯೆ ಕೋವಿಡ್‌ಗೆ ಬಲಿಯಾಗಿರುವ ಬಗ್ಗೆ ದು:ಖ ವ್ಯಕ್ತಪಡಿಸಿರುವ ಕರ್ನಾಟಕದ ಡಿಜಿಪಿ ಪ್ರವೀಣ್ ಸೂದ್ ಅವರು ಟ್ವೀಟ್ ಮಾಡಿದ್ದು, ಮನೆಯಲ್ಲಿದ್ದುಕೊಂಡು ಪೊಲೀಸರೊಂದಿಗೆ ಸಹಕರಿಸಿ ಎಂದೂ ಮನವಿ ಮಾಡಿದ್ದಾರೆ. ದ.ಕ. ಜಿಲ್ಲಾ ಪೊಲೀಸ್ ಸೊನಾವಣೆ ಋಷಿಕೇಶ್ ಕೂಡಾ ಮೃತರ ಆತ್ಮಕ್ಕೆ ಶಾಂತಿಕೋರಿದ್ದಾರೆ. ಈ ಎಲ್ಲಾ ಘಟನೆ ಕಣ್ಣಿಗೆ ಕಾಣುತ್ತಿದ್ದರು ನಮ್ಮ ಜನರು ಎಚ್ಚೆತ್ತುಕೊಳ್ಳದೆ ಬೇಕಾಬಿಟ್ಟಿಯಾಗಿ ಅಲೆದಾಡುತ್ತಿದ್ದಾರೆ, ಸಾರ್ವಜನಿಕರೆ ಎಚ್ಚೆತ್ತುಕೊಳ್ಳಿ ನಮ್ಮೆಲ್ಲರ ಆರೋಗ್ಯಕ್ಕಾಗಿ ತಮ್ಮ ಪ್ರಾಣವನ್ನೆ ಒತ್ತೆ ಇಟ್ಟು ಕೆಲಸ ಮಾಡುತ್ತಿದ್ದಾರೆ, ಇತ್ತ ಗಮನ ಹರಸಿ, ಕಳೇದೋದ ಜೀವ ಮತ್ತೆ ಮರಳಿ ಬಾರದು.

  ವರದಿ – ಸಂಪಾದಕೀಯ

Leave a Reply

Your email address will not be published. Required fields are marked *