ಜನರ ಸೇವೆಯೆ ಇವರ ಗುರಿ, ಕ್ಷೇತ್ರದ ಅಭಿವೃದ್ದಿಯೆ ಇವರ ಮೂಲ ಮಂತ್ರ ಶ್ರೀಮತಿ ಲಕ್ಷ್ಮೀ ದೇವಿ,

Spread the love

ಜನರ ಸೇವೆಯೆ ಇವರ ಗುರಿ, ಕ್ಷೇತ್ರದ ಅಭಿವೃದ್ದಿಯೆ ಇವರ ಮೂಲ ಮಂತ್ರ ಶ್ರೀಮತಿ ಲಕ್ಷ್ಮೀ ದೇವಿ,

ಕೊಪ್ಪಳ ಜಿಲ್ಲೆಯ ಕುಷ್ಟಗಿ ವಿಧಾನ ಸಭಾ ಕ್ಷೇತ್ರದಲ್ಲಿ ಚುನಾವಣಾ ಕಾವು ಒಂದಡೆಯಾದರೆ, ಮತ್ತೊಂದಡೆ ಬಿಸಿಲಿನ ಕಾವು, ಇವು ಎರಡರ ಮದ್ಯದಲ್ಲೂ ರಾಜಕೀಯ ನಾಯಕ ದೌಡು, ಒಟ್ಟಿನಲ್ಲಿ ನಮ್ಮ ಕುಷ್ಟಗಿ ಕ್ಷೇತ್ರದ ಇತಿಹಾಸ ಬದಲಾಯಿಸಲು ಯಾರಿಂದಲು ಸಾದ್ಯವಿಲ್ಲ, ನಮ್ಮ ಕ್ಷೆತ್ರದ ಜನತೆ ತುಂಬಾ ಜಾಣರು, ಒಂದು ಸಾರಿ ಆಯ್ಕೆಯಾದ ಅಭ್ಯರ್ಥಿಯನ್ನ ಮತ್ತೊಂದು ಸಾರಿ ಆಯ್ಕೆ ಮಾಡಿದ ಇತಿಹಾಸವೆ ಇಲ್ಲ. ತಾವರಗೇರಾ ಪಟ್ಟಣದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಬೃಹತ ಜನ ಸಾಗರ, ತಾವರಗೇರಾ ಪಟ್ಟಣದ ವಿವಿದ ಭಾಗಗಳಲ್ಲಿ ಜನ ಸಾಗರವೇ, ಜನ ಸಾಗರ,   ಕುಷ್ಟಗಿ ಕ್ಷೇತ್ರದಲ್ಲಿ 2023 ರ ವಿಧಾನಸಭಾ ಚುನಾವಣೆಯಲ್ಲಿ ಈ ಬಾರಿ ಬಿಜೆಪಿ ಪಕ್ಷದ ಅಭ್ಯರ್ಥಿಯಾದ ಶ್ರೀ ಮಾನ್ಯ ದೊಡ್ಡನಗೌಡ್ರು ಎಚ್ ಪಾಟೀಲರವರು ಈ ಬಾರಿ ಪ್ರಚಂಡ ಬಹುಮತದಿಂದ ಗೆಲುವು ಸಾಧಿಸಿ ಶಾಸಕರಾಗಿ, ಸಚಿವರಾಗಲಿ, ನನ್ನ ಯಜಮಾನರು  ಈ ಚುನಾವಣೆಯಲ್ಲಿ ಗೆದ್ದರೆ, ನಮ್ಮ ಗೆಲುವು ಅಲ್ಲಾ, ಅದು ನಿಮ್ಮ ಗೆಲವು ಎಂದು ಶ್ರೀಮತಿ ಲಕ್ಷ್ಮೀ ದೇವಿ ಹಾಗೂ ಶೈಲಜ ಬಾಗಲಿಯವರು ಮತದಾರರ ಬಳಿ ಮನವಿ ಮಾಡಿದರು. ಕುಷ್ಟಗಿ ವಿಧಾನ ಸಭಾ ಕ್ಷೇತ್ರದಲ್ಲಿ ನೀರು ಸರಿ ಬರುತ್ತಿಲ್ಲ, ಯುಜಿಡಿ ತೊಂದರೆಯಾಗುತ್ತಿದೆ; ಬೀದಿ ದೀಪಗಳಿಲ್ಲ; ಯಾರಾದರೂ ಲಂಚ ತೆಗೆದುಕೊಳ್ಳುತ್ತಾರೆ, ಈ ಥರದ ಯಾವ‌ ಸಂಕಷ್ಟಕ್ಕೂ ತುತ್ತಾಗದಂತೆ ನಮ್ಮ ಯಜಮಾನರು ರೈತರ ಪರವಾಗಿ, ದೀನ ದಲಿತರ ಫರವಾಗಿ, ಕೂಲಿ ಕಾರ್ಮಿಕರ ಪರವಾಗಿ, ಸದಾ ನಿಮ್ಮ ಬೆನ್ನ ಹಿಂದೆ ಇರುತ್ತಾರೆ. ಇವತ್ತಿಗೂ ಯಾವುಬ್ಬ ಕಾರ್ಯಕರ್ತರಿಗೂ ಸರಿದು ನಿಲ್ಲು ಎನ್ನುವ ಶಬ್ದ ತಮ್ಮ ಬಾಯಿಯಿಂದ ಬಂದಿಲ್ಲ, ಬರುವುದುಯಿಲ್ಲ, ಮಾನವತವಾದಿ, ಅಹಂ ಅಂತು ಇಲ್ವೇ ಇಲ್ಲಾ. ಇಂತಹ ಮೌಲ್ಯಾಧಾರಿತವುಳ್ಳ ವ್ಯಕ್ತಿಯಾಗಿದ್ದಾರೆ, ಇವರು ಇಲ್ಲಿಯವರೆಗೂ ಯಾರಿಗೂ ಕೆಟ್ಟದ್ದನ್ನ ಭಯಸಿದವರಲ್ಲ, ಇವರು ವ್ಯಕ್ತಿ ಅಲ್ಲಾ, ನಮ್ಮ ನಿಮ್ಮೆಲ್ಲರ ಶಕ್ತಿ, ಇವರನ್ನ ಮತ್ತೊಂದು ಸಾರಿ ಅವಕಾಶ ನೀಡಿ, ತಮ್ಮ ಸೇವೆ ಮಾಡಲು ಅನೂವು ನೀಡಬೇಕು, ಜೊತೆಗೆ ಮಾನ್ಯ ಮಹಿಳೆಯರು  ನೀಮ್ಮ ಮನೆಯ ಮಗನೆಂದು ನಿಮ್ಮ ಮಡಲಲ್ಲಿ ಹಾಕಿಕೊಳ್ಳಬೇಕು, ಕುಷ್ಟಗಿ ವಿಧಾನ ಸಭಾ ಕ್ಷೇತ್ರದ ಅಭಿವೃದ್ದಿಗೆ ಸಹಕರಿಸಿಲು ಅನುವೂ ಮಾಡಿಕೊಡಬೇಕು ಎಂದು ಮನವಿ ಮಾಡಿಕೊಂಡರು. ಜೊತೆಗೆ ಬಡವರ ಬಂದು, ಕೂಲಿ ಕಾರ್ಮಿಕರ ಏಳಿಗೆಗೆ ಸಹಕರಿಸುತ್ತೆನೆ. ಸದ್ಯ ನಡೆಯುವ ಭ್ರಷ್ಠಚಾರವನ್ನು ಸರಿಪಡಿಸುತ್ತೇನೆ. ಇದ್ಯಾವುದನ್ನೂ ಮಾಡಲು ನನಗೆ ಹೊಸ ಕಾನೂನು ಬೇಕಾಗಿಲ್ಲ. ಅದೆಲ್ಲಾ ಸರಿಪಡಿಸಲು ಬೇಕಾದ ಮಾನವ ಸಂಪನ್ಮೂಲ, ಆರ್ಥಿಕ ಸಂಪನ್ಮೂಲ ಸರ್ಕಾರದಲ್ಲಿದೆ. ಈಗಾಗಲೇ ಈ ದೇಶದ ಮಹಾಜನತೆಯ ನೆಮ್ಮದಿ ಕಾಪಾಡಲು ಅದ್ಬುತ ಕಾನೂನುಗಳಿವೆ. ಪರಮ ಅದ್ಭುತವಾದ ಸಂವಿಧಾನ ಇದೆ. ಅವುಗಳ ಆಧಾರದಲ್ಲಿ ಈ ಈ ಕುಷ್ಟಗಿ ವಿಧಾನ ಸಭಾ ಕ್ಷೇತ್ರವನ್ನು ಅತ್ಯಂತ ನೆಮ್ಮದಿಯಾಗಿ ಇಟ್ಟು ಕೊಳ್ಳುತ್ತಾರೆ ಎಂದರು. ಒಟ್ಟಿನಲ್ಲಿ ಈ ಸಾರಿ ಮತದಾರರು ಪ್ರಚಂಡ ಬಹುಮತದಿಂದ ಆರಿಸಿ ತರಬೇಕು. ಈ ಸಂದರ್ಭದಲ್ಲಿ ದೊಡ್ಡಗೌಡ ಪಾಟೀಲ್ ಇವರ ಪತ್ನಿಯರಾದ ಶ್ರೀಮತಿ ಲಕ್ಷ್ಮೀದೇವಿ, ಶೈಲಾಜ ಬಾಗಲಿ, ಲಲೀತ ಮ್ಯಾಗಳಮನಿಯವರು, ಹಾಗೂ ಊರಿನ ಮುಖಂಡರಾದ ವೀರಭದ್ರಪ್ಪ ನಾಲತವಾಡ, ಶಿವನಗೌಡ ಪೊಲೀಸ್ ಪಾಟೀಲ್ , ಸಾಗರ್ ಬೇರಿ, ಮಂಜುನಾಥ ಜೂಲಕುಂಟಿ, ಅರುಣ್ ನಾಲತವಾಡ, ರಮೇಶ ಗೀರಣಿ, ಹಾಗೂ ಸರ್ವ ಸದ್ಸ್ಯರು ಮತ್ತು ಕಾರ್ಯಕರ್ತರು, ಹಾಗೂ ಊರಿನ ಗುರು/ಹಿರಿಯರು ಪಾಲುಗೊಂಡು ಈ ಕಾರ್ಯಕ್ರಮ ಯಶಸ್ವಿಗೊಳಿಸಿದರು.

ವರದಿ- ಸಂಪಾದಕೀಯಾ

Leave a Reply

Your email address will not be published. Required fields are marked *