ಕಾರ್ಮಿಕ ಸಂಘ-TUCI ತಾಲೂಕು ಸಮಿತಿವತಿಯಿಂದ ವಸತಿ ನಿಲಯ ಕಾರ್ಮಿಕರ ಬಾಕಿ ವೇತನಕ್ಕಾಗಿ ಫೆ, 6 ರಂದು ತಹಶೀಲ್ ಕಛೇರಿ ಮುಂದೆ ಅನಿರ್ದಿಷ್ಟ ಧರಣಿ !

Spread the love

ಕಾರ್ಮಿಕ ಸಂಘ-TUCI ತಾಲೂಕು ಸಮಿತಿವತಿಯಿಂದ ವಸತಿ ನಿಲಯ ಕಾರ್ಮಿಕರ ಬಾಕಿ ವೇತನಕ್ಕಾಗಿ ಫೆ, 6 ರಂದು ತಹಶೀಲ್ ಕಛೇರಿ ಮುಂದೆ ಅನಿರ್ದಿಷ್ಟ ಧರಣಿ !

ಸಮಾಜ ಕಲ್ಯಾಣ ಇಲಾಖೆ ಅಡಿಯಲ್ಲಿ ಬರುವ ಮೆಟ್ರಿಕ್ ಪೂರ್ವ ಹಾಗೂ ಮೆಟ್ರಿಕ್ ನಂತರದ ಬಾಲಕ & ಬಾಲಕೀಯರ ವಸತಿ ನಿಲಯಗಳಲ್ಲಿ ಕಳೆದ 20 ವರ್ಷಗಳಿಂದ ದಿನಗೂಲಿ ನೌಕರರಾಗಿ ಸೇವೆ ಸಲ್ಲಿಸುತ್ತಿದ್ದ ಕಾರ್ಮಿಕರಿಗೆ  ಕಳೆದ 13-14 ತಿಂಗಳುಗಳಿಂದ ಬಾಕಿ ವೇತನ ಪಾವತಿ ಮಾಡಿರುವುದಿಲ್ಲ. ಹಾಗೆಯೆ, ಪಿಎಫ್, ಇಎಸ್‌ಐ, ಸಮಾನ ದುಡಿಮೆಗೆ ಸಮಾನ ವೇತನ, ಹಾಜರಾತಿ, ದಿನಕ್ಕೆ ಎಂಟು ಗಂಟೆ ಕೆಲಸ, ಅಧಿಕಾರಿಗಳ ಕಿರುಕುಳ, ಸಂಬಂದಪಟ್ಟ ಏಜೆನ್ಸಿಯಿಂದ ಸೇವಾ ಪ್ರಮಾಣ ಪತ್ರಕ್ಕಾಗಿ ಆಗ್ರಹಿಸಿ ನಾಳೆ ದಿನಾಂಕ : 06.02.2023 ರಂದು ಕರ್ನಾಟಕ ರಾಜ್ಯ ವಸತಿ ನಿಲಯಗಳ ಕಾರ್ಮಿಕ ಸಂಘ-ಟಿಯುಸಿಐ ವತಿಯಿಂದ ಕಾರ್ಮಿಕರ ಬೇಡಿಕೆಗಳು ಈಡೇರುವವರೆಗೆ ಅನಿರ್ದಿಷ್ಟ ಧರಣಿಯನ್ನು  ಹಮ್ಮಿಕೊಳ್ಳಲಾಗಿದೆ. ಕಾರಣ ಅನಿರ್ದಿಷ್ಟ ಧರಣಿ ಹೋರಾಟಕ್ಕೆ ಸಿಂಧನೂರು ತಾಲೂಕಿನ ಎಲ್ಲಾ ವಸತಿ ನಿಲಯಗಳ ಕಾರ್ಮಿಕರು ಭಾಗವಹಿಸಬೇಕೆಂದು ವಿನಂತಿ. ಮತ್ತು ಸಿಂಧನೂರು ತಾಲೂಕಿನ ಜನಪರ ಹೋರಾಟನಿರತ ಸಂಘಟನೆಗಳು ನಮ್ಮ ಹೋರಾಟಕ್ಕೆ ಬಂದು ಭಾಗವಹಿಸಿ ಬೆಂಬಲಿಸಲು ಮನವಿ. ಹಾಗೆಯೇ ಮಾನ್ಯ ತಹಶಿಲ್ದಾರರು ಮತ್ತು ಪೋಲಿಸರು ನಮ್ಮ ಧರಣಿ ಹೋರಾಟಕ್ಕೆ ಮಾನ್ಯ ಜಿಲ್ಲಾಧಿಕಾರಿಗಳನ್ನು ಮತ್ತು ಉಪ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ ರಾಯಚೂರು ಇವರನ್ನು ಕರೆಯಿಸಿ ಮನವಿ ಕೊಡಿಸಿ ಕೂಡಲೇ ನಮ್ಮ ಬೇಡಿಕೆಗಳನ್ನು ಪರಿಹರಿಸಬೇಕೆಂದು ತಾಲೂಕು ಆಡಳಿತಕ್ಕೆ ನಮ್ಮ ಸಂಘಟನೆಯ ಒತ್ತಾಯವಾಗಿದೆ. ಮಹಾನಂದ ತಾಲ್ಲೂಕು ಅಧ್ಯಕ್ಷರು ಎಂ.ಗಂಗಾಧರ ಗೌರವಾಧ್ಯಕ್ಷರು ಸಂತೋಷಕುಮಾರ ಉಪಾಧ್ಯಕ್ಷರು ಸುಶೀಲಮ್ಮ ಉಪಾಧ್ಯಕ್ಷರು, ವಿರೇಶ, ಪ್ರಧಾನ ಕಾರ್ಯದರ್ಶಿ, ಗಂಗೂಬಾಯಿ ಖಜಾಂಚಿ, ಕರ್ನಾಟಕ ರಾಜ್ಯ ವಸತಿ ನಿಲಯಗಳ ಕಾರ್ಮಿಕ ಸಂಘ-TUCI ಸಿಂಧನೂರು.

ವರದಿ – ಸಂಪಾದಕೀಯಾ

Leave a Reply

Your email address will not be published. Required fields are marked *