“ಶಿಲ್ಪಾ ಶ್ರೀನಿವಾಸ್” ಮೊದಲ ಹಂತದ ಚಿತ್ರೀಕರಣ ಮುಕ್ತಾಯ.
ಬೆಂಗಳೂರು: ಸ್ನೇಹಾಲಯಂ ಕ್ರಿಯೇಷನ್ಸ್ ಲಾಂಛನದಲ್ಲಿ ರಾಜೀವ್ ಕೃಷ್ಣ ಗಾಂಧಿ ಕಥೆ,ಚಿತ್ರಕಥೆ,ಸಂಭಾಷಣೆ ಬರೆದು ನಿರ್ದೇಶನದೊಂದಿಗೆ ನಿರ್ಮಾಣ ಮಾಡುತ್ತಿರುವ ಹಾರರ್ ,ಸಸ್ಪೆನ್ಸ್ , ಥ್ರಿಲ್ಲರ್ ಚಲನಚಿತ್ರ “ಶಿಲ್ಪಾ ಶ್ರೀನಿವಾಸ್” ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ. ವಿಶೇಷ ಏನಂದರೆ “ಶಿಲ್ಪಾ ಶ್ರೀನಿವಾಸ್” ಚಿತ್ರದಲ್ಲಿ ಖ್ಯಾತ ನಿರ್ಮಾಪಕರು , ವಿತರಕರೂ, ಹಾಗು ಪ್ರಸ್ತುತ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಉಪಾಧ್ಯಕ್ಷರಾದ ಶಿಲ್ಪಾ ಶ್ರೀನಿವಾಸ್‌ರವರೆ ಕಥಾನಾಯಕರಾಗಿರುವುದು. ಗಾಂಧಿನಗರದ ಗಲ್ಲಿ ಗಲ್ಲಿಗಳಲ್ಲಿ ಸಿನಿಮಾ ಹೆಸರನ್ನೇಳಿಕೊಂಡು ಹೀನಾಯ ಕೃತ್ಯಗಳನ್ನೆಸೆಗುತ್ತಿರವವರ ಪಾಲಿಗೆ ಶಿಲ್ಪಾ ಶ್ರೀನಿವಾಸ್ ಹೇಗೆ ಸಿಂಹ ಸ್ವಪ್ನ ಆಗುತ್ತಾರೆ ಎಂಬ ಕಥಾವಸ್ತುವಿರುವ ಈ ಚಿತ್ರ ಸತತ ೧೨ ದಿನಗಳ ಕಾಲ ಹೊಸಕೋಟೆ, ವೈಟ್ ಫೀಲ್ಡ್, ಬೆಳ್ಳಿಕೆರೆ. ವಾಲೇಪುರ. ಭಕ್ತರಹಳ್ಳಿ, ಕೂಗೂರು, ಗಟ್ಟಿಗನಬ್ಬೆ ಮೊದಲಾದ ಕಡೆ ಚಿತ್ರೀಕರಣ ನಡೆಸಿ, ಶಿಲ್ಪಾ ಶ್ರೀನಿವಾಸ್. ಕಿಶೋರ್ ಕಾಸರಗೋಡು. ಪ್ರಿಯಾಂಕ. ಸ್ವಾತಿ ಲಿಂಗರಾಜ್. ಮಾಸ್ಟರ್ ಅಭ್ಯಂತ್ , ಮಾಸ್ಟರ್ ಮನ್ವಿತ್ ಗೌಡ. ಸೀತಾರಾಂ. ನಿಖಿಲ್. ಶೋಭರಾಜ್. ನಂದಿನಿ ಕಾಮಯ್ಯ. ನಾಗೇಂದ್ರ ಅರಸ್, ಸಿಂಗರ್ ಮನು. ಶಿವಕುಮಾರ್. ನಮ್ರತಾ, ಕಿರಣ್ ಗಟ್ಟಿಗನಬ್ಬೆ ಮೊದಲಾದವರು ನಟಿಸಿದ ಹಲವು ದೃಶ್ಯಗಳನ್ನು ಚಿತ್ರೀಕರಿಸಲಾಯಿತು.
ಪ್ರಮೋದ್ ಭಾರತೀಯ ಛಾಯಾಗ್ರಹಣ, ಅನಿರುದ್ಧ ಶಾಸ್ತ್ರಿ ಸಂಗೀತ. ಪ್ರತಾಪ್ ಭಟ್ ಸಾಹಿತ್ಯ. ಅಲ್ಟಿಮೇಟ್ ಶಿವು ಸಾಹಸ, ಮಲ್ಲಿಕಾರ್ಜುನ ಕಲೆ, ಮೋಹನ್ ಕುಮಾರ್ ಪ್ರಸಾಧನ. ಇಂದ್ರಕುಮಾರ್ ಸ್ಥಿರ ಚಿತ್ರಣ , ಡಿ.ಮಲ್ಲಿ ಸಂಕಲನ , ಎಂ ಜಿ ಕಲ್ಲೇಶ್, ಡಾ ಪ್ರಭು ಗಂಜಿಹಾಳ, ಡಾ ವೀರೇಶ ಹಂಡಗಿ ಪಿ.ಆರ್.ಓ ಅಗಿದ್ದಾರೆ. ಶೀಘ್ರದಲ್ಲಿಯೇ ಎರಡನೇ ಹಂತದ ಚಿತ್ರೀಕರಣ ಪ್ರಾರಂಭ ಆಗಲಿದ್ದು ಇದರಲ್ಲಿ ಸ್ವಸ್ತಿಕ್‌ಶಂಕರ್ ಹಾಗು ಬಾಹುಬಲಿ ಖ್ಯಾತಿಯ ಕಾಲಕೇಯ ಪ್ರಭಾಕರ್‌ರವರು ಸಹ ಅಭಿನಯಿಸಲಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಅಕ್ಟೋಬರ್ ಮೊದಲ ವಾರದಲ್ಲಿ ಚಿತ್ರವನ್ನು ಬಿಡುಗಡೆ ಮಾಡಲು ಚಿತ್ರತಂಡ ಸಜ್ಜಾಗುತ್ತಿದೆ.
** -ಡಾ.ಪ್ರಭು ಗಂಜಿಹಾಳ ಮೊ:೯೪೪೮೭೭೫೩೪೬