ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಸಿಗುವುದು ಖಚಿತ ; ಶಾಸಕ ಬಸನಗೌಡ ಯತ್ನಾಳ್  ಭರವಸೆ.

Spread the love

ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಸಿಗುವುದು ಖಚಿತ ; ಶಾಸಕ ಬಸನಗೌಡ ಯತ್ನಾಳ್  ಭರವಸೆ.

ಯಲಬುರ್ಗಾ : ತಾಲೂಕಿನ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದವರೆಲ್ಲರೂ 2ಎ ಮೀಸಲಾತಿ ಹಾಕ್ಕೋತಾಯದ  ಕೂಗು ಎದ್ದಿದೆ. ಹೀಗಾಗಿ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಸಿಗುವುದು ಖಚಿತ ಎಂದು ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ ಅವರು ಭರವಸೆ ವ್ಯಕ್ತಪಡಿಸಿದ್ದಾರೆ. ತಾಲೂಕಿನ ಮುಧೋಳ ಗ್ರಾಮದ ಸ್ಪೂರ್ತಿ ಶಾಲಾ ಆವರಣ ಕಳಕಪ್ಪ ಬಸವಣ್ಣಪ್ಪ ಕಮತರ ಅವರ ವೇದಿಕೆಯಲ್ಲಿ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ವತಿಯಿಂದ ವೀರರಾಣಿ ಕಿತ್ತೂರು ಚನ್ನಮ್ಮನ 199ನೇ ವಿಜಯೋತ್ಸವವನ್ನು ಹಾಗೂ 244ನೇ ಜಯಂತಿ ಮತ್ತು ತಾಲೂಕಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಆಯೋಜಿಸಲಾಗಿತ್ತು. ಮುಧೋಳ ಗ್ರಾಮದ ಅಂಬೇಡ್ಕರ್ ವ್ರತ್ತ ದಿಂದ ಕಾರ್ಯಕ್ರಮದ ವೇದಿಕೆಯವರೆಗೂ ಕುಂಭ ಮೇಳದೊಂದಿಗೆ ಅದ್ದೂರಿ ಮೆರವಣಿಗೆ ನಡೆಯಿತು. ಹಾಗೂ ಪಂಚಮಸಾಲಿ 2ಎ ಮೀಸಲಾತಿ ಬೃಹತ್ ತಾಲೂಕು ಸಮಾವೇಶಕ್ಕೆ ಸಸಿಗೆ ನೀರು ಹಾಕುವ ಮೂಲಕ  ಚಾಲನೆ ನೀಡಿ ಮಾತನಾಡಿದ ಅವರು,  2ಎ ಮೀಸಲಾತಿ ಸಿಗುವುದು ನಿಶ್ಚಿತ. ಈ ಕುರಿತು ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಅವರು ಭರವಸೆ ನೀಡಿದ್ದಾರೆ ಎಂದು ಖಚಿತಪಡಿಸಿದರು. ನಂತರ ಮಾತನಾಡಿದ ವೀರಶೈವ ಲಿಂಗಾಯಿತ ಪಂಚಮಸಾಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷರಾದ ವಿಜಯಾನಂದ ಕಾಶಪ್ಪನವರ್ ಮಾತನಾಡಿ, ದಲಿತ-ಹಿಂದುಳಿದ ಸಮುದಾಯಗಳಿಗೆ ಮೀಸಲಾತಿ ಹಕ್ಕು ಸಿಗಲಿ ಎಂಬ ಉದ್ದೇಶದಿಂದ ನಾವು ಮೌನವಾಗಿದ್ದೆವು. ಆದರೆ ಈಗ ನಾವು ಸುಮ್ಮಿರಲು ಸಾಧ್ಯವಿಲ್ಲ. ಎಲ್ಲರಿಗೂ ಮೀಸಲಾತಿ ಕೊಟ್ಟಿರುವ ಸರ್ಕಾರಕ್ಕೆ ನಮಗೆ ಮೀಸಲಾತಿ ಕೊಡಲು ಏನು ಆಗುತ್ತದೆ ಎಂದು ಹೇಳಿದರು. ಬೆಳಗಾವಿ ಚಳಿಗಾಲದ ಅಧಿವೇಶದಲ್ಲಿ ಪಂಚಾಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಘೋಷಣೆ ಮಾಡಬೇಕು. ಯಾರದ್ದೋ ಒತ್ತಡಕ್ಕೆ ಮಣಿದು ಮೀಸಲಾತಿ ನೀಡಲು ಮೀನಮೇಷ ಮಾಡಿದರೆ, ಮುಂದಿನ ಚುನಾವಣೆಯಲ್ಲಿ ಪಂಚಮಸಾಲಿ ಸಮಾಜದ ಶಕ್ತಿ ಏನೆಂಬುದನ್ನು ತೋರಿಸುತ್ತೇವೆ” ಎಂದು ಎಚ್ಚರಿಸಿದರು.

ನಂತರ ಬಸವ ಜಯ ಮೃತ್ಯುಂಜಯ ಮಹಾಸ್ವಾಮೀಜಿ ಅವರು ಮಾತನಾಡಿ. ಹಿಂದೆ ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಮೀಸಲಾತಿ ವಿಚಾರವಾಗಿ ಮಾತು ನೀಡಿ ತಪ್ಪಿದ್ದಾರೆ. ಈಗಿರುವ ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ‌ಅವರೂ ಮಾತು ತಪ್ಪಿದ ಹಿನ್ನೆಲೆಯಲ್ಲಿ ಈಗಾಗಲೇ ಸಾಕಷ್ಟು ಉಪವಾಸ ಸತ್ಯಾಗ್ರಹ, ಪಾದಯಾತ್ರೆ, ಧರಣಿಗಳನ್ನೂ ಮಾಡಿದ್ದೇವೆ. ಅಲ್ಲದೇ, ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಸದನದಲ್ಲಿಯೂ ಧ್ವನಿ ಎತ್ತಿದ್ದಾರೆ. ಆದರೂ ಸರ್ಕಾರ ನಮ್ಮ ಸಮಾಜದ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದೆ. ದೃಢ ನಿರ್ಧಾರ ಕೈಗೊಳ್ಳುತ್ತಿಲ್ಲ’ ಎಂದು ಡಿಸೆಂಬರ್ 19 ರಂದು ಬೆಳಗಾವಿಯಲ್ಲಿ ಅಧಿವೇಶನದಲ್ಲಿ ಪಂಚಮಸಾಲಿ 2ಎ ಮೀಸಲಾತಿ ಕೊಡಬೇಕು ಎಂದು ಹೇಳಿದರು.

ಕೊಪ್ಪಳ ಸಂಸದರು ಸಂಗಣ್ಣ ಕರಡಿ ಪ್ರಸ್ತವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಮಾಜಿ ಸಂಸದರು ಶಿವರಾಮಗೌಡ  ಪಂಚಮಸಾಲ ಸಮಾಜ ಜಿಲ್ಲಾಧ್ಯಕ್ಷರು ಬಸನಗೌಡ ತೊಂಡಿಹಾಳ ಸಮಾಜದ ಮುಖಂಡರು ಬಸಲಿಂಗಪ್ಪ ಬೂತೆ ಬಸುರಾಜ್ ಉಳ್ಳಾಗಡ್ಡಿ ಶ್ರೀಪಾದಪ್ಪ ಅಧಿಕಾರಿ ಸಿ ಎಚ್ ಪಾಟೀಲ್ ಬಿ ಎಸ್ ಪಲ್ಲೆದ ನಿವೃತ್ತಿ ನ್ಯಾಯಾಧೀಶರು ವೀರಣ್ಣ ಕಮತರ್ ದೇವೇಂದ್ರಪ್ಪ ಬಳೂಟಿಗಿ ಕಳಕನ ಗೌಡ ಕಲ್ಲೂರ್ ವೀರಣ್ಣ ಹುಬ್ಬಳ್ಳಿ ಕೊಟ್ರಪ್ಪ  ತೋಟದ್ ಸುರೇಶ್ ಗೌಡ ಶಿವನಗೌಡ ಅಂಬರೀಶ್ ಹುಬ್ಬಳ್ಳಿ ಪಟ್ಟಣ ಪಂಚಾಯ್ತಿ ಅಧ್ಯಕ್ಷರು ತಾಲೂಕಾ ಪಂಚಮಶಾಲಿ ಸಮಾಜದ ಅಧ್ಯಕ್ಷರು ಕೆ ಜಿ ಪಲ್ಲೇದ್ ಕುಕನೂರು ಪಂಚಮಸಾಲೆ ಸಮಾಜದ ಅಧ್ಯಕ್ಷರು ವೀರಣ್ಣ ಅಣ್ಣಿಗೇರಿ ತಾಲೂಕ ಪಂಚಮಸಾಲಿ ಸಮಾಜ ಯುವ ಘಟಕ ಅಧ್ಯಕ್ಷರು ಮಹೇಶ್ ಭೂತೆ ತಾಲೂಕ ಪಂಚಮಸಾಲಿ ಸಮಾಜದ ಕಾರ್ಯದರ್ಶಿ ರಾಜಶೇಖರ್ ನಿಂಗೋಜಿ ತಾಲೂಕ ಸುತ್ತಮುತ್ತಲಿನ ವೀರಶೈವ ಪಂಚಮಸಾಲಿ ಸಮಾಜದವರೆಲ್ಲರೂ ಹಾಗೂ ಮುಧೋಳ ಗ್ರಾಮದ ಸಾರ್ವಜನಿಕರೆಲ್ಲರೂ ಭಾಗವಹಿಸಿದ್ದರು.

ವರದಿ – ಹುಸೇನಬಾಷ ಮೋತೆಖಾನ್

Leave a Reply

Your email address will not be published. Required fields are marked *