ಸಂವಿಧಾನ ಸಮರ್ಪಣಾ ದಿನ ಮತ್ತು ಆಮ್ ಆದ್ಮಿ ಪಕ್ಷದ 10ನೇ ವರ್ಷದ ಸಂಸ್ಥಾಪನ ದಿನದ ಪ್ರಯುಕ್ತ ಗಂಗಾವತಿ ನಗರದಲ್ಲಿ ಬೃಹತ್ ಜಾಗೃತಿ ಜಾತ ಮತ್ತು ಸಭೆ ನಡೆಸಲಾಯಿತು.

Spread the love

ಸಂವಿಧಾನ ಸಮರ್ಪಣಾ ದಿನ ಮತ್ತು ಆಮ್ ಆದ್ಮಿ ಪಕ್ಷದ 10ನೇ ವರ್ಷದ ಸಂಸ್ಥಾಪನ ದಿನದ ಪ್ರಯುಕ್ತ ಗಂಗಾವತಿ ನಗರದಲ್ಲಿ ಬೃಹತ್ ಜಾಗೃತಿ ಜಾತ ಮತ್ತು ಸಭೆ ನಡೆಸಲಾಯಿತು.

ನಗರದ ನೀಲಕಂಠೇಶ್ವರ ವೃತ್ತದಿಂದ ಗಾಂಧಿ ವೃತ್ತದ ವರೆಗೆ ಗಾಂಧಿ ವೃತದಿಂದ ಕೃಷ್ಣದೇವರಾಯ ವೃತ್ತದ ವರೆಗೆ ಜಾತ ನಡೆಸಲಾಯಿತು. ನಂತರ ಗಂಗಾವತಿ ನಗರಸಭೆ ಮುಂದಿನ ವೇದಿಕೆ ಕಾರ್ಯಕ್ರಮದಲ್ಲಿ ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷರಾದ ಹುಸೇನ್ ಸಾಬ್ ಗಂಗನಾಳ್ ಮಾತನಾಡಿ ಇಂದಿನ ದಿನ ಎರಡು ವಿಶೇಷ ಕಾರಣಗಳಿಗಾಗಿ ಪ್ರಮುಖವಾಗಿದೆ ಒಂದು ವಿಶ್ವ ಶ್ರೇಷ್ಠವಾದ ಸಂವಿಧಾನವನ್ನು ನಮಗೆ ನಾವೇ ಸಮರ್ಪಿಸಿಕೊಂಡ ದಿನವಾಗಿದ್ದು ಮತ್ತು ಅದೇ ದಿನ ಆಮ್ ಆದ್ಮಿ ಪಕ್ಷದ ಸಂಸ್ಥಾಪನೆಯಾದದ್ದು ಇಂದು ಸಂವಿಧಾನಕ್ಕೆ ಅಪಚಾರ ತರುವಂತ ಕೃತಗಳು ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರದಿಂದ ನಡೆಯುತ್ತಿದ್ದು ಸಂವಿಧಾನದ ಆಶಯದಂತೆ ಸಮಾನತೆಯ ಬ್ರಾತೃತ್ವ ಸ್ವಾತಂತ್ರ್ಯದ ನಮ್ಮ ಹಕ್ಕುಗಳಿಗೆ ದಕ್ಕೆ ಉಂಟಾಗುವಂತಹ ಕೆಲಸಗಳು ನಡೆಯುತ್ತಿವೆ ಇದೆ ಹಂತದಲ್ಲಿ ನಾವು ಅದನ್ನು ತಡೆಯದೆ ಹೋದಲ್ಲಿ ನಾವು ಮುಂದಿನ ದಿನಗಳಲ್ಲಿ ಸಂಕಷ್ಟಕ್ಕೆ ಗುರಿಯಾಗಬೇಕಾಗುತ್ತದೆ ನಾವೆಲ್ಲರೂ ಎಚ್ಚೆತ್ತುಕೊಳ್ಳೋಣ ಆಳುವ ಸರ್ಕಾರಗಳು ಸಂವಿಧಾನ ದ ಆಶಯದಂತೆ ನಡೆದುಕೊಳ್ಳುವಂತೆ ಮಾಡೋಣ ಅದು ತಪ್ಪಿದಲ್ಲಿ ನಾವೆಲ್ಲರೂ ಸೇರಿ ಹೋರಾಟ ಮಾಡೋಣ ಎಂದು ಹೇಳಿದರು ಅದರಂತೆ ಆಮದ್ಪಕ್ಷ ಸಂಸ್ಥಾಪನೆಯಾಗಿ ಕೇವಲ ಹತ್ತು ವರ್ಷದಲ್ಲಿ ಅತ್ಯುನ್ನತ ಸಾಧನೆಯನ್ನು ಮಾಡಿದೆ ಎರಡು ರಾಜ್ಯಗಳಲ್ಲಿ ಅಧಿಕಾರವನ್ನು ಹಿಡಿದು ಜನಸಾಮಾನ್ಯರ ಸಂಕಷ್ಟಕ್ಕೆ ಸ್ಪಂದಿಸುವ ಕೆಲಸವನ್ನು ಮಾಡುತ್ತಿದೆ ಇಂತಹ ಪಕ್ಷ ಕರ್ನಾಟಕದಲ್ಲಿಯೂ ಸದೃಢವಾಗಿ ಬೆಳೆಯಬೇಕು ಅದಕ್ಕೆ ನಿಮ್ಮೆಲ್ಲ ಕಾರ್ಯಕರ್ತರ ಪರಿಶ್ರಮ ಅಗತ್ಯವಿದೆ ಎಂದರು ನಂತರ ಮಾತನಾಡಿದ ತಾಲೂಕು ಅಧ್ಯಕ್ಷರು ಮತ್ತು ಎಂಎಲ್ಎ ಆಕಾಂಕ್ಷಿ ಶರಣಪ್ಪ ಸಜ್ಜಿ ಹೊಲ ರವರು ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರು ನೀಡಿದ ಸಂವಿಧಾನದ ನೆರಳಿನಲ್ಲಿ ನಾವೆಲ್ಲರೂ ನಮ್ಮ ಸಮೃದ್ಧ ಜೀವನವನ್ನು ಕಟ್ಟಿಕೊಳ್ಳುತ್ತಿದ್ದೇವೆ ನಮ್ಮ ಸಂವಿಧಾನ ನಮ್ಮೆಲ್ಲರಿಗೂ ಸಮಾನತೆಯನ್ನು ಸ್ವಾತಂತ್ರ್ಯತೆಯನ್ನು ಹಕ್ಕನ್ನು ಕೂಡ ನೀಡಿದೆ ಸಂವಿಧಾನದ ಆಶಯಗಳು ಪರಿಪೂರ್ಣವಾಗಿ ಈಡೇರಬೇಕಾಗಿದೆ ಅದಕ್ಕಾಗಿ ನಾವೆಲ್ಲರೂ ಸಂವಿಧಾನಕ್ಕೆ ಯಾವುದೇ ಅಪಚಾರವಾದಲ್ಲಿ ಕೂಡಲೇ ದಣಿ ಎತ್ತಬೇಕಾದ ಕೆಲಸವನ್ನು ಮಾಡಬೇಕಾಗಿದೆ ಎಂದರು ಮುಂದುವರೆದು ಮಾತನಾಡಿ ಆಮ್ ಆದ್ಮಿ ಪಕ್ಷ ಇಡೀ ದೇಶದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ರಾಜಕೀಯ ಪಕ್ಷವಾಗಿದ್ದು ಸ್ಥಾಪನೆಯಾದ ಹತ್ತೆ ವರ್ಷದಲ್ಲಿಯೇ ಎರಡು ರಾಜ್ಯಗಳಲ್ಲಿ ಅಧಿಕಾರವನ್ನು ಹಿಡಿದು ಗುಜರಾತ್ ನಲ್ಲಿ ಜಯಭೇರಿ ಸ್ಥಾಪಿಸಲು ಸಂಘಟಿತ ಹೋರಾಟವನ್ನು ನಡೆಸುತ್ತಿದೆ ಬೆಳವಣಿಗೆಗೆ ಅವಕಾಶಗಳಿದ್ದು ನಾವೆಲ್ಲರೂ ಒಗ್ಗೂಡಿ ಪಕ್ಷವನ್ನ ಸಂಘಟನೆ ಮಾಡಬೇಕಾಗಿದೆ ಗಂಗಾವತಿಯಲ್ಲಿ ಆಮ್ ಆದ್ಮಿ ಪಕ್ಷವು ನಿರಂತರವಾಗಿ ಜನಪರವಾದ ಹೋರಾಟಗಳನ್ನು ಮಾಡುತ್ತಾ ಪ್ರತಿಯೊಂದು ವಿಷಯಗಳಿಗೆ ಸ್ಪಂದನೆ ಮಾಡುತ್ತಾ ಬಂದಿದೆ ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಕೂಡ ಆಮ್ ಆದ್ಮಿ ಪಕ್ಷ ಜನಸಾಮಾನ್ಯರಿಗೆ ಹತ್ತಿರವಾಗುತ್ತಿದ್ದು ಪ್ರತಿಯೊಬ್ಬ ಮತದಾರರನ್ನು ಕೂಡ ಸೂಕ್ಷ್ಮವಾಗಿ ನಮ್ಮನ್ನು ಗಮನಿಸುತ್ತಿದ್ದಾನೆ ನಮ್ಮೆಲ್ಲರ ಸಂಘಟಿತ ಶಕ್ತಿಯ ಮೂಲಕ ಪ್ರತಿಯೊಬ್ಬ ಜನಸಾಮಾನ್ಯನ ಮನಸ್ಸನ್ನು ಗೆಲ್ಲುವ ಮೂಲಕ ಆಮ್ ಆದ್ಮಿ ಪಕ್ಷವನ್ನು ಗಂಗಾವತಿಯಲ್ಲಿ ಗೆಲ್ಲಿಸೋಣ ಎಂದರು ನಂತರ ಪಕ್ಷದ ಹಿರಿಯ ಮುಖಂಡರಾದ ವಿಕ್ರಂ ದವರು  ಮಾತನಾಡಿ ಇವತ್ತು ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಸುಳ್ಳು ಹೇಳಿ ಅಧಿಕಾರಕ್ಕೆ ಬಂದ ಸರ್ಕಾರಗಳು ಆಡಳಿತ ನಡೆಸುತ್ತಿವೆ ಸಂವಿಧಾನದ ಆಶೈಕ್ಯ ವಿರುದ್ಧವಾಗಿ ಜನಮಣ್ಣನೇ ಪಡೆದ ಸರ್ಕಾರವನ್ನು ಕೆಡವಿ ಕುತಂತ್ರದ ಮೂಲಕ ಹಣಬಲದ ಮೂಲಕ ಅಧಿಕಾರ ಹಿಡಿದಿರುವ ಬಿಜೆಪಿಯು ಸ್ವಚ್ಛ ಆಡಳಿತ ನೀಡುವಲ್ಲಿ ವಿಫಲವಾಗಿದೆ ಒಂದಿಲ್ಲೊಂದು ಹಗರಣಗಳಲ್ಲಿ  ಭಾಗಿಯಾಗಿ ಜನಮನ್ನಣೆಯನ್ನು ಕಳೆದುಕೊಂಡಿದೆ ಆ ಮಾತ್ನಿಗೆ ಇದು ಸಕಾಲವಾಗಿದ್ದು ನಾವೆಲ್ಲರೂ ಸಂಘಟಿತರಾಗಿ ಹೆಚ್ಚಿನ ಶ್ರಮವನ್ನು ರಹಿಸುವ ಮೂಲಕ ಆಮ್ ಆದ್ಮಿ ಪಕ್ಷವನ್ನು ಗಂಗಾವತಿಯಲ್ಲಿ ಅಧಿಕಾರಕ್ಕೆ ತರೋಣ ಎಂದರು ನಂತರ ಮಾತನಾಡಿದ ಪಕ್ಷದ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷರಾದ ಬಸವರಾಜ್ ಮ್ಯಾಗಳಮನೆಯವರು ಮಾತನಾಡಿ ದೇಶಕ್ಕೆ ಅಚ್ಚೆದಿನ್ ತರುತ್ತೇನೆಂದು ಅಧಿಕಾರಕ್ಕೆ ಬಂದ ಬಿಜೆಪಿಯ ಆಡಳಿತದಿಂದ ನಾವು ಕೆಟ್ಟ ದಿನಗಳನ್ನು ನೋಡುತ್ತಿದ್ದೇವೆ. ಸುಳ್ಳು ಹೇಳುವ ಸರ್ಕಾರಗಳು ಬಹಳ ದಿನ ನಡೆಯುವುದಿಲ್ಲ ಪ್ರತಿಯೊಬ್ಬ ಜನಸಾಮಾನ್ಯನು ಇಂದು ಬುದ್ದಿವಂತನಿದ್ದು ತನಗಾಗುತ್ತಿರುವ ಅನ್ಯಾಯವನ್ನು ಗಮನಿಸುತ್ತಿದ್ದಾನೆ ಮುಂದಿನ ದಿನಗಳಲ್ಲಿ ಈ ಜನಸಾಮಾನ್ಯನೇ ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆಯುತ್ತಾನೆ ಎಂದರು ಕಾರ್ಯಕ್ರಮವನ್ನು ಜಿಲ್ಲಾ ಮಾಧ್ಯಮ ವಕ್ತಾಯರಾದ ರಾಘವೇಂದ್ರ ಸಿದ್ದಿಕೇರಿ ರವರು ನಿರೂಪಿಸಿದರು ನಗರ ಘಟಕ ಅಧ್ಯಕ್ಷರಾದ ಪರಶುರಾಮ್ ಒಡೆಯರ್ ಅವರು ಸಂವಿಧಾನದ ಪೀಠಿಕೆಯನ್ನು ಬೋಧನೆ ಮಾಡಿದರು ಈ ಸಂದರ್ಭದಲ್ಲಿ ಆಮ್ ಆದ್ಮಿ ಪಕ್ಷದ ಪದಾಧಿಕಾರಿಗಳಾದ  ರೇಣುಕಾ ಬಸವರಾಜ್ ದೊಡ್ಡಬಸಪ್ಪ ಹನುಮೇಶ್ ಬೋವಿ ರಾಘವೇಂದ್ರ ಕಡೆಬಾಗಿಲು ಚಾಂದ್ ಪಾಷಾ ಬಸವರಾಜ್ ಕೊರಮ ಕ್ಯಾಂಪ್ ವೆಂಕಟೇಶ್ ಮೋಹನ್ ಭೋಗೇಶ ಆನೆಗುಂದಿ ಮಣಿಕಂಠ ಪ್ರಭು ಮಂಜುನಾಥ್ ಹನುಮೇಶ್ ಮಲ್ಲಾಪುರ ಹನುಮಗೌಡ ಕೃಷ್ಣ ಮುಂತಾದವರು ಹಾದರಿದ್ದರು.

ವರದಿ – ಸೋಮನಾಥ ವಿ.ಸಂಗನಾಳ

Leave a Reply

Your email address will not be published. Required fields are marked *