ಕೆರೆಗಳ ಅಭಿವೃದ್ಧಿಗೆ ಕಂಕಣ ಬದ್ಧರಾಗಬೇಕಿದೆ ಸಾಮಾಜಿಕ ಹೋರಾಟಗಾರ್ತಿ ಜ್ಯೋತಿ ಜಿ. ಮೈಸೂರು ವಿಶೇಷ ಅಂಕಣ ಬರಹ..!

Spread the love

ಕೆರೆಗಳ ಅಭಿವೃದ್ಧಿಗೆ ಕಂಕಣ ಬದ್ಧರಾಗಬೇಕಿದೆ ಸಾಮಾಜಿಕ ಹೋರಾಟಗಾರ್ತಿ ಜ್ಯೋತಿ ಜಿ. ಮೈಸೂರು ವಿಶೇಷ ಅಂಕಣ ಬರಹ..!

ಜನ ಸೇವೇ ಜನಾರ್ಧನ ಸೇವೆ ಎಂದೆಲ್ಲಾ ವೇದ ಘೋಷ ವ್ಯಾಕ್ಯಗಳನ್ನು ಮೊಳಗುವುದನ್ನು ನಾವೆಲ್ಲ ಕೇಳಿದ್ದೇವೆ. ಜನರಿಂದ ಜನರಿಗಾಗಿ ಜನರಿಗೋಸ್ಕರ ಇರುವ ಸರ್ಕಾರವನ್ನು ಪ್ರಜಾಪರ ಸರ್ಕಾರ ಎಂದು ಕರೆಯುತ್ತೇವೆ. ಜನರಪರ ಸೇವೆಯನ್ನು ಮಾಡುವುದು ಜನಪ್ರತಿನಿಧಿಯ ಆದ್ಯ ಕರ್ತವ್ಯ ಕೂಡ ಹೌದು. ಈ ನಿಟ್ಟಿನಲ್ಲಿ ನಮ್ಮೆಲ್ಲರ ಜವಬ್ದಾರಿಗಳು ಅನೇಕ ಇವೆ.

ರಾಜ್ಯದಲ್ಲಿ ಕೆರೆ ಕಟ್ಟೆಗಳ ಉಗಮ ಐತಿಹಾಸಿಕ ಹಿನ್ನಲೆಯ ಚರಿತ್ರೆಯನ್ನು ಹೊಂದಿವೆ. ಈ ಮಾನವನ ಅಭ್ಯುದೋಯಕ್ಕೆ ಹಲವಾರು ಸತ್ ಸಂಗತಿಗಳು ಕೂಡ ಅಷ್ಟೇ ಅತ್ಯಗತ್ಯ. ಈ ಹಿನ್ನಲೆಯ ನೋಟದಲ್ಲಿ ನೀರಿನ ಮೂಲ ಹುಡುಕುವುದು ಮನುಷ್ಯನ ಮೊದಲ ಯತ್ನದ ಪ್ರಯತ್ನವಾಗಿದೆ. ಈ ದಿಸೆಯಲ್ಲಿ ಅಂದೆಲ್ಲ ರೈತರಿಗೆ ಪ್ರಾಣಿ, ಪಕ್ಷಿಗಳಿಗೆ ನೀರಿನ ಮೂಲಾಧಾರವೆ ಕೆರೆ, ಹಳ್ಳ, ಕೊಳ್ಳಗಳಂತಹ ನೀರಿನ ಧಾಹ ತೀರಿಸುವ ಮೂಲಗಳು, ಹೀಗಾಗಿ ನಮ್ಮ ಕರ್ನಾಟಕದ ಕೆಲವು ಭಾಗಗಳಲ್ಲಿ ಇವುಗಳ ಜರೂರು ಜವಾಬ್ದಾರಿಗಳನ್ನೂ ನಾವೆಲ್ಲ ಮರೆತಂತಿದೆ. ಇಲ್ಲಿ ಅತ್ಯಮೂಲ್ಯ ಸಾಂಸ್ಕೃತಿಕ ಸ್ಥಳಗಳಿಗೆ ಉತ್ತೇಜನ ನೀಡಬೇಕು ಎಂಬುದು ಸ್ವ ಮತ್ತು ಸುದ್ದೇಶವಾಗಿದೆ. ಅವುಗಳನ್ನು ಸಂರಕ್ಷಿಸುವುದು ಸರ್ಕಾರದ ಜವಾಬ್ದಾರಿಯ ಜೊತೆಗೆ ನಮ್ಮ ಕರ್ತವ್ಯವೂ ಕೂಡ ಹೌದು. ಈಗಾಗಲೇ ಹಲವಾರು ಸಂರಕ್ಷಣ ಪ್ರಿಯರು ಇದರ ಬಗ್ಗೆ ಲೇಖನಗಳನ್ನು ಬರೆದಿದ್ದಾರೆ. ವೈಚಾರಿಕತೆಗೆ ಪೂರಕವಾದ ಚರ್ಚಾ ಪ್ರಕ್ರಿಯೆ ಪ್ರತಿಸ್ಪಂದನೆಗಳು ಕೂಡ ನಿತ್ಯ ನಿರಂತರವಾಗಿಯೇ ಸಾಗುತಿವೆ. ಆದರೂ ನಮ್ಮ ಸಂದೇಶದ ಉದ್ದೇಶ ಸರ್ಕಾರವು ಕೆರೆಗಳ ಬಗ್ಗೆ ನಿರ್ಲಕ್ಷಿಸದೆ ಅವುಗಳು ಸಂಪೂರ್ಣವಾಗಿ ಒತ್ತುವರಿಯಾಗದಂತೆ ಪ್ರಕೃತಿಯನ್ನು ಸಂರಕ್ಷಿಸಬೇಕು ಎಂಬುವುದೇ ಆಗಿದೆ. ಈಗಾಗಲೇ ಬಹುತೇಕ ಕೆರೆಗಳು ನಿರ್ವಹಣೆಯ ಕೊರತೆಯಿಂದ ಸೊರಗಿದೆ ಕೆಲವು ಕೆರೆಗಳಲ್ಲಿ ಗಿಡ ಗಂಟಿಗಳು ಬೆಳೆದು ನಿಂತಿವೆ, ಅಲ್ಲದೆ ಕೆರೆಗಳ ಸೇತುವೆಗಳು ಹಾಗೂ ಏರಿಗಳು ಭದ್ರವಾಗಿಲ್ಲ ಅಲ್ಲದೆ ಮೇಲ್ನೋಟಕ್ಕೆ ಕೆರೆಗಳ ನೀರು ತುಂಬಿದರೂ ಎಲ್ಲ ಕೆರೆಗಳಲ್ಲಿಯೂ ಹೂಳು ತುಂಬಿ ಹೋಗಿರುವುದರಿಂದ ಅವುಗಳ ಸಾಮಾರ್ಥ್ಯಕ್ಕೆ ನೀರು ತುಂಬಲು ಸಾದ್ಯವಾಗುತ್ತಿಲ್ಲ. ಹೂಳು ತೆಗೆಯಲು ಅಧಿಕಾರಿಗಳು ಯಾವುದೇ ಕ್ರಮಗಳನ್ನು ಸಹ ಕೈಕೊಂಡದಿರುವುದು ಬೇಜಾವಬ್ದಾರಿ ತನವಾಗಿದೆ. ನಾನು ಹೀಗೆಯೇ ಮಹದೇಶ್ವರ ಬೆಟ್ಟದ ಮಾರ್ಗದಲ್ಲಿ ಹೋಗುವಾಗ ಕಂಡ ಕೆಲವು ಕೆರೆಗಳು.ಸುಂದರವಾದ ಪರಿಸರದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿರುವ ನಮ್ಮ ಕರ್ನಾಟಕದಲ್ಲಿ ಅಧಿಕಾರಿಗಳು ಗಮನಹರಿಸಿ ಪಾಳು ಬಿದ್ದ,ಅಕ್ರಮವಾಗಿ ಆಕ್ರಮಿಸಿ ಕೊಳ್ಳುವ ಕೆರೆಗಳನ್ನು ಸಂರಕ್ಷಿಸಿ ಉತ್ತಮ ಕೆರೆಗಳಾಗಿ ಪರಿವರ್ತಿಸಿ ಅದಕ್ಕೆ ಹೊಸ ಕಾಯಕಲ್ಪವನ್ನು ನೀಡಬೇಕು.ಏಕೆಂದರೆ ಕೆಲವು ದೇಶಿ-ವಿದೇಶಿಗಳಿಂದ ಪಕ್ಷಿಗಳು ಬಂದು ಆಶ್ರಯಿಸುತ್ತದೆ.ಉತ್ತಮ ಪ್ರವಾಸಿ ತಾಣಗಳನ್ನಾಗಿ ಮಾಡಬಹುದು.ನಿಲರ್ಕ್ಷಕ್ಕೆ ಒಳಗಾಗಿರುವ ಅದೆಷ್ಟೂ ಕೆರೆಗಳುಂಟು, ಪ್ರಸ್ತುತ ನಮ್ಮ ಕರ್ನಾಟಕದಲ್ಲಿ    36,000 ಕೆರೆಗಳಿವೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗಳಲ್ಲಿ 33,000 ಸಣ್ಣ ಕೆರೆಗಳನ್ನು ಹೊಂದಿದ್ದು, ಮೂಲಭೂತ ಸೌಲಭ್ಯಗಳಿಲ್ಲದೆ ಗಿಡ, ಗಂಟೆಗಳಿಂದ ಹೂಳು ತುಂಬಿ ಹೋಗಿದೆ, ಅಲ್ಲದೆ  ಗ್ರಾ.ಪಂ ಕೆರೆಗಳ ಅಭಿವೃದ್ಧಿ ಮತ್ತು ಪುನಶ್ಚೇತಕ್ಕೆ ರಾಜ್ಯ ಸರ್ಕಾರದ ಬಳಿ ಅನುದಾನ ಲಭ್ಯವಿಲ್ಲವೇ..? ಇತ್ತೀಚಿಗಂತೂ ಮಳೆರಾಯನ ಕೃಪೆಯಿಂದ ಕೆರೆಕಟ್ಟೆಗಳು ಭರ್ತಿಯಾಗಿ ಸಂಪೂರ್ಣವಾಗಿ ಭರ್ತಿಯಾಗಿ ಕೋಡಿಬಿದ್ದಿವೆ. ಜಿಲ್ಲಾ ಪಂಚಾಯತಿ ಮತ್ತು ಗ್ರಾಮ ಪಂಚಾಯಿತಿಗಳ ನಿರ್ವಹಣೆಯ ಕೊರತೆಯಿಂದ ಕೆರೆಗಳ ಅಭಿವೃದ್ಧಿಯೇ ಮರೀಚಿಕೆಯಾಗಿ ನೀರಾವರಿ ಕೆಲಸಕ್ಕೆ ಸಂಕಷ್ಟ ಎದುರಾಗಿದೆ. ಈಗಲೂ ಬೆಂಗಳೂರಿನ ಸಾರಕ್ಕಿ ಕೆರೆಯು ಕಲುಷಿತ ಪರಿಸರ ವ್ಯವಸ್ಥೆಯಾಗಿದ್ದು ಹಲಸೂರು ಕೆರೆಯ ಕಲುಷಿತ ನೀರಿನಲ್ಲಿ ಆಟವಾಡುವ ಮತ್ತು ಮೀನು ಹಿಡಿಯುವ ಮಕ್ಕಳಿದ್ದಾರೆ, ಅಲ್ಲದೆ  ನಗರದ ಅತಿ ದೊಡ್ಡ ಕೆರೆಯಾದ ಬೆಳ್ಳಂದೂರು ಕೆರೆಯ ಕಲುಷಿತ ನೀರಿನಿಂದ ಸಂಗ್ರಹಿಸಿದ ಹುಲ್ಲನ್ನು ಆ ಭಾಗದ ಹಸುಗಳಿಗೆ ನೀಡಲಾಗುತ್ತದೆ. ಇಂತಹ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗಿದೆ, ಹಾಗೂ ನರೇಗ ಯೋಜನೆಯಲ್ಲಿ ಕೆರೆಗಳ ಅಭಿವೃದ್ದಿ ಹಾಗೂ ನಿರ್ವಹಣೆಗೆ ಸರ್ಕಾರದಿಂದ ಆದೇಶ ನೀಡಿದ್ದರು ಸಹ ಕೆಲವೊಂದು ಗ್ರಾಮಗಳಲ್ಲಿ ನಿರ್ವಹಣೆ ನಡೆಸುತ್ತಿದ್ದರೂ ಅಷ್ಟೂಂದು ಪ್ರಗತಿಯನ್ನು ಸಾಧಿಸಿಲ್ಲ ಎಂಬುದು ಸ್ಪಷ್ಟ ಚಿತ್ರಣ. ಮಾದರಿ ಕೆರೆ ಬರೀ ಘೋಷಣೆಯಾಗಿದೆ ಎನ್ನುವುದು ಪರಿಸರ ಕಾಳಜಿ ಪ್ರಿಯರ ಮಾತು.ಆದರ ಕಳೆದೆರಡು ವರ್ಷಗಳಲ್ಲಿ ಸಚಿವರಾಗಿದ್ದ ಎಸ್‌. ಸುರೇಶ್‌ ಕುಮಾರ್‌ ಅವರು ಈ ಭಾಗದ ಕೊಳ್ಳೆಗಾಲ, ಯಳಂದೂರು, ಹನೂರು ತಾಲೂಕುಗಳ ತಲಾ ಒಂದು ಕೆರೆಯನ್ನು ಮಾದರಿ ಕೆರೆಯನ್ನಾಗಿ ಅಭಿವೃದ್ದಿಪಡಿಸಲಾಗುವುದು ಎಂದು ಹೇಳಿ ಘೋಷಿಸಿದರು. ಯಾವುದೇ ಅಭಿವೃದ್ದಿ ಕೆರೆಗಳನ್ನು ಮಾಡದೆ ನಿರ್ಲಕ್ಷಿಸಿದ್ದಾರೆ ಎಂಬುದು ಜನರು ಹೇಳುತ್ತಿದ್ದಾರೆ. ಅಕ್ಟೋಬರ್‌ನಲ್ಲಿ ೧೫ ರಂದು ಒಂದು ಪ್ರತಿಷ್ಥಿತ ಪತ್ರಿಕೆಯಲ್ಲಿ ಚಂದಾಪುರ ಕೆರೆ ಅಭಿವೃದ್ದಿಗೊಳಿಸಲು ವಿಫಲವಾದ ಹಿನ್ನಲೆಯಲ್ಲಿ ಹಸಿರು ನ್ಯಾಯಾಧಿಕರಣ ಸರ್ಕಾರಕ್ಕೆ ೫೦೦ ಕೋಟಿ ದಂಡವನ್ನು ವಿಧಿಸಿದೆ. ಅಧಿಕಾರಿಗಳ ದಿವ್ಯ ನಿರ್ಲಕ್ಯ ಇದಕ್ಕೊಂದು ನಿದರ್ಶನವಷ್ಷೇ ಎಂದು ಹೇಳಬಹುದು. ಇಂತಹ ಕೆರೆಗಳಿಗೆ ಕೈಗಾರಿಕೆಗಳಿಂದ ಬಿಡುವ ತಾಜ್ಯಗಳು ಮೀನುಗಳ ಹಾಗೂ ಪಕ್ಷಿಗಳ ಪಾಲಿಗೆ ವಿಷವಾಗಿ ಪರಿಣಮಿಸಿದೆ. ಮೈಸೂರಿನಲ್ಲಿರುವ ಅತಿ ದೊಡ್ಡ ಕೆರೆಯಾದ ಈ ಭಾಗದ ಕುಕ್ಕರಳ್ಳಿಕೆರೆಯು ಸಹ ಸರಿಯಾದ ನಿರ್ವಹಣೆ ಇಲ್ಲದೆ ಕೆರೆಯ ಏರಿಯು ಕುಸಿಯುವ ಭೀತಿಯಲ್ಲಿದೆ ಎಂದು ದಿನಾಂಕ ೨೧ ರಂದು ಪತ್ರಿಕೆಯಲ್ಲಿ ಪ್ರಕಟಿಸಲಾಗಿತ್ತು. ಪರಿಸರ ಪ್ರೇಮಿಗಳು ಸ್ಪಂದಿಸಿದರೆ ಸಾಲದು.., ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ಕೆರೆಗಳನ್ನು ಉತ್ತಮವಾಗಿ ನಿರ್ವಹಿಸುವ ಜವಾಬ್ದಾರಿ ಜನತೆ ಹಾಗೂ ಸರ್ಕಾರದ ಹೊಣೆಯಾಗಿದೆ ಎಂದು ಅಭಿಮತಿಸಬಹುದು.

ವಿಶೇಷ ಅಂಕಣ – ಜ್ಯೋತಿ,ಜಿ ಮೈಸೂರು (ಉಪನ್ಯಾಸಕಿ,ಸಾಮಾಜಿಕ ಹೋರಾಟಗಾರ್ತಿ

Leave a Reply

Your email address will not be published. Required fields are marked *