ನೇಪಾಳದ ಕಟ್ಮಂಡುವಿನಲ್ಲಿ ನಡೆಯಲಿರುವ 7ನೇ ಅಂತರಾಷ್ಟ್ರೀಯ ಮಟ್ಟಕ್ಕೆ ಗ್ರಾಮೀಣ ಪ್ರತಿಭೆ…..

Spread the love

ನೇಪಾಳದ ಕಟ್ಮಂಡುವಿನಲ್ಲಿ ನಡೆಯಲಿರುವ 7ನೇ ಅಂತರಾಷ್ಟ್ರೀಯ ಮಟ್ಟಕ್ಕೆ ಗ್ರಾಮೀಣ ಪ್ರತಿಭೆ…..

ಗ್ರಾಮೀಣ ಪ್ರತಿಭೆಗಳು ಸಾಧನೆಯ ಹಾದಿಯಲ್ಲಿ ಸಾಗಿದರೆ ಅವಕಾಶಗಳು ತಾನಾಗಿಯೇ ಒದಗಿ ಬರುತ್ತವೆ ಎನ್ನುವುದಕ್ಕೆ ಮೆಹಬೂಬಿ ಶೇಟಸಂಧಿ ಸಾಕ್ಷಿ. ನೇಪಾಳದ ಕಟ್ಮಂಡುವಿನಲ್ಲಿ ನಡೆಯಲಿರುವ ಏಳನೇ ಅಂತರಾಷ್ಟ್ರೀಯ ಸೌತ್ ಏಷ್ಯಾ ಅಟ್ಯಾ ಪಟ್ಯಾ ಚಾಂಪಿಯನಶಿಪಗೆ ಯಲಬುರ್ಗಾ ಹಾಗೂ ಕುಕನೂರ್ ತಾಲೂಕ ಇಟಗಿ ಗ್ರಾಮದ ಮೆಹಬೂಬಿ ಸನದಿ ಆಯ್ಕೆಯಾಗಿದ್ದಕ್ಕೆ ಯಲಬುರ್ಗಾ ತಾಲೂಕ್ ಮಾಜಿ ಸೈನಿಕರ ಸಂಘದಿಂದ ಸನ್ಮಾನಿಸಿ ಬೀಳ್ಕೊಡಲಾಯಿತು. ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದ ಬಳಿ ಯಲಬುರ್ಗಾ ತಾಲೂಕು ಮಾಜಿ ಸೈನಿಕರ ಸಂಘದ ಗೌರವಾಧ್ಯಕ್ಷರಾದ ಶಿವನಗೌಡ ಬನಪ್ಪ ಗೌಡರು ಮಾತನಾಡಿ ಮಾಜಿ ಸೈನಿಕರಾದ ಗೌಸುಸಾಬ  ಸನದಿಯವರ ಮಗಳು ಮೆಹಬೂಬಿ ಸನದಿ ಅಂತರಾಷ್ಟ್ರೀಯ ಅಟ್ಯಾಪಟ್ಯಾ  ಕ್ರೀಡೆಗೆ ಆಯ್ಕೆಯಾಗಿ ಕಠ್ಮಂಡುವಿಗೆ ಹೋಗುತ್ತಿರುವುದು ತುಂಬಾ ಸಂತೋಷದ ವಿಷಯ. ಅಟ್ಯಾಪಟ್ಯಾ ಕ್ರೀಡೆಯಲ್ಲಿ ಗೆಲವು ಸಾಧಿಸಿ ದೇಶಕ್ಕೆ ಕೀರ್ತಿ ತರಲಿ ಎಂದು ಹಾರೈಸಿದರು. ಇಟಗಿ ಗ್ರಾಮದ ಮಾಜಿ ಸೈನಿಕರಾದ ಗೌಸುಸಾಬ್ ಶೇಕ್ ಸನದಿ ಅವರ ಮಗ…ಕೋಟಾ. ನನಗೆ ಚಿಕ್ಕಂದಿನಿಂದಲೂ ಕ್ರೀಡೆಯಲ್ಲಿ ಹೆಚ್ಚು ಆಸಕ್ತಿ, ನಾನು ಏಳನೇ ತರಗತಿಯಲ್ಲಿರುವಾಗ ನನ್ನ ಕ್ರೀಡಾ ಪ್ರತಿಭೆಯನ್ನು ಗುರುತಿಸಿದ ರಫೀಕ ರೇವಡಿಗಾರ ಗುರುಗಳು ನನಗೆ ಅಟ್ಯಾ-ಪಟ್ಯಾ ಕ್ರೀಡೆಯ ಕುರಿತು ಮಾರ್ಗದರ್ಶನ ಮಾಡುತ್ತಾ ಬರುವ ಮೂಲಕ ನನ್ನ 11 ಬಾರಿ ರಾಷ್ಟ್ರೀಯ ಕ್ರೀಡೆಯಲ್ಲಿ ಭಾಗವಹಿಸುವಂತೆ ಮಾಡಿದ್ದಾರೆ. ಈಗ ಸೌತ್ ಏಷಿಯಾ ಕ್ರೀಡೆಗೆ ಆಯ್ಕೆಯಾಗಿದ್ದೇನೆ. ಮುಂದೆ ಕಟ್ಕಂಡುವಿನಲ್ಲಿ ನಡೆಯಲಿರುವ 7ನೇ ಚಾಂಪಿಯನ್‌ಶಿಪ್‌ನಲ್ಲಿ ಜಯಿಸುವ ಮೂಲಕ ಭಾರತಕ್ಕೆ, ಕರ್ನಾಟಕಕ್ಕೆ ಹಾಗೂ ನನಗೆ ತರಬೇತಿ ನೀಡಿದ ಗುರುಗಳ ಗೌರವ ಹೆಚ್ಚಿಸುತ್ತೇನೆ.• ಮಹಬೂಬಿ ಶೇಟಸಂಧಿ ಕ್ರೀಡಾಪಟು.

ವರದಿ – ಹುಸೇನಬಾಷ ಮೋತೆಖಾನ್

Leave a Reply

Your email address will not be published. Required fields are marked *