ಆಮ್ ಆದ್ಮಿ ಪಾರ್ಟಿ ಗಂಗಾವತಿ ಘಟಕದಿಂದ ವಿಜಯನಗರ ಸಾಮ್ರಾಜ್ಯದ ಮೂಲ ಸ್ಥಳವಾದ ಆನೆಗುಂದಿಯಲ್ಲಿ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಜಿ ಅವರ ಜಯಂತಿಯನ್ನು ಅಚರಿಸಲಾಯಿತು.

Spread the love

ಆಮ್ ಆದ್ಮಿ ಪಾರ್ಟಿ ಗಂಗಾವತಿ ಘಟಕದಿಂದ ವಿಜಯನಗರ ಸಾಮ್ರಾಜ್ಯದ ಮೂಲ ಸ್ಥಳವಾದ ಆನೆಗುಂದಿಯಲ್ಲಿ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಜಿ ಅವರ ಜಯಂತಿಯನ್ನು ಅಚರಿಸಲಾಯಿತು.

ಆಮ್ ಆದ್ಮಿ ಪಾರ್ಟಿ ಗಂಗಾವತಿ ಘಟಕದಿಂದ ವಿಜಯನಗರ ಸಾಮ್ರಾಜ್ಯದ ಮೂಲ ಸ್ಥಳವಾದ ಆನೆಗುಂದಿಯ ಕೃಷ್ಣದೇವರಾಯ ವೃತ್ತದಲ್ಲಿ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಜಿ ಅವರ ಜಯಂತಿಯನ್ನು ಮಹಾತ್ಮರ ಭಾವಚಿತ್ರಗಳಿಗೆ  ಪುಷ್ಪ ಅರ್ಪಣೆ ಮಾಡುವ ಮೂಲಕ ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಜಿಲ್ಲಾಧ್ಯಕ್ಷರಾದ ಹುಸೇನ್ ಸಾಬ್ ಗಂಗನಾಳರವರು ಮಾತನಾಡಿ ಮಹಾತ್ಮ ಗಾಂಧೀಜಿಯವರ ಸತ್ಯ ,ಅಹಿಂಸೆ ಮತ್ತು ಸತ್ಯಾಗ್ರಹದಂತ ಹೋರಾಟದ ಕಿಚ್ಚು ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಆದರ್ಶ ಗಳನ್ನು ಪಕ್ಷದ ಕಾರ್ಯಕರ್ತರುಗಳು ರೂಢಿಸಿಕೊಂಡು ಸಮಾಜದ ಭ್ರಷ್ಟಾಚಾರವನ್ನು ತೊಡೆದು ಹಾಕಬೇಕು ಎಂದು ನುಡಿದರು. ತಾಲೂಕ ಅಧ್ಯಕ್ಷರಾದ ಶರಣಪ್ಪ ಸಜ್ಜೆ ಹೊಲ ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಗಾಂಧೀಜಿಯವರ ಹೋರಾಟದ ಕಿಚ್ಚು ,ಧೈರ್ಯ ,ಪರಿಶ್ರಮ ,ಸತ್ಯ, ಅಹಿಂಸೆ ಮುಂತಾದ ತತ್ವಗಳನ್ನು ಮತ್ತು ಶಾಸ್ತ್ರಿಜಿಯವರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಉದ್ದೇಶದಿಂದಲೇ ಈ ಮಹಾತ್ಮರ ಜಯಂತಿಗಳನ್ನು ಆಚರಿಸಲಾಗುತ್ತದೆ. ಈ ಜಯಂತಿಗಳನ್ನು ಸಾರ್ಥಕವಾಗಿಸಿಕೊಳ್ಳಲು ನಾವುಗಳೆ ಮಹಾತ್ಮ ಗಾಂಧೀಜಿ ಮತ್ತು ಶಾಸ್ತ್ರಿಜಿಗಳಂತಾಗಬೇಕು ಎಂದು ನುಡಿದರು. ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷರಾದ ಬಸವರಾಜ ಮ್ಯಾಗಳ ಮನೆ ಮಾತನಾಡುತ್ತಾ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಜಿಯವರ ಜೀವನ ಮತ್ತು ಸಾಧನೆಗಳನ್ನು ಬಣ್ಣಿಸಿದರು. ಜಿಲ್ಲಾ ಸಂಘಟನಾ ಕಾರ್ಯದರ್ಶಿ ಚನ್ನಬಸವ ಜೆ ಕಿನ್ ಹಾಗೂ ಜಿಲ್ಲಾ ಪದಾಧಿಕಾರಿ ಎಂಕೆ ಸಾಹೇಬ್ ಮತ್ತು ನಗರ ಘಟಕ ಅಧ್ಯಕ್ಷ ಪರಶುರಾಮ್ ಒಡೆಯರ್, ಗ್ರಾಮ ಪಂಚಾಯತ್ ಸದಸ್ಯರಾದ ಮಲ್ಲಿಕಾರ್ಜುನ ಸ್ವಾಮಿ, ಇತರರು ಮಾತನಾಡಿದರು. ಕಾರ್ಯಕ್ರಮದ ನಂತರದಲ್ಲಿ ಆನೆಗುಂದಿಯ ಜನಪರ ಹೋರಾಟಗಾರರು ಮತ್ತು ರುದ್ರ ಭೂಮಿಗಾಗಿ 40 ವರ್ಷಗಳಿಂದ ಹೋರಾಟ ಮಾಡುತ್ತಿರುವ ಶ್ರೀ ನಿಜಗುಣಪ್ಪ ಹಾಗೂ ಮಾಜಿ ಸೈನಿಕರಾದ ಬಸವರಾಜ್ ಕಟಾಂಬ್ಲಿ  ಇವರನ್ನು ಸನ್ಮಾನಿಸಲಾಯಿತು. ವಿಕ್ರಂ ಇವರು ಕ್ರಾಂತಿ ಗೀತೆಯನ್ನು ಹಾಡಿ ಸ್ಪೂರ್ತಿ ತುಂಬಿದರೆ ಕಾರ್ಯಕ್ರಮವನ್ನು ರಾಘವೇಂದ್ರ ಸಿದ್ದಿಕೇರಿ ನಿರೂಪಿಸಿದರು. ವೇದಿಕೆ ಮೇಲೆ ಇತರರಾದ ಮಹಿಳಾ ಘಟಕದ ಅಧ್ಯಕ್ಷೆ ರೇಣುಕ ಬಸವರಾಜ್, ಪಂಚಾಯತ್ ಸದಸ್ಯ ವೆಂಕಟೇಶ್, ಯುವ ಘಟಕದ ಅಧ್ಯಕ್ಷ ಹನುಮೇಶ ನಾಯಕ್ ಇದ್ದರು.

ವರದಿ – ಸೋಮನಾಥ ಹೆಚ್.ಎಮ್.

Leave a Reply

Your email address will not be published. Required fields are marked *