Blog

ಎಐಟಿಯುಸಿ ಸಂಘಟನೆಗೆ ನೂರಾರು ವರ್ಷಗಳ ಇತಿಹಾಸ ಇದೆ – ಬಸವರಾಜ್ ಶೀಲವಂತರ್.

Spread the love

ಎಐಟಿಯುಸಿ ಸಂಘಟನೆಗೆ ನೂರಾರು ವರ್ಷಗಳ ಇತಿಹಾಸ ಇದೆ – ಬಸವರಾಜ್ ಶೀಲವಂತರ್.

ಕೊಪ್ಪಳ : ಎಐಟಿಯುಸಿ ಸಂಘಟನೆಗೆ ನೂರಾರು ವರ್ಷಗಳ ಇತಿಹಾಸ ಇದೆ ಎಂದು ಅಖಿಲ ಭಾರತ ಕಾರ್ಮಿಕ ಸಂಘಟನೆಗಳ ಒಕ್ಕೂಟದ ಜಿಲ್ಲಾ ಅಧ್ಯಕ್ಷ ಬಸವರಾಜ್ ಶೀಲವಂತರ್ ಹೇಳಿದರು.

ಕೊಪ್ಪಳದ ಭಾಗ್ಯನಗರದಲ್ಲಿ ಶ್ರೀ ಮರಿಯಮ್ಮ ದೇವಿ ಕಟ್ಟಡ ಕಾರ್ಮಿಕರ ಮತ್ತು ಇತರೆ ಕಾರ್ಮಿಕರ ಹಿತರಕ್ಷಣಾ ಸಂಘ ರಿ. (ಎಐಟಿಯುಸಿ ಸಂಯೋಜಿತ)ದ ನೇತ್ರತ್ವದಲ್ಲಿ ಬುಧವಾರ ವಿಶ್ವ ಕಾರ್ಮಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬಸವರಾಜ್ ಶೀಲವಂತರ್ ಮುಂದುವರೆದು ಮಾತನಾಡಿ ಎಐಟಿಯುಸಿ

ಇದು ಯಾರನ್ನು ಕೇಳಿ ಪಡೆದಿರುವಂಥದ್ದಲ್ಲ, ಅದಕ್ಕೆ ಸಾಕಷ್ಟು ಜನ ತಮ್ಮ ಜೀವವನ್ನು ಸಮರ್ಪಿಸಿಕೊಂಡಿದ್ದಾರೆ. ಅವತ್ತು ಕಾರ್ಮಿಕರ ಬದುಕನ್ನು ಕಟ್ಟಿಕೊಡುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆದವು ಆದರೆ ಇಂದು ಕಾರ್ಮಿಕ ವಿರೋಧಿ ಸರ್ಕಾರಗಳು ಆಡಳಿತವನ್ನು ನಡೆಸುತ್ತಿರುವುದರಿಂದ ಕಾರ್ಮಿಕರ ಹಕ್ಕುಗಳನ್ನು. ಕಾರ್ಮಿಕರ ಕಾನೂನುಗಳನ್ನು ಸರ್ವನಾಶ ಮಾಡುವಂಥ ಪ್ರಯತ್ನಗಳು ನಡೆಯುತ್ತಿದೆ. ಇದನ್ನು ತಡೆಯುವುದಕ್ಕೆ ನಾವು ಗಳೆಲ್ಲ ಜನ ವಿರೋಧಿ ಸರ್ಕಾರಗಳ ವಿರುದ್ಧ ನಿರಂತರವಾಗಿ ಹೋರಾಟಗಳನ್ನು ಕಟ್ಟಬೇಕಾಗುತ್ತದೆ. ಪ್ರಸ್ತುತ ಸಂದರ್ಭದಲ್ಲಿ ಲೋಕಸಭೆಯ ಚುನಾವಣೆ ವೇಳೆ ಮತದಾನವನ್ನು ಮಾಡುವಾಗ ನಾವುಗಳು ಬಹಳ ಎಚ್ಚರಿಕೆಯಿಂದ ಮತವನ್ನು ಚಲಾಯಿಸಿ. ಬಿಜೆಪಿ ಅಂಥಹ ಕೋಮುವಾದಿ ಪಕ್ಷಗಳನ್ನು ಅಧಿಕಾರದಿಂದ ದೂರವಿಡಬೇಕು.ಅವರುಗಳು ಸಂವಿಧಾನ ಮತ್ತು ಪ್ರಜಾಪ್ರಭುತ್ವದ ವಿರೋಧಿಗಳಾಗಿರುವುದರಿಂದ ಮತ್ತೆ ಇವರು ಅಧಿಕಾರಕ್ಕೆ ಬಂದದ್ದೇ ಆದರೆ ದೇಶಕ್ಕೆ ದೊಡ್ಡ ಅಪಾಯ ಎದುರಾಗಲಿದೆ. ಜನ ಪರವಾಗಿ ಆಡಳಿತ ನಡೆಸಬಹುದಾದ ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟಕ್ಕೆ ನಾವುಗಳು ಮತವನ್ನು ಚಲಾಯಿಸಬೇಕಿದೆ. ಕಾಂಗ್ರೆಸನವರು ಕಳೆದ ಬಾರಿ ತಮ್ಮ ಪ್ರಣಾಳಿಕೆಯಲ್ಲಿ ಹೇಳಿರುವಂತೆ ಐದು ಗ್ಯಾರಂಟಿಗಳನ್ನು ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಜಾರಿ ಮಾಡಿರುವುದು ನಮಗೆಲ್ಲ ಗೊತ್ತಿರುವ ಸಂಗತಿ. ಹೀಗಾಗಿ ಯಾರು ಜನರ. ಸಂವಿಧಾನ. ಪ್ರಜಾಪ್ರಭುತ್ವದ ಪರವಾಗಿ ಅಧಿಕಾರವನ್ನು ನಡೆಸಬಲ್ಲರು ಅವರನ್ನು ನಾವು ಕೇಂದ್ರದಲ್ಲಿ ಅಧಿಕಾರಕ್ಕೆ ತರಬೇಕಿದೆ ಎಂದು ಹೇಳಿದರು.

ಇನ್ನೊಬ್ಬ ಅತಿಥಿಯಾಗಿದ್ದ ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಜಿಲ್ಲಾ ಸಂಚಾಲಕ ಎಸ್.ಎ. ಗಫಾರ್ ಮಾತನಾಡಿ ವಿಶ್ವದಲ್ಲಿ ಕಾರ್ಮಿಕರು ಬೆಳಿಗ್ಗೆ ಸೂರ್ಯ ಉದಯಕ್ಕಿಂತ ಮುಂಚೆ ಹೋಗಿ ಸೂರ್ಯ ಮುಳುಗಿದ ನಂತರ ಕೆಲಸದಿಂದ ಮನೆಗೆ ಬರಬೇಕಾದಂತಹ ಜೀತ ಪದ್ಧತಿಯಂತೆ ನಡೆಯುತ್ತಿತ್ತು. ಆಗ ಮಾರ್ಕ್ಸ್. ಲೆನಿನ್ ನಂತವರು ಹಳ್ಳಿಯ ಬೀದಿಗಳ ಹರಟೆ ಕಟ್ಟೆಗಳಲ್ಲಿ ಜೀತ ದಂತೆ ದುಡಿಯುತ್ತಿರುವ ಕಾರ್ಮಿಕರಿಗೆ ಸೇರಿಸಿ ನಿರಂತರ ಜಾಗೃತಿ ಸಭೆಗಳನ್ನು ನಡೆಸಿ ಬಂಡವಾಳ ಶಾಹಿಗಳ ವಿರುದ್ಧ ಹೋರಾಟಕ್ಕೆ ಕರೆಕೊಟ್ಟರು. ಚಿಕಾಗೋ ದಲ್ಲಿ ಬಹುದೊಡ್ಡ ಹೋರಾಟ ನಡೆಸಿದರು.ಅಧಿಕಾರಸ್ಥರು ನಡೆಸಿದ ಅಪಾಯಕಾರಿ ದಾಳಿಗಳಿಗೆ ಒಳಗಾಗಿ ಕಾರ್ಮಿಕರು ರಕ್ತಸಿಕ್ತಗೊಂಡು ರಸ್ತೆ ಚರಂಡಿಗಳಲ್ಲಿ ಹರಿಯುತ್ತಿರುವ ರಕ್ತದಲ್ಲಿ ಬಟ್ಟೆಗಳನ್ನು ತೊಯ್ದು ಎತ್ತಿ ಹಿಡಿದಿದ್ದು.ಕೆಂಪು ಧ್ವಜದ ಸಂಕೇತ. ಇಂದು ವಿಶ್ವದಲ್ಲಿ ಕಾರ್ಮಿಕರಿಗೆ ಎಂಟು ತಾಸು ಕೆಲಸ. ವಾರದ ರಜೆ ಇನ್ನಿತರ ಸೌಲಭ್ಯಗಳನ್ನು ಸಿಗುತ್ತಿದ್ದರೆ ಅದು ಅನೇಕ ಕಾರ್ಮಿಕರು ಅಧಿಕಾರಸ್ಥರ ಬಲಪ್ರಯೋಗಕ್ಕೆ ಜೀವಗಳನ್ನು ಬಲಿಕೊಟ್ಟಿದ್ದರ ಪರಿಣಾಮ ಹೀಗಾಗಿ ಅಂದಿನ ಕಾರ್ಮಿಕರಿಗೆ ಸ್ಮರಿಸಬೇಕಾಗಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ಮರಿಯಮ್ಮ ದೇವಿ ಕಟ್ಟಡ ಕಾರ್ಮಿಕರ ಮತ್ತು ಇತರೆ ಕಾರ್ಮಿಕರ ಹಿತರಕ್ಷಣಾ ಸಂಘ ರಿ. (ಎಐಟಿಯುಸಿ ಸಂಯೋಜಿತ)ದ ಅಧ್ಯಕ್ಷ ಮೌಲಾ ಸಾಬ್ ಕಪಾಲಿ ಮಾತನಾಡಿದರು.

ವೇದಿಕೆ ಮೇಲೆ ಮುಖಂಡರಾದ ಗೈಬು ಸಾಬ್ ಮಾಳೆಕೊಪ್ಪ. ಜಗದೀಶ್ ಕಟ್ಟಿಮನಿ. ಹನುಮಂತ ವಡ್ಡರ್. ರಾಮಣ್ಣ ಗುಡಿ. ರಾಘು. ಅನಿಲ್ ಬಾಚಾ ಮುಂತಾದವರು ಉಪಸ್ಥಿತರಿದ್ದರು. ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಜಿಲ್ಲಾ ಸಂಘಟನಾ ಸಂಚಾಲಕ ತುಕಾರಾಮ್ ಬಿ. ಪಾತ್ರೋಟಿ ಸ್ವಾಗತಿಸಿ. ನಿರೋಪಿಸಿದರು. ಕೊನೆಯಲ್ಲಿ ಪ್ರಸಾದ್ ಕಾಳೆ ವಂದಿಸಿದರು. ವಿಶೇಷ ವರದಿ-ಎಸ್.ಎ.ಗಪೂರ್.