ಸರ್ಕಾರಿ ವೈದ್ಯಕೀಯ ಮಾಸಾಶನದ ಪ್ರಮಾಣ ಪತ್ರ ಪಡೇಯುವದಕ್ಕಾಗಿ ಸರ್ಕಾರಿ ಕಚೇರಿಗೆ ಅಲೇದು ಬೆಸತ್ತು, ಶಿವಮೊಗ್ಗ ಜಿಲ್ಲೆಯ ಸಕ್ಷಮ ಸಂಸ್ಥೆಗೆ ಬೇಟೆ  ನೀಡಿ ನೇರವು ಕೋರಿದ ಕುಟುಂಬ.

Spread the love

19/04/2024 ಶುಕ್ರವಾರ ಈ ದಿನ ತುಪ್ಪೂರು ಗ್ರಾಮ, ಚೋರಡಿ ಶಿವಮೊಗ್ಗ ತಾಲ್ಲೂಕಿನಿಂದ ಮಂಜುಳ W/O  ನಾಗೇಶ್ ಎಂಬುವವರು ಶಿವಮೊಗ್ಗ ಜಿಲ್ಲೆಯ ಸಕ್ಷಮ ಸಂಸ್ಥೆಗೆ ಬೇಟೆ ನೀಡಿ. ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ನನ್ನ ಮಗನಾದ ಅರುಣ.N ಇವನಿಗೆ ಸುಮಾರು 8ವರ್ಷಗಳ ಹಿಂದೆ ಶಾಲೆಗೆ ಹೋಗುವ ದಾರಿಯಲ್ಲಿ ಅಪಘಾತವಾಗಿದ್ದು.ಈ ಅಪಘಾತದಲ್ಲಿ ನನ್ನ ಮಗನ ತಲೆಯ ಭಾಗಕ್ಕೆ ಹಾಗೂ ಎಡಗಾಲಿಗೆ ತೀರ್ವ ಪೆಟ್ಟಾಗಿ ಎಡಗಾಲಿನಿಂದ ಸರಿಯಾಗಿ ನಡೆಯಲು ಬರುವುದಿಲ್ಲ. ಜೊತೆಯಲ್ಲಿ ತಲೆಯ ಭಾಗಕ್ಕೂ ಸಹ ತುಂಬಾ ಪೆಟ್ಟಾದ ಕಾರಣದಿಂದ ಅಷ್ಟಾಗಿ ಮಾಡಲು ಸಹ ಕಷ್ಟ ಪಡುತ್ತಿದ್ದಾನೆ.ಸರ್ಕಾರದಿಂದ ಮಾನ್ಯತೆ ಪಡೆದಂತಹ UDID ಕಾರ್ಡನ್ನು ಮಾಡಿಸಲು ಸರ್ಕಾರಿ ಹಾಸ್ಪಿಟಲ್ ಗೆ ಓಡಾಡೋದೆ ಆಗಿದೆ ಹೊರತು ನಮಗೆ ಸರಿಯಾದ ಮಾಹಿತಿಯನ್ನು ಯಾರು ಕೋಡುತ್ತಿಲ್ಲ ಸರ್.ತಮ್ಮ ಈ ಸಂಸ್ಥೆಯ ಬಗ್ಗೆ ಕೆಲವರಿಂದ ಮಾಹಿತಿಯನ್ನು ಪಡೆದು ನನ್ನ ಮಗನನ್ನು ಇಲ್ಲಿಗೆ ಕರೆದುಕೊಂಡು ಬಂದಿದ್ದೇನೆ ಸರ್.ದಯವಿಟ್ಟು ನಮ್ಮ ಮಗನಿಗೆ ವೈದ್ಯಕೀಯ ಮಾಸಾಶನದ ಪ್ರಮಾಣ ಪತ್ರವನ್ನು ಮಾಡಿಸಿಕೋಟ್ಟು ಅವನ ಮುಂದಿನ ಜೀವನಕ್ಕೆ ಸಹಾಯವಾಗುವಂತೆ ಮಾಡಿಕೋಡಬೇಕ್ಕಾಗಿ ವಿನಂತಿಸಿಕೊಳ್ಳುತ್ತೇವೆ ಎಂದು ಮನವಿಯನ್ನು ಸಲ್ಲಿಸಿದರು. ಈ ಮನವಿಯನ್ನು ಸ್ವೀಕರಿಸಿ ಸಂಬಂಧಿಸಿದಂತ ವೈದ್ಯರ ಬಳಿ ತಿಳಿಸಿ ತಮಗೆ ವ್ಯವಸ್ಥೆಯನ್ನು ಮಾಡಿಸಿಕೋಡುವುದಾಗಿ ತಿಳಿಸಲಾಯಿತು.

ವರದಿ-ಉಪಳೇಶ ವಿ.ನಾರಿನಾಳ

Leave a Reply

Your email address will not be published. Required fields are marked *